BusinessInternational

ಮೂರೇ ನಿಮಿಷದಲ್ಲಿ 900 ಉದ್ಯೋಗಿಗಳಿಗೆ ಗೇಟ್‌ಪಾಸ್‌; ಜೂಮ್‌ ಮೀಟ್‌ ವಿಡಿಯೋ ವೈರಲ್‌..!

ನ್ಯೂಯಾರ್ಕ್: ಬೆಟರ್‌ ಡಾಟ್‌ ಕಾಂ ಎಂಬ ಅಮೆರಿಕದ ಕಂಪನಿಯೊಂದರ ಭಾರತೀಯ ಮೂಲದ ಸಿಇಒ ಒಬ್ಬರು ಮೂರೇ ನಿಮಿಷದಲ್ಲಿ 900 ಉದ್ಯೋಗಿಗಳಿಗೆ ಗೇಟ್‌ ಪಾಸ್‌ ನೀಡಿ ಸುದ್ದಿಯಾಗಿದ್ದಾರೆ. ಜೂಮ್‌ ಮೀಟಿಂಗ್‌ನಲ್ಲಿ ಕೇವಲ ಮೂರು ನಿಮಿಷ ಮಾತನಾಡಿ, 900 ಉದ್ಯೋಗಿಗಳಿಗೆ ಪಿಂಕ್‌ ಸ್ಲಿಪ್‌ ನೀಡಿದ್ದಾರೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಬೆಟರ್ ಡಾಟ್ ಕಾಂ ನ್ಯೂಯಾರ್ಕ್ ಮೂಲದ ಅಡಮಾನ ಸಾಲ ನೀಡುವ ಸಂಸ್ಥೆಯಾಗಿದೆ. ಇದರ ಸಿಇಒ ಭಾರತೀಯ ಮೂಲದ ವಿಶಾಲ್ ಗರ್ಗ್‌. ಅಮೆರಿಕದಲ್ಲಿ ಈಗ ರಜೆ ದಿನಗಳು ಆರಂಭವಾಗುತ್ತಿವೆ. ಸುದೀರ್ಘ ರಜೆಗೂ ಮುನ್ನ ಕಂಪನಿಯಿಂದ ಏನಾದರೂ ಸೌಲಭ್ಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಉದ್ಯೋಗಿಗಳಿದ್ದರು. ಆದರೆ ಮೀಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಂತೆ ಅವರಿಗೆ ಪಿಂಕ್‌ ಸ್ಲಿಪ್‌ ಸಿಕ್ಕಿದೆ. ಈ ಮೂಲಕ ಬೆಟರ್ ಡಾಟ್ ಕಾಂ ಸಂಸ್ಥೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಶೇಕಡಾ 9 ರಷ್ಟು ತಗ್ಗಿಸಿಕೊಂಡಿದೆ. ಅಮೆರಿಕ ಮತ್ತು ಭಾರತದಲ್ಲಿ ಕಚೇರಿ ಹೊಂದಿರುವ ಈ ಸಂಸ್ಥೆಯ ಮೀಟಿಂಗ್ ವೇಳೆ ಸಿಇಒ ವಿಶಾಲ್‌ ಗರ್ಗ್‌ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ.


“ನಾನು ಸಿಹಿ ಸುದ್ದಿಯೊಂದಿಗೆ ಬಂದಿಲ್ಲ. ಇದು ನೀವು ಕೇಳಲು ಬಯಸುವ ಸುದ್ದಿ ಅಲ್ಲ. ಆದರೆ ಅಂತಿಮವಾಗಿ, ಇದು ನನ್ನ ನಿರ್ಧಾರವಾಗಿತ್ತು ಮತ್ತು ನೀವು ಅದನ್ನು ನನ್ನಿಂದ ಕೇಳಬೇಕೆಂದು ನಾನು ಬಯಸುತ್ತೇನೆ. ಇದು ನಿಜವಾಗಿಯೂ, ನಿಜವಾಗಿಯೂ ಸವಾಲಿನ ನಿರ್ಧಾರ. ನನ್ನ ವೃತ್ತಿ ಜೀವನದಲ್ಲಿ ಇದು ಎರಡನೇ ಬಾರಿಗೆ ನಾನು ಇದನ್ನು ಮಾಡುತ್ತಿದ್ದೇನೆ. ನನಗೆ ಹೀಗೆ ಮಾಡುವುದು ಇಷ್ಟವಿಲ್ಲ. ಈ ಹಿಂದೆ ನಾನು ಹೀಗೆ ಮಾಡಿದಾಗ, ನಾನು ಅಳುತ್ತಿದ್ದೆ. ಈ ಬಾರಿ ನಾನು ಹೃದಯ ಗಟ್ಟಿ ಮಾಡಿಕೊಂಡಿದ್ದೇನೆ. ಆದರೆ ನಾವು ಕಂಪನಿಯ ಸುಮಾರು ಶೇ.9 ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದೇವೆ. ಆ ದುರದೃಷ್ಟದ ಗುಂಪಿನಲ್ಲಿ ನೀವೂ ಇದ್ದೀರಿ.”

Share Post