By Election; ಜೆಡಿಎಸ್‌ನಿಂದ ಚನ್ನಪಟ್ಟಣದಲ್ಲಿ ಮಹಿಳಾಸ್ತ್ರ ಪ್ರಯೋಗ..!
ಬೆಂಗಳೂರು; ರಾಜ್ಯದ ಮೂರು ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ.. ನವೆಂಬರ್ 13ಕ್ಕೆ ಮತದಾನ ಹಾಗೂ ನವೆಂಬರ್ 23ಕ್ಕೆ ಫಲಿತಾಂಶ ಬರಲಿದೆ.. ಈಗ ಟಿಕೆಟ್‌ಗಾಗಿ ಕಸರತ್ತು ನಡೆಯುತ್ತಿದೆ.. ಮೂರು ಕ್ಷೇತ್ರಗಳ ಪೈಕಿ ಕುತೂಹಲ ಕೆರಳಿಸಿರುವ ಕ್ಷೇತ್ರ ಚನ್ನಪಟ್ಟಣ.. ಇಲ್ಲಿ ಜೆಡಿಎಸ್‌ಗೆ ಮೈತ್ರಿ ಟಿಕೆಟ್ ಒಲಿಯೋದು ಬಹುತೇಕ ಪಕ್ಕಾ ಆಗಿದೆ.. ಜೆಡಿಎಸ್‌ನಿಂದ ಯಾರನ್ನು ನಿಲ್ಲಿಸಬೇಕು ಎಂಬ ಚರ್ಚೆ ನಡೆದಿದೆ.. ನಿಖಿಲ್ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಹೆಸರುಗಳು ಕೇಳಿಬಂದಿದ್ದು, ಕುಮಾರಸ್ವಾಮಿಯವರು ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿ ಮಹಿಳಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ..
ಚನ್ನಪಟ್ಟಣ ಕ್ಷೇತ್ರ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಹೋದರ ಸೋಲಿನ ಸೇಡು ತೀರಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಪಣ ತೊಟ್ಟಿದ್ದಾರೆ.. ಇನ್ನೊಂದೆಡೆ ಡಿಕೆ ಸಹೋದರರಿಗೆ ಮತ್ತೊಮ್ಮೆ ಸೋಲಿನ ರುಚಿ ತೋರಿಸಿ ತಮ್ಮ ಪ್ರಾಬಲ್ಯ ಮೆರೆಯಲು ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ.. ಇದೇ ಪ್ರತಿಷ್ಠೆಗಾಗಿ ಅವರು ಚನ್ನಪಟ್ಟಣವನ್ನು ಜೆಡಿಎಸ್‌ಗೆ ದಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿರೋದು.. ಕಾಂಗ್ರೆಸ್‌ನಿಂದ ಡಿ.ಕೆ.ಸುರೇಶ್ ಅವರೇ ಅಭ್ಯರ್ಥಿಯಾಗಬಹುದು ಎಂದು ಹೇಳಲಾಗುತ್ತಿದೆ.. ಇತ್ತ ಜೆಡಿಎಸ್‌ನಿಂದ ಯಾರು ಅಭ್ಯರ್ಥಿ ಎಂಬ ಪ್ರಶ್ನೆ ಮೂಡಿದೆ..
ಚನ್ನಪಟ್ಟಣದಲ್ಲಿ ಮಹಿಳಾಸ್ತ್ರ ಪ್ರಯೋಗ ಮಾಡಿದರೆ ಹೇಗೆ ಎಂಬ ಪ್ರಶ್ನೆ ಜೆಡಿಎಸ್‌ನಲ್ಲಿ ಎದುರಾಗಿದೆ ಎನ್ನಲಾಗಿದೆ.. ಡಿಕೆ ಸಹೋದರರಿಗೆ ಟಾಂಗ್ ಕೊಡಲು ಮಹಿಳಾಸ್ತ್ರ ಪ್ರಯೋಗಿಸಿ ಮಹಿಳಾ ಮತದಾರರು ಹಾಗೂ ಜೆಡಿಎಸ್ ಸಾಂಪ್ರದಾಯಿಕ ಮತಗಳನ್ನು ಕ್ರೋಢೀಕರಿಸಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರ ಜೆಡಿಎಸ್‌ನದ್ದು ಎನ್ನಲಾಗಿದೆ.. ನಿಖಿಲ್ ಕುಮಾರಸ್ವಾಮಿಯವರು ಈಗಾಗಲೇ ಎರಡು ಬಾರಿ ಸೋತಿದ್ದಾರೆ.. ಹೀಗಾಗಿ, ಸಿಂಪಥಿ ಏನಾದರೂ ವರ್ಕ್ ಆಗುತ್ತಾ ಎಂದು ಮೊದಲು ಚನ್ನಪಟ್ಟಣದಲ್ಲಿ ಸರ್ವೇ ನಡೆಯಲಿದೆ.. ಸರ್ವೇಯಲ್ಲಿ ಉತ್ತಮ ವಾತಾವರಣ ಕಂಡುಬಂದರೆ ನಿಖಿಲ್ ಅವರನ್ನೇ ಕಣಕ್ಕಿಳಿಸೋದು, ಇಲ್ಲದಿದ್ದರೆ ಅನಿತಾ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿ ಮಹಿಳಾಸ್ತ್ರ ಪ್ರಯೋಗಿಸೋದು ಎಂದು ಚರ್ಚೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.. ಆದ್ರೆ ಈ ಬಗ್ಗೆ ಅಧಿಕೃತವಾಗಿ ತಿಳಿಯಬೇಕಿದೆ..