CrimeNational

ಈ ಶಿಕ್ಷಕನಿಗೆ 3 ನೇ ಕ್ಲಾಸ್‌ ಬಾಲಕಿ ಐ ಲವ್‌ ಯೂ ಹೇಳಬೇಕಂತೆ!

ಬಿಹಾರ; ಐ ಲವ್‌ ಯೂ ಎಂದು ಹೇಳುವಂತೆ ಮೂರನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಶಿಕ್ಷಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.. ಬಿಹಾರದ ರೊಹ್ತಾಸ್‌ ಜಿಲ್ಲೆಯ ತಿಲೋತು ಬ್ಲಾಕ್‌ನಲ್ಲಿರುವ ಸೋನೋರಾ ಮಿಡಲ್‌ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು, ಇಸ್ತಿಯಾಕ್‌ ಅಹಮದ್‌ ಎಂಬಾತನೇ ಬಂಧಿತ ಕಾಮುಕ ಶಿಕ್ಷಕನಾಗಿದ್ದಾರೆ..
ಶಾಲೆಗೆ ದಸರಾ ರಜೆ ನೀಡಲಾಗಿತ್ತು.. ರಜೆ ಮುಗಿದ ಮೇಲೆ ಮೂರನೇ ತರಗತಿ ಬಾಲಕಿಯೊಬ್ಬಳು ಶಾಲೆಗೆ ಹೋಗಲು ನಿರಾಕರಿಸಿದ್ದಾಳೆ.. ಪೋಷಕರು ಯಾಕೆ ಎಂದು ಕೇಳಿದಾಗ ಶಿಕ್ಷಕನ ಕಿರಕುಳದ ಬಗ್ಗೆ ಹೇಳಿದ್ದಾಳೆ.. ಶಿಕ್ಷನ ಇಸ್ತಿಯಾಕ್‌ ಅಹಮದ್‌, ಐ ಲವ್‌ ಯೂ ಎಂದು ಹೇಳುವಂತೆ ಒತ್ತಡ ಹೇರುತ್ತಿದ್ದ.. ವಿಚಿತ್ರವಾಗಿ ಆಡುತ್ತಿದ್ದ, ಲೈಂಗಿಕವಾಗಿ ಕಿರುಕುಳ ನೀಡುತ್ತಾನೆ ಎಂದು ಹೇಳಿಕೊಂಡಿದ್ದಾಳೆ.. ಈ ಬಗ್ಗೆ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ..
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ.. ಅಲ್ಲದೆ ಶಾಲೆಯ ಇತರ ಬಾಲಕಿಯರಿಂದಲೂ ಆತನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ..

Share Post