Districts

ಬೆಳಗಾವಿ ಸದನದಲ್ಲಿ ಇಂದು ಮತಾಂತರ ಗದ್ದಲ: ಕಾಂಗ್ರೆಸ್‌ ಸಜ್ಜು

ಬೆಳಗಾವಿ: ನಿನ್ನೆ ವಿಧಾನಸಭೆಯಲ್ಲಿ ವಿಪಕ್ಷಗಳ ಗದ್ದಲದ ನಡುವೆಯೇ ಮತಾಂತರ ನಿಷೇಧ ಕಾಯ್ದೆ ಅನುಮೋದನೆ ಮಾಡಲಾಯಿತು. ಸ್ಪೀಕರ್‌ ಕಾಗೇರಿಯವರು ತರಾತುರಿಯಲ್ಲಿ ವಿಧೇಯಕ ಮಂಡನೆ ಮಾಡಿದ್ದಾರೆಂದು ವಿಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ರು.

ಇಂದು ಕಲಾಪದ ವೇಳೆ ಮತಾಂತರ ನಿಷೇಧ ಕಾಯ್ದೆ ವಿರುದ್ಧ ಸದನದ ಬಾವಿಗಿಳಿದು ಕಾಂಗ್ರೆಸ್‌, ಜೆಡಿಎಸ್‌ ಪ್ರತಿಭಟನೆ ನಡೆಸಲಿದೆ. ಆಡಳಿತ ಮತ್ತು ವಿಪಕ್ಷಗಳ ನಡುವೆ ಮತಾಂತರ ಕಿಚ್ಚು ಹತ್ತಲಿದೆ. ಮತಾಂತರ ಬ್ರಹ್ಮಾಸ್ತ್ರವನ್ನು ಕಾಂಗ್ರೆಸ್‌ ಈಗಾಗಲೇ ತಯಾರಿ ಮಾಡಿಕೊಂಡಿದೆ. ಬೇರೆ ಚರ್ಚೆಗೆ ಅವಕಾಶ ನೀಡದಂತೆ ಕಾಂಗ್ರೆಸ್‌ ಹೋರಾಟ ನಡೆಸಲಿದೆ. ವಿಧೇಯಕವನ್ನು ಮತಕ್ಕೆ ಹಾಕಲು ಬಿಗಿಪಟ್ಟು ಹಿಡಿಯುವ ಸಾಧ್ಯತೆಯಿದೆ.

 

Share Post