Politics

Karnataka Exitpoll; ಸಿದ್ದರಾಮಯ್ಯ ಸಂಪುಟಕ್ಕೆ ಮೇಜರ್‌ ಸರ್ಜರಿಯಾಗುತ್ತಾ..?

ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ.. ಗ್ಯಾರೆಂಟಿ ಯೋಜನೆಗಳ ಜಾರಿ ಕಾರಣದಿಂದಾಗಿ 20 ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್‌ ಪ್ರಯತ್ನ ಮಾಡಿತ್ತು.. ಕೊನೆಗೆ ಆಂತರಿಕ ಸಮೀಕ್ಷೆ ಪ್ರಕಾರ 14 ಸ್ಥಾನಗಳನ್ನು ಗೆಲ್ಲಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿತ್ತು.. ಆದ್ರೆ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳೂ ಕೂಡಾ ಕಾಂಗ್ರೆಸ್‌ಗೆ ಸಿಂಗಲ್‌ ಡಿಜಿಟ್‌ ಕೊಟ್ಟಿದೆ.. ಎಕ್ಸಿಟ್‌ ಪೋಲ್‌ನಂತೆಯೇ ಫಲಿತಾಂಶವೂ ಬಂದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ತೀವ್ರ ಮುಖಭಂಗವಾಗಬಹುದು..

ಅಂದಹಾಗೆ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಸಿಎಂ, ಡಿಸಿಎಂ ಸೇರಿ ಎಲ್ಲಾ ಸಚಿವರಿಗೂ ಟಾಸ್ಕ್‌ ನೀಡಿತ್ತು.. ಉತ್ತಮ ಫಲಿತಾಂಶ ಬರದಿದ್ದರೆ ಸಂಪುಟಕ್ಕೆ ಮೇಜರ್‌ ಸರ್ಜರಿ ಮಾಡೋದಾಗಿಯೂ ಹೇಳಿತ್ತು ಎನ್ನಲಾಗಿದೆ… ಹೀಗಾಗಿಯೇ ಸಚಿವರ ಸಂಬಂಧಿಕರು, ಮಕ್ಕಳಿಗೇ ಟಿಕೆಟ್‌ಗಳನ್ನು ನೀಡಲಾಗಿತ್ತು.. ಪ್ರಜ್ವಲ್‌ ರೇವಣ್ಣ ವಿಚಾರ ಸೇರಿದಂತೆ ಹಲವು ವಿಚಾರಗಳು ಕಾಂಗ್ರೆಸ್‌ಗೆ ಉತ್ತಮ ವಾತಾವರಣ ನಿರ್ಮಾಣ ಮಾಡುತ್ತವೆ ಎಂದು ಹೇಳಲಾಗಿತ್ತು.. ಆದ್ರೆ ಎಕ್ಸಿಟ್‌ ಪೋಲ್‌ ಪ್ರಕಾರ ಎಲ್ಲವೂ ಉಲ್ಟಾ ಆಗಿದೆ.. ಹೀಗಾಗಿ, ಫಲಿತಾಂಶದ ನಂತರ ಸಿದ್ದರಾಮಯ್ಯ ಸಂಪುಟಕ್ಕೆ ಮೇಜರ್‌ ಸರ್ಜರಿಯಾಗಬಹುದು ಎಂದು ಹೇಳಲಾಗುತ್ತಿದೆ..

ಇನ್ನು ಲೋಕಸಭಾ ಚುನಾವಣೆಯ ನಂತರ ಡಿ.ಕೆ.ಶಿವಕುಮಾರ್‌ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಲಾಗುತ್ತದೆ ಎಮಬ ಮಾತುಗಳು ಇದ್ದವು.. ಇತ್ತ ಸಿದ್ದರಾಮಯ್ಯ ನೇತೃತ್ವದಲ್ಲಿ ಈ ಭಾರಿ ಲೋಕಸಭಾ ಚುನಾವಣೆ ಎದುರಿಸಲಾಗಿತ್ತು.. ಈ ಹಿನ್ನೆಲೆಯಲ್ಲಿ ಸಿಎಂ ಸ್ಥಾನವನ್ನು ಕೂಡಾ ಬದಲಾಯಿಸುವ ನಿರ್ಧಾರಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಮುಂದಾದೂ ಅಚ್ಚರಿ ಇಲ್ಲ ಎನ್ನಲಾಗ್ತಿದೆ.. ಇನ್ನೊಂದೆಡೆ, ದಲಿತ ಸಿಎಂ ಕೂಗು ಮುನ್ನೆಲೆಗೆ ಬರುವ ಎಲ್ಲಾ ಲಕ್ಷಣಗಳೂ ಇವೆ..

NewsX – D-Dynamics Exit Poll 2024

ಬಿಜೆಪಿ – 21

ಕಾಂಗ್ರೆಸ್‌ – 05

ಜೆಡಿಎಸ್‌ -02

ಟುಡೇಸ್‌ ಚಾಣಕ್ಯ;
ಬಿಜೆಪಿ+ಜೆಡಿಎಸ್‌ = 24 +/- 04
ಕಾಂಗ್ರೆಸ್‌ = 04 +/- 4

ಪೋಲ್ ಸ್ಟ್ರಾಟ್‌;‌

ಬಿಜೆಪಿ – 18

ಕಾಂಗ್ರೆಸ್‌ – 08

ಜೆಡಿಎಸ್‌ – 02

ಸಿ-ವೋಟರ್‌;

ಬಿಜೆಪಿ – 23

ಕಾಂಗ್ರೆಸ್‌ – 03-05

ಜೆಡಿಎಸ್‌ – 02

ಆಕ್ಸಿಸ್‌ ಮೈ ಇಂಡಿಯಾ;

=================
ಬಿಜೆಪಿ – 20-22
ಕಾಂಗ್ರೆಸ್‌ – 03-05
ಜೆಡಿಎಸ್‌ – 02-03

 

Share Post