BengaluruCrime

ಹುಡುಗಿ ಕಿಡ್ನ್ಯಾಪ್‌ ಮಾಡಿ ರಾತ್ರಿಯಿಡೀ ಗ್ಯಾಂಗ್‌ ರೇಪ್‌; ಉದ್ಯಾನನಗರಿಯಲ್ಲಿ ದಾರುಣ

ಬೆಂಗಳೂರು; ಉದ್ಯಾನನಗರಿ ಬೆಂಗಳೂರಿನಲ್ಲಿ ರಾತ್ರಿ ಪೈಶಾಚಿಕ ಕೃತ್ಯ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಯುವತಿಯೊಬ್ಬಳನ್ನು ಹೊತ್ತೊಯ್ದ ಕಾಮುಕರ ಗುಂಪೊಂದು ರಾತ್ರಿಯಿಡೀ ಕಾರಿನಲ್ಲೇ ಅತ್ಯಾಚಾರ ಎಸಗಿದೆ. ಸಾಮೂಹಿಕ ಅತ್ಯಾಚಾರ ನಡೆಸಿ ಯುವತಿಯನ್ನು ನಡುದಾರಿಯಲ್ಲಿ ಬಿಟ್ಟುಹೋಗಿದೆ.

ಅತ್ಯಾಚಾರಕ್ಕೊಳಗಾದ ಯುವತಿ ತನ್ನ ಸ್ನೇಹಿತನ ಜೊತೆ ಮಾರ್ಚ್‌ 25ರಂದು ನ್ಯಾಷನಲ್‌ ಗೇಮ್ಸ್‌ ವಿಲೇಜ್‌ ಕಾಂಪ್ಲೆಕ್ಸ್‌ ಪಾರ್ಕ್‌ ಬಳಿ ಕೂತಿದ್ದಳು. ಈ ವೇಳೆ ಬಂದ ಕಾಮುಕರ ಗುಂಪೊಂದು ಕಿರಿಕ್‌ ತೆಗೆದಿದೆ. ಅನಂತರ ಆಕೆಯನ್ನು ಮಾರುತಿ 800 ಕಾರಿನಲ್ಲಿ ಹೊತ್ತೊಯ್ಯಲಾಗಿದೆ. ಕಾರಿನಲ್ಲೇ ಎಂಟು ಗಂಟೆಗಳ ಕಾಳ ಸುತ್ತಾಡಿಸಿ ಒಬ್ಬರಾದ ಮೇಲೆ ಒಬ್ಬರು ರೇಪ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ದೊಮ್ಮಲೂರು, ಇಂದಿರಾನಗರ, ಅನೇಕಲ್, ನೈಸ್ ರೋಡ್ ಭಾಗಗಳಲ್ಲಿ ಸುತ್ತಾಡಲಾಗಿದ್ದು, ಯುವತಿ ಮೇಲೆ ಕಾರಿನಲ್ಲೇ ದೌರ್ಜನ್ಯ ಎಸಗಲಾಗಿದೆ. ಕಾಮುಕರ ಕ್ರೌರ್ಯ ಎಷ್ಟಿತ್ತು ಎಂಬುದಕ್ಕೆ ಕಾರಿನ ಹಿಂಬದಿ ಸೀಟ್‌ ಸಾಕ್ಷಿಯಾಗಿದ್ದು, ಸೀಟ್‌ ಎಲ್ಲಾ ಕಿತ್ತುಹೋಗಿದೆ. ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share Post