NationalPolitics

ಡಿಕೆಶಿ ಹೈದರಾಬಾದ್ ಗೆ ಆಗಮನ; ನೂತನ ಕಾಂಗ್ರೆಸ್ ಶಾಸಕರಿಗೆ ಬಸ್ ಗಳು ರೆಡಿ

ತೆಲಂಗಾಣ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದೆ. ಗೆಲ್ಲುವ ಶಾಸಕರು ಕೈ ತಪ್ಪದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದಿಂದ ಆಚೆ ಬರದಂತೆ ಸೂಚನೆ ನೀಡಲಾಗಿದೆ. ಎಐಸಿಸಿ ವೀಕ್ಷಕರು ಮತ ಎಣಿಕೆ ಬಳಿ ಹಾಜರಿರುತ್ತಾರೆ. ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈಗಾಗಲೇ ಹೈದರಾಬಾದ್ ತಲುಪಿದ್ದಾರೆ. ಹೋಟೆಲ್ ತಾಜಕೃಷ್ಣನಲ್ಲಿ  ಕೂತು ಮತ ಎಣಿಕೆ ಪ್ರಕ್ರಿಯೆ ವೀಕ್ಷಣೆ ಮಾಡಲಿದ್ದಾರೆ. ಶೀಘ್ರವೇ ಹಲವು ಎಐಸಿಸಿ ನಾಯಕರು ತೆಲಂಗಾಣಕ್ಕೆ ಬರಲಿದ್ದಾರೆ.

ಕರ್ನಾಟಕದ ಕೆಲವು ಶಾಸಕರನ್ನು ಕಾಂಗ್ರೆಸ್ ಕೂಡ ಕರೆದಿದೆ. ಪ್ರತಿ ಕ್ಷೇತ್ರಕ್ಕೆ ಒಬ್ಬ ಶಾಸಕರನ್ನು ಕಳುಹಿಸಲಾಗುವುದು ಎಂದು ವರದಿಯಾಗಿದೆ.

ಇನ್ನೊಂದೆಡೆ ಐದು ರಾಜ್ಯಗಳಿಗೆ ಎಐಸಿಸಿ ವೀಕ್ಷಕರನ್ನು ನೇಮಿಸಿದೆ. ಇದರ ಅಂಗವಾಗಿ ತೆಲಂಗಾಣದ ವೀಕ್ಷಕರಾಗಿ ಡಿ.ಕೆ.ಶಿವಕುಮಾರ್, ದೀಪದಾಸ್ ಮುನ್ಷಿ, ಡಾ. ಅಜೋಯ್ ಕುಮಾರ್, ಕೆ. ಮುರಳೀಧರನ್ ಮತ್ತು ಕೆಜೆ ಜಾರ್ಜ್ ನೇಮಿಸಲಾಗಿದೆ.  ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ಅಭ್ಯರ್ಥಿಗಳನ್ನು ವಿಶೇಷ ಬಸ್‌ಗಳಲ್ಲಿ ಕರ್ನಾಟಕಕ್ಕೆ ಸಾಗಿಸಲು ಯತ್ನಿಸುತ್ತಿದೆ. ಅದಕ್ಕಾಗಿಯೇ ಮೂರು ಬಸ್‌ಗಳನ್ನು ಸಿದ್ಧಪಡಿಸಲಾಗಿದೆ.

Share Post