ಉಪಚುನಾವಣೆ; ಚನ್ನಪಟ್ಟಣ ಜೆಡಿಎಸ್‌ಗೆ, ಸಿ.ಪಿ.ಯೋಗೇಶ್ವರ್‌ಗೆ ನಿರಾಸೆ!
ಬೆಂಗಳೂರು; ರಾಜ್ಯದಲ್ಲಿ ಖಾಲಿಯಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದೆ.. ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ.. ಈ ಕ್ಷೇತ್ರಗಳಿಗೆ ಯಾರು ಅಭ್ಯರ್ಥಿಗಳಾಗುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಯಾರು ಅನ್ನೋದೇ ಕುತೂಹಲದ ಸಂಗತಿ.. ಅದ್ರಲ್ಲೂ ಕೂಡಾ ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ಮುಂದಾಗಿದ್ದರೆ, ಸಿ.ಪಿ.ಯೋಗೇಶ್ವರ್ ನನಗೇ ಟಿಕೆಟ್ ಬೇಕು ಅಂತ ಪಟ್ಟು ಹಿಡಿದಿದ್ದಾರೆ.. ಹೀಗಿರುವಾಗಲೇ 2:1 ಅನುಪಾತದಲ್ಲಿ ಸೀಟು ಹಂಚಿಕೆಯಾಗಿದೆ ಎಂದು ಹೇಳಲಾಗುತ್ತಿದೆ..
ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಡಲಿದ್ದು, ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.. ಬಹುತೇಕ ಇದೇ ಮೈತ್ರಿ ಸೂತ್ರ ಫೈನಲ್ ಎಂದು ಹೇಳಲಾಗುತ್ತಿದೆ.. ಇದರಿಂದಾಗಿ ಸಿ.ಪಿ.ಯೋಗೇಶ್ವರ್ ನಿರಾಸೆಗೊಂಡಿದ್ದಾರೆ.. ಇನ್ನೊಂದೆಡೆ ಅವರು ನಾನು ಸ್ಪರ್ಧಿಸಿಯೇ ತೀರುತ್ತೇನೆ ಎಂದು ಹೇಳುತ್ತಿದ್ದಾರೆ.. ಬೆಂಬಲಿಗರ ಸಭೆಯನ್ನೂ ಕರೆದಿದ್ದಾರೆ.. ಒಂದು ವೇಳೆ ಟಿಕೆಟ್ ಸಿಗದೇ ಹೋದರೆ ಯೋಗೇಶ್ವರ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ಕುತೂಹಲ..
ಒಂದು ವೇಳೆ ಯೋಗೇಶ್ವರ್ ಅವರು ಪಕ್ಷೇತರವಾಗಿ ನಿಂತರೆ ಜೆಡಿಎಸ್ ಅಭ್ಯರ್ಥಿಗೆ ಸಂಕಷ್ಟವಾಗಲಿದೆ.. ಇಲ್ಲದೇ ಹೋದರೆ ಅವರು ಕಾಂಗ್ರೆಸ್ ಸೇರಿ ಅಲ್ಲಿಂದ ಸ್ಪರ್ಧೆ ಮಾಡಿದರೂ ಜೆಡಿಎಸ್‌ಗೆ ಕಷ್ಟವಾಗಬಹುದು.. ಹೀಗಾಗಿ, ಅಭ್ಯರ್ಥಿಗಳ ಘೋಷಣೆ ಬಳಿಕ ಚನ್ನಪಟ್ಟಣದ ರಾಜಕೀಯ ಚಿತ್ರಣ ಏನು ಗೊತ್ತಾಗಲಿದೆ.. ಈಗಾಗಲೇ ರಾಜ್ಯ ನಾಯಕರು ಚರ್ಚೆ ನಡೆಸಿ, ಚನ್ನಪಟ್ಟಣ ಜೆಡಿಎಸ್‌ಗೆ ಹಾಗೂ ಶಿಗ್ಗಾಂವಿ, ಸಂಡೂರು ಬಿಜೆಪಿಗೆ ಎಂದು ಮಾತುಕತೆಗಳು ನಡೆದಿವೆ ಎನ್ನಲಾಗಿದೆ.. ಬಿಜೆಪಿ ಹೈಕಮಾಂಡ್ ಇದಕ್ಕೆ ಒಪ್ಪಿಗೆ ಸೂಚಿಸಿದರೆ ಅಭ್ಯರ್ಥಿಗಳ ಘೋಷಣೆಯಾಗುತ್ತದೆ ಎಂದು ಹೇಳಲಾಗುತ್ತಿದೆ..
ಚನ್ನಪಟ್ಟಣದಲ್ಲಿ ಜೆಡಿಎಸ್‌ನಿಂದ ಸ್ಪರ್ಧೆಗಿಳಿಸುವುದಾದರೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಹುತೇಕ ಕನ್ಪರ್ಮ್ ಆಗಿದೆ.. ಒಂದು ವೇಳೆ ನಿಖಿಲ್ ಹಂಜರಿಯುವುದಾದರೆ ಅವರ ತಾಯಿ ಅನಿತಾ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ..