ತೆಲಂಗಾಣ ಮತ ಎಣಿಕೆ; ಚಿಗುರಿದ ಬಿಆರ್ಎಸ್
ಹೈದರಾಬಾದ್; 119 ಸ್ಥಾನಗಳ ತೆಲಂಗಾಣ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದೆ. ಈಗಾಗಲೇ ಮೂರು ಹಂತದ ಮತ ಎಣಿಕೆ ಮುಗಿದಿದೆ. ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಕಂಡುಬರುತ್ತಿದೆ. ಆದ್ರೆ ಮೊದಲೆರಡು ರೌಂಡ್ಗಳಲ್ಲಿ ಕಾಂಗ್ರೆಸ್ ಹಾಗೂ ಬಿಆರ್ಎಸ್ ನಡುವಿನ ಮುನ್ನಡೆಯ ಅಂತರ ಜಾಸ್ತಿ ಇತ್ತು. ಆದ್ರೆ ಇದೀಗ ಬಿಆರ್ಎಸ್ ಚಿಗುರಿಕೊಳ್ಳುತ್ತಿದೆ.
ಕಾಂಗ್ರೆಸ್ ಪಕ್ಷ 61 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಆರ್ಎಸ್ 50 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಬಿಜೆಪಿ 4 ಹಾಗೂ ಎಂಐಎಂ 3 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.