Politics

ಬಿಎಂಟಿಸಿ ಬಸ್‌ ಚಾಲಕನ ಮೇಲೆ ಪ್ರಯಾಣಿಕನ ರೌಡಿ ದರ್ಬಾರ್‌; ಏನಾಯ್ತು ಅಲ್ಲಿ..?

ಬೆಂಗಳೂರು; ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ನಡುವೆ ಗಲಾಟೆಗಳು ನಡೆಯುವುದು ಕಾಮನ್‌.. ಆದ್ರೆ ಇಲ್ಲೊಂದು ಗಲಾಟೆ ಮಿತಿ ಮೀರಿದೆ.. ಪ್ರಯಾಣಿಕನೊಬ್ಬ ಬಿಎಂಟಿಸ್‌ ಬಸ್‌ ಡ್ರೈವರ್‌ಗೆ ಸಾರಿ ಕೇಳುವಂತೆ ಪಟ್ಟು ಹಿಡಿದು ರೌಡಿ ವರ್ತನೆ ತೋರಿದ್ದಾರೆ.. ಡ್ರೈವರ್‌ರನ್ನು ಫುಟ್‌ ಬೋರ್ಡ್‌ ಎಳೆದು ಬೀಳಿಸಿದ್ದಾನೆ.. ಅಷ್ಟು ಸಾಲದು ಎಂಬಂತೆ ದೊಡ್ಡ ಕಲ್ಲೊಂದು ಎತ್ತಿಕೊಂಡು ಧಮಕಿ ಹಾಕಿದ್ದಾನೆ.. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ..

ಇದು ಎಲ್ಲಿ ನಡೆಯಿತೋ ಗೊತ್ತಿಲ್ಲ.. ಆದ್ರೆ ಜೂನ್‌ 1 ರಂದು ಟ್ವಟಿರ್‌ನಲ್ಲಿ ಚೇತನ್‌ ಸೂರ್ಯ ಎಂಬುವವರು ಈ ವಿಡಿಯೋ ಹಂಚಿಕೊಂಡಿದ್ದಾರೆ.. ಮೇ 30ರಂದು ಫೇಸ್‌ಬುಕ್‌ನಲ್ಲಿ ಕೂಡಾ ಈ ವಿಡಿಯೋ ಹರಿದಾಡಿದೆ.. ಇದಕ್ಕೆ  ಸಂಚಾರಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.. ಘಟನೆ ನಡೆದ ಸ್ಥಳವನ್ನು ತಿಳಿಸಿ ಎಂದು ಕಮೆಂಟ್​ ಮಾಡಿದ್ದಾರೆ.

Share Post