ಜಾಮೀನು ಅರ್ಜಿ ವಜಾ; ರೇವಣ್ಣ ಬಂಧನವಾಗೋದು ಪಕ್ಕಾನಾ..?
ಬೆಂಗಳೂರು; ಮಾಜಿ ಸಚಿವ ರೇವಣ್ಣ ಅವರಿಗೆ ಬಂಧನದ ಭೀತಿ ಎದುರಾಗಿದೆ.. ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನ ಜನಪ್ರತಿನಿಧಿಗಳ ಕೋರ್ಟ್ ವಜಾ ಮಾಡಿದ್ದು, ರೇವಣ್ಣಗೆ ಸಂಕಷ್ಟ ತಂದೊಡ್ಡಿದೆ..
ರೇವಣ್ಣ ವಿರುದ್ಧ ಒಂದು ಕಿಡ್ನ್ಯಾಪ್ ಕೇಸ್ ಹಾಗೂ ಮತ್ತೊಂದು ಲೈಂಗಿಕ ದೌರ್ಜನ್ಯದ ಕೇಸ್ ಇದೆ.. ಎರಡೂ ಕೇಸ್ ಗಳ ಹಿನ್ನೆಲೆಯಲ್ಲಿ ರೇವಣ್ಣಗೆ ಕಾನೂನು ಕಂಟಕ ಎದುರಾಗಿದೆ.. ಯಾವುದೇ ಕ್ಷಣದಲ್ಲಿ ರೇವಣ್ಣ ಬಂಧನವಾಗುವ ಸಾಧ್ಯತೆ ಇದೆ..
ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ವಾದ ಮಂಡಿಸಿದ ರೇವಣ್ಣ ಪರ ವಕೀಲ, ಆರೋಪಿ ಮುಗ್ಧ ಎಂದು ಸಾಬೀತುಮಾಡಲು ಅವಕಾಶ ನೀಡಬೇಕು. ಈ ಕಾರಣಕ್ಕಾಗಿಯೇ ಹೆಚ್.ಡಿ.ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಬೇಕು. ನ್ಯಾಯಾಧೀಶರೂ ಪೂರ್ವಾಗ್ರಹವಿಲ್ಲದೇ ನಿರೀಕ್ಷಣಾ ಜಾಮೀನು ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಆದರೆ ಇದಕ್ಕೆ ನ್ಯಾಯಾಧೀಶರು ಮನ್ನಣೆ ಕೊಡಲಿಲ್ಲ..