National

ದೇಶದಲ್ಲಿ 213 ಒಮಿಕ್ರಾನ್ ಕೇಸ್‌ ಪತ್ತೆ

ದೆಹಲಿ: ದೇಶದಲ್ಲಿ ಕೊರೋನಾ ಆರ್ಭಟ ಕಡಿಮೆಯಾಗಿದ್ದು, ಒಮಿಕ್ರಾನ್‌ ಪ್ರಕರಣದ ಸಂಖ್ಯೆ ಹೆಚ್ಚಳವಾಗಿದೆ. ಇದು ಡೆಲ್ಟಾಗಿಂತ ಅತಿ ಹೆಚ್ಚು ವೇಗವಾಗಿ ಒಮಿಕ್ರಾನ್‌ ಹರಡುತ್ತದೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ. ಈ ನಡುವೆ ಇಂದು ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಇದುವೆರೆಗೆ ೨೧೩ ಒಮಿಕ್ರಾನ್‌ ಕೇಸ್‌ ಗಳು ವರದಿಯಾಗಿವೆ.

ನಿನ್ನೆಯವರಗೆ ೨೦೦ ಪ್ರಕರಣಗಳಿದ್ದವು. ಒಂದೇ ದಿನದಲ್ಲಿ ೧೩ರಷ್ಟು ಏರಿಕೆ ಕಂಡಿದೆ. ಒಟ್ಟು 213 ಓಮಿಕ್ರಾನ್ ಪ್ರಕರಣಗಳಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ 57 ಮತ್ತು 54 ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ 15 ಕೇಸುಗಳು ವರದಿಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಇಲ್ಲಿಯವರೆಗೆ 90 ರೋಗಿಗಳು ಓಮಿಕ್ರಾನ್ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕೋವಿಡ್ ಮೂರನೇ ಅಲೆಯ ಈ ಹೊತ್ತಿನಲ್ಲಿ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 6 ಸಾವಿರದ 317 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಮೊನ್ನೆಗಿಂತ ಸುಮಾರು 1 ಸಾವಿರದಷ್ಟು ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. 318 ಮಂದಿ ಕಳೆದ 24 ಗಂಟೆಗಳಲ್ಲಿ ಮೃಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಹೀಗಾಗಿ  ಜನರು ಮತ್ತೆ ಆತಂಕಕ್ಕೊಳಗಾಗಿದ್ದಾರೆ.

 

Share Post