BengaluruPolitics

ಜುಲೈ 1ಕ್ಕೆ ಅಕ್ಕಿ ಕೊಡೋದಕ್ಕೆ ಕಷ್ಟ ಆಗಬಹುದು; ಸಚಿವ ಕೆ.ಹೆಚ್‌.ಮುನಿಯಪ್ಪ

ಬೆಂಗಳೂರು; ಜುಲೈ 1ರಿಂದ ಹತ್ತು ಕೆಜಿ ಅನ್ನಭಾಗ್ಯ ಅಕ್ಕಿ ಕೊಡೋದಕ್ಕೆ ಸಾಧ್ಯವಾಗದಿರಬಹುದು. ಆದ್ರೆ ಆಗಸ್ಟ್‌ 1ರೊಳಗೆ ಅಕ್ಕಿ ಕೊಟ್ಟೇ ಕೊಡ್ತೀವಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್‌.ಮುನಿಯಪ್ಪ ಹೇಳಿದ್ದಾರೆ. ಈ ಬಗ್ಗೆ ಮತನಾಡಿದ ಅವರು, ಛತ್ತಿಸ್‌ಗಢದಿಂದ ಅಕ್ಕಿ ಬರಲಿದೆ. ಪಂಜಾಬ್‌ನವರೂ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ. ಹೀಗೆ ಅಕ್ಕಿ ಬೆಳೆಯುವ ರಾಜ್ಯಗಳಿಗೆ ಮನವಿ ಮಾಡಿದ್ದೆವು. ಅದರಂತೆ ಛತ್ತಿಸ್‌ ಗಢ ರಾಜ್ಯದವರು 1.5 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿ ನೀಡೋದಾಗಿ ಹೇಳಿದ್ದಾರೆ. ಪಂಜಾಬ್‌ ರಾಜ್ಯದವರು ಮೊದಲು ಅಕ್ಕಿ ಇಲ್ಲ ಎಂದು ಹೇಳಿದ್ದರು. ಇದೀಗ ಅಕ್ಕಿ ಕೊಡೋದಕ್ಕೆ ಅವರೂ ಒಪ್ಪಿಕೊಂಡಿದ್ದಾರೆ. ಆದ್ರೆ ಅಕ್ಕಿ ತರಿಸಿಕೊಳ್ಳುವುದಕ್ಕೆ ಸಮಯ ಬೇಕಾಗುತ್ತದೆ. ಹೀಗಾಗಿ ಜುಲೈ 1ಕ್ಕೆ ಎಲ್ಲಾ ಕಡೆ ಅಕ್ಕಿ ಪೂರೈಕೆ ಮಾಡೋದಕ್ಕೆ ಸಾಧ್ಯವಾಗದಿರಬಹುದು. ಆದ್ರೆ ಆಗಸ್ಟ್‌ 1 ರೊಳಗೆ ಎಲ್ಲರಿಗೂ ಅಕ್ಕಿ ಒದಗಿಸುತ್ತೇವೆ ಎಂದು ಸಚಿವ ಕೆ.ಹೆಚ್‌.ಮುನಿಯಪ್ಪ ತಿಳಿಸಿದ್ದಾರೆ.

Share Post