BengaluruTechTechnology

ಕೊನೆಗೂ ಸರಿಹೋಯ್ತು ವಾಟ್ಸಾಪ್‌; ಗ್ರಾಹಕರು ನಿರಾಳ

ಬೆಂಗಳೂರು; ಕೊನೆಗೂ ವಾಟ್ಸಾಪ್‌ ಸೇವೆಗಳು ಪುನಾರಂಭವಾಗಿವೆ. ಸರ್ವರ್‌ ಸಮಸ್ಯೆಯಿಂದಾಗಿ ವಿಶ್ವದಾದ್ಯಂತ ವಾಟ್ಸಾಪ್‌ ನಲ್ಲಿ ಮೆಸೇಜ್‌ ಕಳುಹಿಸಲು, ಸ್ವೀಕರಿಸಲು ಆಗುತ್ತಿರಲಿಲ್ಲ. ಎರಡು ಗಂಟೆಗಳ ನಂತರ ಈಗ ವಾಟ್ಸಾಪ್‌ ಸಹಜವಾಗಿ ವರ್ಕ್‌ ಆಗುತ್ತಿದೆ.

ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ವಾಟ್ಸಾಪ್‌ ಸೇವೆಗಳು ಪುನಾರಂಭವಾಗಿವೆ ಎಂದು ಮೆಟಾ  ಹೇಳಿಕೊಂಡಿದೆ. ಮಧ್ಯಾಹ್ನ 12.30ರಿಂದ ವಾಟ್ಸಾಪ್‌ ಬಳಕೆದಾರರು ಸಮಸ್ಯೆ ಅನುಭವಿಸಿದ್ದರು. ಕೆಲವರು ಮೊಬೈಲ್‌ ಸರಿ ಇಲ್ಲವೇನೋ ಎಂದುಕೊಂಡು ಸ್ವಿಚ್‌ ಆಫ್‌ ಮಾಡಿ ಆನ್‌ ಮಾಡಿ ನೋಡಿದ್ದರು. ಇನ್ನೂ ಕೆಲವರು ವಾಟ್ಸಾಪ್‌ ಅಪ್ಲಿಕೇಷನ್‌ ಡಿಲೀಟ್‌ ಮಾಡಿ ಮತ್ತೊಮ್ಮೆ ಡೌನ್‌ಲೋಡ್‌ ಮಾಡಿ ನೋಡಿದ್ದರು.

 

Share Post