Politics

ನೋಡ್ತಾ ಇರಿ ಸಮೀಕ್ಷೆಗಳೆಲ್ಲಾ ಉಲ್ಟಾ ಆಗುತ್ತವೆ; ಸೋನಿಯಾ ಗಾಂಧಿ

ನವದೆಹಲಿ; ಸಮೀಕ್ಷೆಗಳೆಲ್ಲವೂ ಉಲ್ಟಾ ಆಗುತ್ತವೆ.. ಕಾದು ನೋಡಿ ಎಂದು ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ.. ಚುನಾವನೋತ್ತರ ಸಮೀಕ್ಷೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೋನಿಯಾಗಾಂಧಿ, ನಾಳೆಯವರೆಗೂ ಕಾಯೋಣ.. ಸಮೀಕ್ಷೆಗಳೆಲ್ಲವೂ ಸುಳ್ಳಾಗುತ್ತವೆ ಎಂಬ ವಿಶ್ವಾಸ ನನಗಿದೆ.. ಸಮೀಕ್ಷೆಗಳಿಗೆ ವಿರುದ್ಧವಾದ ಫಲಿತಾಂಶ ಬರಲಿದೆ ಎಂದು ಹೇಳಿದ್ದಾರೆ..

ಇನ್ನು ಇದೇ ವೇಳೆ ಕಾಂಗ್ರೆಸ್‌ ನೇತೃತ್ವದ INDI ಮೈತ್ರಿಕೂಟವೇ ಅಧಿಕಾರಕ್ಕೆ ಬರುತ್ತದೆ ಅಂತ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್ ಭವಿಷ್ಯ ನುಡಿದಿದ್ದಾರೆ.. ಈ ಬಾರಿ ಬಿಜೆಪಿಗೆ ಯಾವ ಕಾರಣಕ್ಕೂ ಬಹುಮತ ಬರೋದಿಲ್ಲ.. ಬದಲಾಗಿ INDI ಒಕ್ಕೂಟವು 295 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಿದ್ದಾರೆ..

 

Share Post