NationalPolitics

4 ಕ್ಷೇತ್ರ ಜೆಡಿಎಸ್ ಗೆ ಫಿಕ್ಸ್; ಪ್ರತಾಪ ಸಿಂಹಗೆ ಢವಢವ

ನವದೆಹಲಿ; ರಾಜ್ಯದಲ್ಲಿ ಲೋಕಸಭಾ ಚುನಾವಣೆಗಾಗಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಈ ಹಿನ್ನೆಲೆ ದೇವೇಗೌಡರು ಹಾಗೂ ಅವರ ಕುಟುಂಬ ಸದಸ್ಯರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಈ ವೇಳೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆದಿದೆ. ನಾಲ್ಕು ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲಿರುವ ಬಿಜೆಪಿ, ಉಳಿದ 24 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದೆ. ಇದಕ್ಕೆ ಎರಡೂ ಕಡೆಯಿಂದ ಒಪ್ಪಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

  ಹಾಸನ, ಮಂಡ್ಯ, ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡೋದಕ್ಕೆ ಬಿಜೆಪಿ ಒಪ್ಪಿದೆ. ಇನ್ನು ಮೈಸೂರು ಅಥವಾ ತುಮಕೂರು ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ.

ತುಮಕೂರಿನಲ್ಲಿ ಕಳೆದ ಬಾರಿ ದೇವೇಗೌಡರೇ ಸೋತಿದ್ದರು. ಇನ್ನೊಂದೆಡೆ ಈ ಬಾರಿ ತುಮಕೂರು ಜಿಲ್ಲೆಯಲ್ಲಿ ಬಹುತೇಕ ಜೆಡಿಎಸ್ ನೆಲಕಚ್ಚಿದೆ. ಹಲವಾರು ನಾಯಕರು ಪಕ್ಷ ತೊರೆದಿದ್ದಾರೆ. ಹೀಗಾಗಿ ಜೆಡಿಎಸ್ ನಾಯಕರು ತುಮಕೂರು ಆಯ್ಕೆ ಮಾಡಿಕೊಳ್ಳುವುದು ಬಹುತೇಕ ಅನುಮಾನ. ಮೈಸೂರಿನಲ್ಲಿ ಜೆಡಿಎಸ್ ಗೆ ನೆಲೆ ಇದೆ. ಜೊತೆಗೆ ಜಿ.ಟಿ.ದೇವೇಗೌಡು, ಸಾರಾ ಮಹೇಶ್ ರ ಬಲವಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಆಯ್ಕೆ ಬಹುತೇಕ ಖಚಿತ ಎನ್ನಲಾಗಿದೆ. ಒಂದು ವೇಳೆ ಜೆಡಿಎಸ್ ಮೈಸೂರು ಆಯ್ಕೆ ಮಾಡಿಕೊಂಡರೆ ಪ್ರತಾಪ ಸಿಂಹಗೆ ಕ್ಷೇತ್ರವಿಲ್ಲದಂತಾಗುತ್ತದೆ.

ಇನ್ನೊಂದೆಡೆ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆಂದು ಹೇಳಲಾಗುತ್ತಿದೆ. ಬಿಜೆಪಿ ಕೂಡಾ ಇದೇ ಸಲಹೆ ನೀಡಿದೆ. ಕುಮಾರಸ್ವಾಮಿ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡುವ ಭರವಸೆಯೂ ಸಿಕ್ಕಿದೆ ಎನ್ನಲಾಗಿದೆ.

Share Post