BengaluruPolitics

3 ಸಹಕಾರಿ ಬ್ಯಾಂಕ್‌ಗಳ ಹಗರಣ; ಪ್ರಿಯಾಂಕಾಗಾಂಧಿ ಭೇಟಿಯಾದ ಸೌಮ್ಯಾರೆಡ್ಡಿ ನಿಯೋಗ

ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್, ಗುರು ಸಾರ್ವಭೌಮ ಬ್ಯಾಂಕ್ ಹಾಗೂ ವಸಿಷ್ಠ ಸಹಕಾರಿ ಬ್ಯಾಂಕುಗಳ 3200 ಕೋಟಿ ರೂಪಾಯಿ ಹಗರಣ ನಡೆದಿರುವುದು ಗೊತ್ತೇ ಇದೆ.. ಈ ಹಗರಣ ಸಂಬಂಧ ಈ ಮೂರೂ ಬ್ಯಾಂಕ್‌ಗಳ ಠೇವಣಿದಾರರು, ಕಾಂಗ್ರೆಸ್ ಮುಖಂಡ ಡಾ.ಶಂಕರ್‌ ಗುಹಾ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸೌಮ್ಯಾ ರೆಡ್ಡಿ ನೇತೃತ್ವದ ನಿಯೋಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿದೆ.. ನಮಗೆ ಸಾಕಷ್ಟು ಅನ್ಯಾಯವಾಗಿದ್ದು, ಇದರ ವಿರುದ್ಧ ರಾಷ್ಟ್ರಮಟ್ಟದಲ್ಲಿ ಧ್ವನಿ ಎತ್ತುವಂತೆ ಪ್ರಿಯಾಂಕಾಗಾಂಧಿಯವರಿಗೆ ಮನವಿ ಮಾಡಲಾಗಿದೆ..

ಈ‌ ಪ್ರಕರಣವನ್ನು 6 ತಿಂಗಳುಗಳ ಹಿಂದೆಯೇ ಸಿಬಿಐ ತನಿಖೆಗೆ ವಹಿಸಲಾಗಿದೆ.. ಆದ್ರೆ ಬಿಜೆಪಿಯ ಸಂಸದ ಹಾಗೂ ಸ್ಥಳೀಯ ಶಾಸಕರು ತನಿಖಾಧಿಕಾರಿಯನ್ನೇ ನೇಮಿಸದಂತೆ ಪ್ರಭಾವ ಬಳಸಿದ್ದಾರೆ..  ಈ ಪ್ರಕರಣಕ್ಕೆ ವಿಶೇಷ ತನಿಖಾ ದಳ ನೇಮಿಸಿ ನಮಗೆ ನ್ಯಾಯ ಒದಗಿಸಲು ಹೋರಾಟ ಮಾಡಬೇಕೆಂದು ಪ್ರಿಯಾಂಕಾ ಗಾಂಧಿಯವರಿಗೆ ಮನವಿ ಮಾಡಲಾಗಿದೆ..

ಈ ಹಗರಣದಲ್ಲಿ ಬಿಜೆಪಿಯ ಕೆಲ ಜನಪ್ರತಿನಿಧಿಗಳೇ ಶಾಮೀಲಾಗಿದ್ದಾರೆ.. ಹೀಗಾಗಿ, ಅವರ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ.. ಹೀಗಾಗಿ, ಕೇಂದ್ರದಲ್ಲಿ ಹೋರಾಟ ಮಾಡಿ, ಠೇವಣಿದಾರರ ಹಣ ವಾಪಸ್‌ ಬರುವಂತೆ ಮಾಡಬೇಕೆಂದು ಪ್ರಿಯಾಂಕಾಗಾಂಧಿಗೆ ಮನವಿ ಮಾಡಲಾಗಿದೆ.. ಇದಕ್ಕೆ ಸ್ಪಂದಿಸಿರುವ ಪ್ರಿಯಾಂಕಾ ಗಾಂಧಿ, ಸಿಬಿಐನಿಂದ ನ್ಯಾಯ ಸಿಗದಿದ್ದರೆ, ರಾಜ್ಯ ಸರ್ಕಾರವೇ ವಿಶೇಷ ತನಿಖಾ ತಂಡ ರಚಿಸಿ ನ್ಯಾಯ ಒದಗಿಸುವಂತೆ ಸಿಎಂಗೆ ತಿಳಿಸುತ್ತೇನೆ ಎಂದು ಪ್ರಿಯಾಂಕಾಗಾಂಧಿ ಹೇಳಿದ್ದಾರೆ..

ಗುರುರಾಘವೇಂದ್ರ ಸಹಕಾರಿ ಬ್ಯಾಂಕ್, ವಸಿಷ್ಠ ಸಹಕಾರಿ ಬ್ಯಾಂಕ್ ಗಳಲ್ಲಿ 3 ಲಕ್ಷ ಠೇವಣಿದಾರರು ಮೋಸ ಹೋಗಿದ್ದು, ಇದರಲ್ಲಿ 300 ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದಾರೆ. ರೂ.3200 ಕೋಟಿ ಹಗರಣ ಇದಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಈ ವಿಚಾರವಾಗಿ ಹೋರಾಟ ಮಾಡಿದ್ದರು.

 

Share Post