BengaluruPolitics

ಸಿದ್ದರಾಮಯ್ಯ, ಡಿಕೆಶಿ ಸಿಲುಕಿಸಲು ಪ್ಲಾನ್; ನಾಗೇಂದ್ರ

ಬೆಂಗಳೂರು; ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ದುರ್ಬಳಕೆ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ಶಾಸಕ ನಾಗೇಂದ್ರ ಬೈಲ್ ಮೇಲೆ ರಿಲೀಸ್ ಆಗಿದ್ದಾರೆ.. ಜೈಲಿನಿಂದ ಹೊರಬರುತ್ತಿದ್ದಂತೆ ಅವರು bjp ಹಾಗೂ ED ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..

 ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ.. ಆದ್ರೂ ಬಿಜೆಪಿ ಷಡ್ಯಂತ್ರದಿಂದ ನನ್ನನ್ನು ಬಂಧಿಸಲಾಗಿತ್ತು.. ಕೇಂದ್ರ ಬಿಜೆಪಿ ನಾಯಕರ ಒತ್ತಡದಿಂದಾಗಿಯೇ ಇಡಿ ಅಧಿಕಾರಿಗಳು ನನಗೆ ಕಿರುಕುಳ ನೀಡಿದರು ಅಂತ ನಾಗೇಂದ್ರ ದೂರಿದ್ದಾರೆ.

  ನನ್ನ ಬಂಧನದ ಬಳಿಕ ಕೇಂದ್ರ ಸರ್ಕಾರದ ಒತ್ತಡದಿಂದಾಗಿ ಇಡಿ ಅಧಿಕಾರಿಗಳು ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರು ಹೇಳುವಂತೆ ಒತ್ತಾಯಿಸಿದರು. ಆದ್ರೆ ನಾನು ಹಾಗೆ ಹೇಳಲು ನಿರಾಕರಿಸಿದೆ. ಹಗರಣದಲ್ಲಿ ನನ್ನ ಪಾತ್ರವೇ ಇಲ್ಲ. ಹೀಗಿರುವಾಗ ಸಿಎಂ, ಡಿಸಿಎಂ ಪಾತ್ರ ಇರಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.

    ವಾಲ್ಮೀಕಿ ನಿಗಮದ ಹಣವನ್ನು ಬ್ಯಾಂಕಿನವರೇ ಸೇರಿ ವಾರ್ಗಾವಣೆ ಮಾಡಿಕೊಂಡಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಅವರಿಗೂ ಗೊತ್ತಿಲ್ಲ ಎಂದು ಹೇಳಿದರು.

 

Share Post