InternationalPolitics

ಪ್ರಜ್ವಲ್‌ ರೇವಣ್ಣ ನಾಳೆ ಬೆಂಗಳೂರಿಗೆ ಬರಲ್ಲ; ಮೇ 15ಕ್ಕೆ ಬುಕ್‌ ಆಗಿದೆ ಟಿಕೆಟ್‌!

ಬೆಂಗಳೂರು; ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ ರಿಲೀಸ್‌ ಆದ ಮೇಲೆ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಜರ್ಮನಿಗೆ ಹೋಗಿದ್ದಾರೆ.. ಇತ್ತ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ಕೊಟ್ಟಿದ್ದಾರೆ.. ಆದ್ರೆ ತನ್ನ ವಕೀಲರ ಮೂಲಕ ಏಳು ದಿನಗಳ ಸಮಯಾವಕಾಶ ಕೋರಿರುವ ಪ್ರಜ್ವಲ್‌, ಮೇ 03 ಅಂದರೆ ನಾಳೆ ಬೆಂಗಳೂರಿಗೆ ಬರುತ್ತಾರೆ ಎಂದು ಹೇಳಲಾಗಿತ್ತು.. ಆದ್ರೆ, ಇದೀಗ ಅವರು ಮೇ 15ಕ್ಕೆ ಜರ್ಮನಿಯಿಂದ ಪ್ರಯಾಣ ಬೆಳೆಸುತ್ತಾರೆ ಎಂದು ಹೇಳಲಾಗುತ್ತಿದೆ..

ಜರ್ಮನಿಗೆ ಹಾರಿದ ದಿನವೇ ಮೇ 3ಕ್ಕೆ ರಿಟರ್ನ್‌ ಟಿಕೆಟ್‌ ಬುಕ್‌ ಆಗಿತ್ತು..  ಲುಫ್ತಾನ್ಸಾ ವಿಮಾನದಲ್ಲಿ ಅವರು ನಾಳೆ ಮಧ್ಯಾಹ್ನದ ಮೇಲೆ ಬೆಂಗಳೂರಿಗೆ ಪ್ರಯಾಣ ಬೆಳೆಸಬೇಕಿತ್ತು.. ಆದ್ರೆ ಇದೀಗ ಅವರು ಇದೇ ವಿಮಾನದಲ್ಲಿ ಮತ್ತೊಂದು ಟಿಕೆಟ್‌ ಬುಕ್‌ ಮಾಡಿದ್ದಾರೆ.. ಅದು ಮೇ 15ರ ಮಧ್ಯರಾತ್ರಿ 2 ಗಂಟೆಗೆ ಹೊರಡುವ ವಿಮಾನವಾಗಿದೆ.. ಜರ್ಮನಿಯ ಫ್ರಾಂಕ್‌ ಫರ್ಟ್‌ನಿಂದ ಪ್ರಜ್ವಲ್‌ ರೇವಣ್ಣ ಪ್ರಯಾಣ ಬೆಳೆಸಲಿದ್ದು, ಮೇ 16ರ ಬೆಳಗ್ಗೆ ದೇವಹನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ ಎಮದು ಹೇಳಲಾಗುತ್ತಿದೆ..

 

Share Post