Politics

ವರುಣಾದಲ್ಲಿ ಸಿಎಂ ಸಿದ್ದರಾಮಯ್ಯ ಕೇಳಿದ್ದು 60 ಸಾವಿರ ಲೀಡ್‌, ಜನ ಕೊಟ್ಟಿದ್ದು ಮಾತ್ರ ತುಂಬಾನೇ ಕಡಿಮೆ!

ಚಾಮರಾಜನಗರ; ಸಿಎಂ ಸಿದ್ದರಾಮಯ್ಯ ಅವರಿಗೆ ಚಾಮರಾಜನಗರ ಹಾಗೂ ಮೈಸೂರು ಲೋಕಸಭಾ ಕ್ಷೇತ್ರಗಳು ಪ್ರತಿಷ್ಠೆಯ ಕ್ಷೇತ್ರಗಳಾಗಿದ್ದವು.. ಮೈಸೂರಿನಲ್ಲಿ ಯದುವೀರ್‌ ಸ್ಪರ್ಧೆ ಮಾಡಿದ್ದರಿಂದ ಅಲ್ಲಿ ಕಾಂಗ್ರೆಸ್‌ ಸೋಲು ಖಚಿತವಾಗಿತ್ತು.. ಮಾನ ಉಳಿಸಿಕೊಳ್ಳಲು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಾದರೂ ಕಾಂಗ್ರೆಸ್‌ ಅಭ್ಯರ್ಥಿಗೆ ಭಾರೀ ಅಂತರದ ಗೆಲುವು ದೊರಕಿಸಿಕೊಡಲು ಸಿಎಂ ಸಿದ್ದರಾಮಯ್ಯ ಪಣ ತೊಟ್ಟಿದ್ದರು.. ಅದಕ್ಕಾಗಿಯೇ ಅವರು ಮೂರು ದಿನಗಳ ಕಾಲ ಖಾಸಗಿ ರೆಸಾರ್ಟ್‌ನಲ್ಲಿ ಕುಳಿತು ತಂತ್ರಗಾರಿಕೆ ನಡೆಸಿದ್ದರು.. ಆಪರೇಷನ್‌ ಹಸ್ತ ನಡೆಸಿದ್ದರು.. ಇದೆಲ್ಲದರ ಫಲವಾಗಿ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಗೆಲುವೇನೋ ಸಾಧಿಸಿದ್ದಾರೆ.. ಆದ್ರೆ, ಸಿದ್ದರಾಮಯ್ಯ ಅವರು ಬಯಸಿದಂತೆ ಅವರ ತವರು ಕ್ಷೇತ್ರ ವರುಣಾದಲ್ಲಿ ಲೀಡ್‌ ಬಂದಿಲ್ಲ.. ಇತ್ತ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಅವರ ತವರು ಹಾಗೂ ತಂದೆ ಮಹಾದೇವಪ್ಪ ಅವರ ಕ್ಷೇತ್ರ ಟಿ ನರಸೀಪುರದಲ್ಲೂ ಅತಿ ಕಡಿಮೆ ಲೀಡ್‌ ಬಂದಿದೆ.. ಜನರ ನೀಡಿರುವ ಇದರ ಹಿಂದಿನ ಸಂದೇಶ ಏನು ಎಂಬುದರ ಬಗ್ಗೆ ಜನರು ಚರ್ಚೆ ಮಾಡುತ್ತಿದ್ದಾರೆ..

ಸಿಎಂ ಕ್ಷೇತ್ರದಲ್ಲಿ ವರುಣಾದಲ್ಲಿ ಎಷ್ಟು ಲೀಡ್‌ ಬಂತು..?;

ವರುಣಾ ಕ್ಷೇತ್ರ ಮೈಸೂರು ಜಿಲ್ಲೆಗೆ ಸೇರಿದ್ದರೂ ಲೋಕಸಭೆಯಲ್ಲಿ ಚಾಮರಾಜನಗರ ವ್ಯಾಪ್ತಿಗೆ ಬರುತ್ತದೆ.. ಇದು ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರ.. ಈ ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಸಿಎಂ ಸಿದ್ದರಾಮಯ್ಯ ಅವರು ನಾನು ಸಿಎಂ ಆಗಿ ಮುಂದುವರೆಯಬೇಕಾದರೆ ವರುಣಾದಲ್ಲಿ 60 ಸಾವಿರ ಲೀಡ್‌ ಕೊಡಬೇಕು ಎಂದು ಕೇಳಿದ್ದರು.. ಆದ್ರೆ ಸಿಕ್ಕಿರೋದು 33,352 ಲೀಡ್‌ ಮಾತ್ರ.. ಒಳ್ಳೆಯ ಲೀಡೇ ಆದರೂ, ಸಿಎಂ ಬಯಸಿದಷ್ಟು ಅಂತರದ ಮತಗಳು ಬಂದಿಲ್ಲ.. ಇಲ್ಲಿ ಬಿಜೆಪಿ ಅಭ್ಯರ್ಥಿ  73852 ಮತ ಪಡೆದರೇ ಕಾಂಗ್ರೆಸ್ ಅಭ್ಯರ್ಥಿ 1,07203 ಮತ ಪಡೆದಿದ್ದಾರೆ..

ಅಪ್ಪನ ಕ್ಷೇತ್ರದಲ್ಲಿ ಅತಿ ಕಡಿಮೆ ಲೀಡ್‌ ಪಡೆದ ಸುನಿಲ್‌ ಬೋಸ್‌!;

ಟಿ ನರಸೀಪುರ ಸುನಿಲ್‌ ಬೋಸ್‌ ಹಾಗೂ ಅವರ ತಂದೆ, ಸಚಿವ ಮಹದೇವಪ್ಪ ಅವರ ತವರು ಕ್ಷೇತ್ರ.. ಸಹಜವಾಗಿಯೇ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್‌ ಬರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.. ಆದ್ರೆ ಟಿ ನರಸೀಪುರದ ಮತದಾರರು ಸುನಿಲ್‌ ಬೋಸ್‌ಗೆ ಹೆಚ್ಚು ಮಣೆ ಹಾಕಿಲ್ಲ.. ಇಲ್ಲಿ ಅತ್ಯಂತ ಕಡಿಮೆ ಲೀಡ್‌ ಸಿಕ್ಕಿದೆ.. ಅದೂ ಕೂಡಾ ಮೊದಲ ಏಳು ಸುತ್ತುಗಳ ಮತ ಎಣಿಕೆಯಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿಗೇ ಲೀಡ್‌ ಇತ್ತು..  ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ 76722 ಮತ ಪಡೆದಿದ್ದಾರೆ.. ಬಿಜೆಪಿ ಅಭ್ಯರ್ಥಿ ಬಾಲರಾಜು ಅವರು 73801 ಮತಗಳನ್ನು ಪಡೆದುದಿದ್ದು, ಇಲ್ಲಿ ಕಾಂಗ್ರೆಸ್‌ ಲೀಡ್‌ 2921 ಮತಗಳು ಮಾತ್ರ..

ಎಚ್‌.ಡಿ.ಕೋಟೆಯಲ್ಲಿ ಕಾಂಗ್ರೆಸ್‌ಗೆ ಅತಿಹೆಚ್ಚು ಲೀಡ್‌;

ಎಚ್‌.ಡಿ.ಕೋಟೆಯಲ್ಲಿ ಸುನಿಲ್‌ ಬೋಸ್‌ ಅವರು 96,735 ಮತಗಳನ್ನು ಪಡೆದರೆ ಬಿಜೆಪಿ ಬಾಲರಾಜ್‌ 72992 ಮತಗಳನ್ನು ಪಡೆದಿದ್ದಾರೆ.. ಇಲ್ಲಿ ಸುನಿಲ್‌ ಬೋಸ್‌ಗೆ 23, 736 ಲೀಡ್ ಸಿಕ್ಕಿದೆ.. ಇನ್ನು ಕಾಂಗ್ರೆಸ್‌ ಶಾಸಕರೇ ಇರುವ ನಂಜನಗೂಡು ಕ್ಷೇತ್ರದಲ್ಲಿ ಸುನಿಲ್‌ ಬೋಸ್‌ಗೆ 20,253, ಕೊಳ್ಳೇಗಾಲದಲ್ಲಿ 33,016, ಚಾಮರಾನಗರದಲ್ಲಿ 20026 ಹಾಗೂ ಗುಂಡ್ಲುಪೇಟೆಯಲ್ಲಿ 17,982 ಲೀಡ್‌ ಪಡೆದುಕೊಂಡಿದ್ದಾರೆ.. ಈ ಮೂಲಕ ಸುನಿಲ್‌ ಬೋಸ್‌ 1 ಲಕ್ಷದ 88 ಸಾವಿರದ 706 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ..

 

Share Post