CrimeDistricts

ಉದ್ಯೋಗ ಕೊಡಿಸೋದಾಗಿ ಕೋಟ್ಯಂತರ ವಂಚನೆ; 6 ಮಂದಿ ಅರೆಸ್ಟ್‌

ಗದಗ; ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪದ ಮೇಲೆ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ತಿಪ್ಪೇಸ್ವಾಮಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.. ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಸುಮಾರು 39 ನಿರುದ್ಯೋಗಿಗಳಿಗೆ ಕೋರ್ಟ್‌ ಹಾಗೂ ಹಲವು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.. 39 ಜನರಿಂದ ಸುಮಾರು 3 ಕೋಟಿ 30 ಲಕ್ಷ ರೂಪಾಯಿ ಪಡೆಯಲಾಗಿದೆ ಎಂದು ತಿಳಿದುಬಂದಿದೆ..
ಬಹುತೇಕರು ಸರ್ಕಾರಿ ಕೆಲಸ ಸಿಗುತ್ತೆ ಎಂಬ ಕಾರಣಕ್ಕೆ ಜಮೀನು ಮಾರಿ ಹಣ ಕೊಟ್ಟಿದ್ದರು ಎಂದು ತಿಳಿದುಬಂದಿದೆ.. ಪ್ರಕರಣದ ಪ್ರಮುಖ ಆರೋಪಿ ತಿಪ್ಪೇಸ್ವಾಮಿ ಎಂದು ತಿಳಿದುವಬಂದಿದ್ದು, ತಿಪ್ಪೇಸ್ವಾಮಿ ಜೊತೆಗೆ ಇನ್ನೂ ಆರು ಮಂದಿಯನ್ನು ಬಂಧಿಸಿದ್ದಾರೆ.. ಮೊದಲು ಮಧ್ಯವರ್ತಿ ನಾಗಭೂಷಣ ಹಿರೇಮಠ ದೂರು ನೀಡಿದರು. ಅದರ ಆಧಾರದ ಮೇಲೆ ಅವರ ಸಂಬಂಧಿ ಅನ್ನದಾನೇಶ್ವರ ಹಿರೇಮಠ, ಸೇರಿದಂತೆ ನಾಲ್ಕು ಜನರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು.. ಈ ವೇಳೆ ಕಿಂಗ್‌ಪಿನ್‌ ಹೆಸರನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.. ಈ ಹಿನ್ನೆಲೆಯಲ್ಲಿ ತಿಪ್ಪೇಸ್ವಾಮಿಯನ್ನು ಬಂಧಿಸಲಾಗಿದೆ.. ಈ ತಿಪ್ಪೇಸ್ವಾಮಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು ಎಂದು ತಿಳಿದುಬಂದಿದೆ..
ಪೊಲೀಸರು ಆರೋಪಿಗಳಿಂದ ಎರಡು ಐಶಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.. ತನಿಖೆ ಮುಂದುವರೆಸಿದ್ದಾರೆ..

Share Post