Politics

ವಿಪಕ್ಷ ಸದಸ್ಯರ ಅಮಾನತು ಗದ್ದಲ: ಸಂಸತ್‌ ಕಲಾಪ ಮುಂದೂಡಿಕೆ

ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನದ 7ನೇ ದಿನದಂದು ಕೂಡ ವಿಪಕ್ಷಗಳ ಗದ್ದಲದಿಂದ ಕಲಾಪವನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಲಾಗಿದೆ.  12 ರಾಜ್ಯಸಭಾ ಸದಸ್ಯರನ್ನು ಅಮಾನತು ಮಾಡಿದ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಗದ್ದಲ ಉಂಟುಮಾಡಿದ್ದೇವೆಂದು ನಮ್ಮನ್ನು ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಿರುವ ಕ್ರಮವನ್ನು ನಾವು ಒಪ್ಪುವುದಿಲ್ಲ ಇದು ʻಪ್ರಜಾಪ್ರಭುತ್ವ ವಿರೋಧಿʼ ಎಂದು ಟೀಕೆ ಮಾಡಿದ್ರು, ಈ ನಡುವೆ ಅಮಾನತುಗೊಂಡ ಸದಸ್ಯರು ʻಪಶ್ಚಾತ್ತಾಪ ವ್ಯಕ್ತಪಡಿಸಿಲ್ಲʼ ಅಂತ ಸಭಾಪತಿ ವೆಂಕಯ್ಯನಾಯ್ಡು ಕಿಡಿ ಕಾರಿದ್ರು, ಇವರಿಗೆ ಧ್ವನಿಗೂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ 12ಸದಸ್ಯರು ಕ್ಷಮಾಯಾಚಿಸಿದ್ರೆ ಅಮಾನತು ವಾಪಸ್‌ ಪಡೆಯಲು ಸರ್ಕಾರ ಸಿದ್ಧವಿದೆ ಎಂದ್ರು. ಅಮಾನತನ್ನು ಗಂಭೀರವಾಗಿ ಪರಿಗಣಿಸಿದ ಸದಸ್ಯರು ವಿಪಕ್ಷ ನಾಯಕ ಮಲ್ಲಿಕಾರ್ಜುನ್‌ ಖರ್ಗೆ ನೇತೃತ್ವದಲ್ಲಿ ಮುಂದಿನ ನಡೆಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ.

 

Share Post