Politics

ಶಾಸಕ ಸ್ಥಾನವನ್ನು ಪಣಕ್ಕಿಡುವ ಅಧಿಕಾರ ಪ್ರದೀಪ್‌ ಈಶ್ವರ್‌ಗೆ ಕೊಟ್ಟಿದ್ದು ಯಾರು..?

ಚಿಕ್ಕಬಳ್ಳಾಪುರ; ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗಿಂತ ಒಂದು ವೋಟ್‌ ಲೀಡ್‌ ಪಡೆದರೂ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತೀನಿ… ಇದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಮಾತು.. ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಕುಳಿತು ಮಾಧ್ಯಮಗಳಿಗೆ ಕೊಟ್ಟ ಸ್ಪಷ್ಟ ಹೇಳಿಕೆ.. ಚುನಾವಣೆ ಸಮಯದಲ್ಲಿ ಕ್ರೇಜ್‌ಗೆ, ವೋಟ್‌ ಗಿಟ್ಟಿಸುವುದಕ್ಕೆ ಇಂತಹ ಹೇಳಿಕೆಗಳು ನೀಡುವುದು ಕಾಮನ್‌.. ಆದ್ರೆ ಚುನಾವಣೆ ಮುಗಿದಿದೆ.. ರಿಸಲ್ಟ್‌ಗಾಗಿ ಎಲ್ಲರೂ ಕಾಯುತ್ತಿದ್ದಾರೆ.. ಇಂತಹ ಸಮಯದಲ್ಲೂ ಪ್ರದೀಪ್‌ ಈಶ್ವರ್‌ ಇಂತಹದ್ದೊಂದು ಹೇಳಿಕೆ ಕೊಟ್ಟುಬಿಟ್ಟಿದ್ದಾರೆ.. ಹೀಗಾಗಿ ಸುಧಾಕರ್‌ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವೋಟು ಲೀಡ್‌ ಪಡೆದರೂ ಪ್ರದೀಪ್‌ ಈಶ್ವರ್‌, ಮಾತು ಉಳಿಸಿಕೊಳ್ಳಲಾದರೂ ರಾಜೀನಾಮೆ ನೀಡಬೇಕಾಗುತ್ತದೆ.. ಹೀಗಾಗಿ ಪ್ರದೀಪ್‌ ಈಶ್ವರ್‌ಗೆ ಇದೆಲ್ಲಾ ಬೇಕಿತ್ತಾ..? ಅವರಿಗೆ ಇಷ್ಟು ಧೈರ್ಯ, ಆತ್ಮವಿಶ್ವಾಸ ಬಂದಿದ್ದಾದರೂ ಹೇಗೆ..? ನಿಜವಾಗಿಯೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅಷ್ಟೊಂದು ಜನ ಬೆಂಬಲ ಇದೆಯಾ..? ಎಂಬ ಪ್ರಶ್ನೆಗಳು ಮೂಡುತ್ತವೆ..

ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಪಕ್ಷ ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಿತ್ತು… ಇತ್ತ ಮಾಜಿ ಸಚಿವ ಡಾ.ಕೆ.ಸುಧಾಕರ್‌  ಅವರನ್ನು ನಾನಾ ಕಾರಣಗಳಿಗಾಗಿ ಸೋಲಿಸಬೇಕು ಎಂದು ಜನ ತೀರ್ಮಾನ ಮಾಡಿದ್ದರು.. ಕೊನೇ ಕ್ಷಣದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌ ಸ್ಥಳೀಯ ಮುಖಂಡರೂ ಸಪೋರ್ಟ್‌ ಮಾಡಿದ್ದರು.. ಎಲ್ಲಾ ರೀತಿಯಿಂದಲೂ  ಕಾಲ ಕೂಡಿ ಬಂದಿದ್ದರಿಂದ ಪ್ರದೀಪ್‌ ಈಶ್ವರ್‌ ಗೆಲುವು ಸುಲಭವಾಯಿತು… ಇಲ್ಲದೇ ಹೋಗಿದ್ದರೆ ಡಾ.ಕೆ.ಸುಧಾಕರ್‌ ವಿರುದ್ಧ ಗೆಲ್ಲೋದೇನೂ ಸುಲಭವಾಗಿರಲಿಲ್ಲ… ಆದ್ರೆ ಲೋಕಸಭಾ ಚುನಾವಣೆ ವೇಳೆಗೆ ಪರಿಸ್ಥಿತಿ ಬದಲಾಗಿದೆ.. ಈಗ ಡಾ.ಕೆ.ಸುಧಾಕರ್‌ಗೆ ಅಷ್ಟೇನೋ ವಿರೋಧಿ ಅಲೆ ಇಲ್ಲ.. ಕಳೆದ ಬಾರಿ ಸೋಲಿಸಿದ್ದೇವೆ.. ಈಗಲಾದರೂ ಗೆಲ್ಲಿಸೋಣ ಎಂಬ ಮನೋಭಾವ ಕೂಡಾ ಜನರಲ್ಲಿ ಮೂಡಿತ್ತು.. ಜೊತೆಗೆ ಒಕ್ಕಲಿಗ ಮತಗಳ ಧ್ರುವೀಕರಣ ಆಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.. ಇದರ ಜೊತೆಗೆ ಗ್ಯಾರೆಂಟಿ ಯೋಜನೆಗಳ ಮೇಲಿನ ಪ್ರೀತಿ ಮೀರಿ ಮಹಿಳೆಯರು ಡಾ.ಕೆ.ಸುಧಾಕರ್‌ ಅವರನ್ನು ಬೆಂಬಲಿಸಿದ್ದಾರೆ ಎಂಬ ಮಾತುಗಳಿವೆ.. ಅಷ್ಟೇ ಅಲ್ಲ, ಡಾ.ಕೆ.ಸುಧಾಕರ್‌ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾಸಿ.. ಅಷ್ಟೇ ಅಲ್ಲ, ಮೂರು ಬಾರಿ ಶಾಸಕರಾಗಿದ್ದವರು.. ಆದ್ರೆ ಕಾಂಗ್ರೆಸ್‌ ಅಭ್ಯರ್ಥಿ ಹೊರಗಿನವರು.. ಇಷ್ಟೆಲ್ಲಾ ಕಾರಣದಿಂದಾಗಿ, ಚಿಕ್ಕಬಳ್ಳಾಪುರದ ಜನರು ಮಾತನಾಡುವ ಪ್ರಕಾರ  ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೀಡ್‌ ಬರುತ್ತೆ ಅನ್ನೋದು ಕಷ್ಟದ ಕೆಲಸವೇ.. ಬಿಗ್‌ ಫೈಟ್‌ ಕೊಟ್ಟಿದ್ದಾರೆ ಅಂದ್ರೂ, ಕನ್ಫರ್ಮ್‌ ಆಗಿ ಕಾಂಗ್ರೆಸ್‌ಗೆ ಲೀಡ್‌ ಬರುತ್ತೆ ಎಂದು ಹೇಳೋದಕ್ಕೆ ಆಗೋದಿಲ್ಲ.. ಹೀಗಿದ್ದರೂ, ಪ್ರದೀಪ್‌ ಈಶ್ವರ್‌ ರಾಜೀನಾಮೆ ನೀಡುವಂತಹ ಘೋಷಣೆ ಮಾಡೋದು ಸರಿಯಾದ ನಿರ್ಧಾರವಲ್ಲ ಎಂದೇ ಹೇಳಲಾಗುತ್ತಿದೆ..

ಚುನಾವಣೆ ಸಮಯದಲ್ಲಿ ಏನೋ ಕ್ರೇಜ್‌ಗೆ ಅಂತ ಪ್ರದೀಪ್‌ ಈಶ್ವರ್‌ ಇಂತಹದ್ದೊಂದು ಹೇಳಿಕೆ ಕೊಟ್ಟಿದ್ದರು.. ನನ್ನ ಕ್ಷೇತ್ರದಲ್ಲಿ ಲೀಡ್‌ವ ಪಡೆದರೆ ರಾಜೀನಾಮೆ ಕೊಡುತ್ತೇನೆ ಅಂತ.. ಅದನ್ನ ಜನ ಕೂಡಾ ಮರೆತಿದ್ದರು.. ಒಂದು ವೇಳೆ ಕೇಳಿದ್ದರೂ ಏನೋ ಒಂದು ಸಬೂಬು ಹೇಳಿ ತಪ್ಪಿಸಿಕೊಳ್ಳಬಹುದಿತ್ತು.. ಆದ್ರೆ ಚುನಾವಣೆ ಮುಗಿದ ಮೇಲೆ ಪ್ರದೀಪ್‌ ಈಶ್ವರ್‌ ತುಂಬಾ ಕ್ಲಿಯರ್‌ ಕಟ್‌ ಆಗಿ ಹೇಳಿದ್ದಾರೆ.. ಅದೂ ಕೂಡಾ ಕೆಪಿಸಿಸಿ ಕಚೇರಿಯಲ್ಲಿ ಕುಳಿತು ಈ ಮಾತನ್ನು ಹೇಳಿದ್ದಾರೆ.. ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಪ್ರದೀಪ್‌ ಈಶ್ವರ್‌ಗೆ ಕಷ್ಟವಾಗಬಹುದು.. ವಿರೋಧಿಗಳ ಪ್ರಶ್ನೆಗಳನ್ನು ಎದುರಿಸೋದಕ್ಕೆ ಕಷ್ಟವಾಗಬಹುದು.. ಕ್ಷೇತ್ರದಲ್ಲಿ ಓಡಾಡುವಾಗ ಯಾರಾದರೂ ಈ ಬಗ್ಗೆ ಪ್ರಶ್ನೆ ಕೇಳಿದರೆ ಅದಕ್ಕೆ ಸಮಜಾಯಿಷಿ ಕೊಡೋದಕ್ಕೂ ಸಾಧ್ಯವಾಗಬಹುದು..

ಅಂದಹಾಗೆ, ಚಿಕ್ಕಬಳ್ಳಾಪುರ ಕ್ಷೇತ್ರದ ಮತದಾರರ ಮೇಲೆ ನಂಬಿಕೆ ಇಡುವುದು ಒಳ್ಳೆಯದೇ… ಆದ್ರೆ ಶಾಸಕ ಸ್ಥಾನಕ್ಕೇ ರಾಜೀನಾಮೆ ನೀಡುತ್ತೇನೆ ಅನ್ನೋದು ಎಷ್ಟು ಸರಿ ಎಂಬ ಮಾತುಗಳು ಎಲ್ಲಡೆ ಕೇಳಿಬರುತ್ತಿವೆ.. ಯಾರನ್ನು ಕೇಳಿ ಶಾಸಕರು ಇಂತಹ ಸವಾಲನ್ನು ಹಾಕಿದ್ದಾರೆ ಎಂಬ ಪ್ರಶ್ನೆಗಳನ್ನೂ ಮತದಾರರು ಮಾಡುತ್ತಿದ್ದಾರೆ.. ನಾವು ಅಭಿವೃದ್ಧಿ ಮಾಡಲೆಂದು ಅಧಿಕಾರ ಕೊಟ್ಟಿದ್ದೇವೆ… ಕನಸು ಮನಸಿಲ್ಲೂ ಅಂದುಕೊಂಡಿರದ ಹುದ್ದೆ ಪ್ರದೀಪ್‌ ಈಶ್ವರ್‌ಗೆ ಸಿಕ್ಕಿದೆ.. ಅದನ್ನು ಸಮರ್ಥವಾಗಿ ನಿಭಾಯಿಸಬೇಕು.. ಶಾಸಕರಾಗಿ ಒಂದು ವರ್ಷವಾಗಿದೆ.. ಇನ್ನೂ ಯಾವುದೇ ಅಭಿವೃದ್ಧಿ ಕೆಲಸಗಳು ಶುರುವಾಗಿಲ್ಲ… ಗ್ಯಾರೆಂಟಿಗಳು ಬಿಟ್ಟರೆ ಬೇರೆ ಯಾವ ಅಭಿವೃದ್ಧಿಗಳೂ ಆಗುತ್ತಿಲ್ಲ.. ಪ್ರದೀಪ್‌ ಈಶ್ವರ್‌ ಇನ್ನೂ ತಮ್ಮ ಸಾಮರ್ಥ್ಯ ಪ್ರೂವ್‌ ಮಾಡಿಕೊಂಡಿಲ್ಲ.. ಅಭಿವೃದ್ಧಿ ಮಾಡಿ ಮತದಾರರ ವಿಶ್ವಾಸವನ್ನು ಹಿಡಿದಿಟ್ಟುಕೊಂಡಿಲ್ಲ… ಆಗಲೇ ರಾಜೀನಾಮೆ ಕೊಡುತ್ತೇನೆ ಅಂದ್ರೆ ಹೇಗೆ ಎಂಬ ಪ್ರಶ್ನೆಗಳು ಕ್ಷೇತ್ರದ ಮತದಾರರಲ್ಲಿ ಎದ್ದಿವೆ..

ಈಗ ಸವಾಲಿನಂತೆ ಕಾಂಗ್ರೆಸ್‌ಗೆ ಲೀಡ್‌ ಬಂದರೆ ಓಕೆ.. ಒಂದು ವೇಳೆ ಲೀಡ್‌ ಬರದಿದ್ದರೆ ರಾಜೀನಾಮೆ ನೀಡಬೇಕಾಗುತ್ತದೆ.. ರಾಜೀನಾಮೆ ನೀಡಿದರೆ ಪ್ರದೀಪ್‌ ಈಶ್ವರ್‌ ಕ್ಷೇತ್ರದ ಮತದಾರರಲ್ಲಿ ಏನು ನಿರೂಪಿಸಿಕೊಂಡಂತೆ, ಅವರು ಏನು ಸಾಧನೆ ಮಾಡಿದಂತೆ..? ಎಂಬ ಪ್ರಶ್ನೆಗಳೂ ಎದ್ದಿವೆ.. ಮತದಾರರನ್ನು ಕೇಳದೇ ರಾಜೀನಾಮೆಯ ಸವಾಲು ಹಾಕಿರುವ ಪ್ರದೀಪ್‌ ಈಶ್ವರ್‌ ಅವರು, ಸವಾಲಿನಲ್ಲಿ ಸೋತು ರಾಜೀನಾಮೆ ಕೊಡುತ್ತಾರೆ ಅಂದಿಟ್ಟುಕೊಳ್ಳೋಣ.. ಆಗ ಉಪಚುನಾವಣೆ ನಡೆಯುತ್ತೆ.. ಆಗ ಪ್ರದೀಪ್‌ ಈಶ್ವರ್‌ ಏನಂತೆ ಹೇಳಿಕೊಂಡು ಹೋಗಿ ಮತ ಕೇಳ್ತಾರೆ.. ಇಲ್ಲ ಚುನಾವಣೆಗೆ ಸ್ಪರ್ಧಿಸೋದಿಲ್ಲ ಅನ್ನೋದಾದರೆ, ಯಾವ ಪುರುಷಾರ್ಥಕ್ಕೆ ಶಾಸಕರಾಗಬೇಕಿತ್ತು.. ಸುಧಾಕರ್‌ ಮೇಲೆ ಸವಾಲೆಸೆಯೋದಕ್ಕೆ ಮಾತ್ರ ಪ್ರದೀಪ್‌ ಈಶ್ವರ್‌ ಶಾಸಕರಾದರೆ..? ಎಂಬ ಪ್ರಶ್ನೆಗಳು ಏಳುತ್ತವೆ..

ಪ್ರದೀಪ್‌ ಈಶ್ವರ್‌ ಮೊದಲ ಬಾರಿ ಶಾಸಕ.. ಚಿಕ್ಕವಯಸ್ಸಿಗೇ ಅದೃಷ್ಟ ಕುಲಾಯಿಸಿದೆ.. ಬರೀಗೈಯಲ್ಲಿ ದೊಡ್ಡ ನಾಯಕನನ್ನು ಸೋಲಿಸಿದ್ದಾರೆ.. ಇದು ದೊಡ್ಡದಾಗಿ ಬೆಳೆಯೋದಕ್ಕೆ ಸಿಕ್ಕಂತಹ ಅವಕಾಶಗಳು.. ಕೆಲಸ ಮಾಡಿ ತಮ್ಮನ್ನು ತಾವು ಪ್ರೂವ್‌ ಮಾಡಿಕೊಳ್ಳೋದಕ್ಕೆ, ಇತರರಿಗೆ ಮಾದರಿಯಾಗೋದಕ್ಕೆ ಶಾಸಕ ಪ್ರದೀಪ್‌ ಈಶ್ವರ್‌ಗೆ ಸಾಕಷ್ಟು ಅವಕಾಶಗಳಿವೆ.. ಅದೆಲ್ಲವನ್ನೂ ಬಿಟ್ಟು ಸವಾಲೆಸೆಯೋದಕ್ಕೆ ಶಾಸಕ ಸ್ಥಾನವನ್ನು ಪಣಕ್ಕಿಡೋದು ಎಷ್ಟು ಸರಿ..? ಅಭಿವೃದ್ಧಿಗಾಗಿ ಶಾಸಕ ಸ್ಥಾನ ಪಣಕ್ಕಿಡಲಿ, ಇಷ್ಟು ದಿನದಲ್ಲಿ ಇಂತಹ ಅಭಿವೃದ್ಧಿ ನಾನು ಮಾಡದಿದ್ದರೆ ರಾಜೀನಾಮೆ ನೀಡುತ್ತೇನೆ ಅನ್ನಲಿ, ಸರ್ಕಾರದಿಂದ ನನಗೆ ಇಷ್ಟು ಅನುದಾನ ಸಿಗಬೇಕಿತ್ತು.. ಅದು ಬರದಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ ಎನ್ನಲಿ.. ಅದು ಬಿಟ್ಟು ಎದುರಾಳಿಯ ವಿರುದ್ಧದ ಸೇಡಿಗಾಗಿ ಜನರು ಕೊಟ್ಟ ಶಾಸಕ ಸ್ಥಾನವನ್ನು ಪಣಕ್ಕಿಡೋ ಅಧಿಕಾರ ಕೊಟ್ಟಿದ್ದಾದರೂ ಯಾರು..?.. ಉಪಚುನಾವಣೆ ನಡೆದರೆ ಅದಕ್ಕೆ ಖರ್ಚಾಗೋ ಜನರ ತೆರಿಗೆ ಹಣಕ್ಕೆ ಲೆಕ್ಕ ಕೊಡೋರು ಯಾರು..? ಹೀಗಾಗಿ ಶಾಸಕ ಪ್ರದೀಪ್‌ ಈಶ್ವರ್‌ ಫಲಿತಾಂಶಕ್ಕೆ ಮೊದಲೇ ಈ ಸವಾಲನ್ನು ಹಿಂಪಡೆಯುವುದು ಮೇಲು ಎಂಬ ಮಾತುಗಳು ಕೇಳಿಬರುತ್ತಿವೆ… ಸವಾಲು ಹಾಕೋದಾದರೆ ಸುಧಾಕರ್‌ ಲೀಡ್‌ ಪಡೆದುಕೊಂಡರೆ ನಾನು ಕೋಚಿಂಗ್‌ ಸೆಂಟರ್‌ ಮುಚ್ಚುತ್ತೇನೆ, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸೋದಿಲ್ಲ ಎಬಂತಹ ಸವಾಲುಗಳನ್ನು ಹಾಕಲಿ ಎಂದು ಹಲವಾರು ಮತದಾರರು ಮಾತನಾಡುತ್ತಿದ್ದಾರೆ..

Share Post