ಮಗುವಿನೊಂದಿಗೆ ಕೇರಳ ಮೂಲದ ದಂಪತಿ ಆತ್ಮಹತ್ಯೆ
ಕೊಡಗು; ಕೇರಳ ಮೂಲದ ದಂಪತಿ ಹಾಗೂ ಮಗು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದ ಅರೇಕಾ ಹೋಮ್ಸ್ಟೇನಲ್ಲಿ ಈ ಘಟನೆ ನಡೆದಿದೆ.
ಕೊಲ್ಲಂ ಮೂಲದ ಈ ಕುಟುಂಬ ನಿನ್ನೆ ಸಂಜೆ 6.30 ಕ್ಕೆ ರೆಸಾರ್ಟ್ ಗೆ ಆಗಮಿಸಿದ್ದರು. ಪ್ರವಾಸಕ್ಕೆಂದು ಇವರು ಬಂದಿದ್ದರು. ಆದರೆ, ಇಂದು ಬೆಳಗ್ಗೆ ಎಷ್ಟು ಹೊತ್ತಾದರೂ ಬಾಗಿಲು ತೆಗೆದಿಲ್ಲ. ಹೀಗಾಗಿ, ಅನುಮಾನಗೊಂಡು ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೊಲ್ಲಂನಲ್ಲಿರುವ ಇವರ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.