ಸದ್ಯಕ್ಕೆ ಬೀಸೋ ದೊಣ್ಣೆಯಿಂದ ಪಾರಾದ ಗೌರಿ ಶಂಕರ್
ಬೆಂಗಳೂರು; ಶಾಸಕತ್ವದಿಂದ ಅಸಿಂಧುಗೊಂಡು ಸಂಕಷ್ಟ ಅನುಭವಿಸಿದ್ದ ತುಮಕೂರು ಗ್ರಾಮೀಣ ಶಾಸಕ ಗೌರಿ ಶಂಕರ್ ಸದ್ಯಕ್ಕೆ ಬೀಸೋ ದೊಣ್ಣೆಯಿಂದ ಪಾರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅಕ್ರಮ ನಡೆಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಇಂದು ಆದೇಶ ಹೊರಡಿಸಿತ್ತು. ಆದ್ರೆ
ಚುನಾವಣಾ ವೇಳಾಪಟ್ಟಿ ಪ್ರಕಟವಾಗಿರುವುದರಿಂದ ಆದೇಶಕ್ಕೆ ತಡೆ ಕೋರಿ ಗೌರಿ ಶಂಕರ್ ಪರ ವಕೀಲರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಹೈಕೋರ್ಟ್ ಪುರಸ್ಕರಿಸಿದೆ.
30 ದಿನಗಳ ಕಾಲ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಅಷ್ಟರೊಳಗೆ ಗೌರಿಶಂಕರ್ ಸುಪ್ರೀಂಕೋರ್ಟ್ ಮೊರೆಹೋಗಬೇಕಿದೆ. ಸುಪ್ರೀಂಕೋರ್ಟ್ ಏನಾದರೂ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದರೆ ಗೌರಿಶಂಕರ್ ಬಚಾವಾಗಲಿದ್ದಾರೆ. ಇಲ್ಲದೆ ಹೋದರು ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದು, ಚುನಾವಣೆಎ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ.