Politics

ಸಚಿವರ ವಿರುದ್ಧ ನೂರಕ್ಕೆ ನೂರರಷ್ಟು ದೂರು ಕೊಡ್ತೀನಿ; ಶಾಸಕ ರೇಣುಕಾಚಾರ್ಯ

ಬೆಂಗಳೂರು: ನಾನು ನೂರಕ್ಕೆ ನೂರರಷ್ಟು ಸಚಿವರ ವಿರುದ್ಧ ದೂರು ನೀಡುತ್ತೇನೆ. ಸಚಿವರ ಕಾರ್ಯವೈಖರಿ ಹೇಗಿದೆ ಎಂದು ಹೈಕಮಾಂಡ್‌ಗೆ ವಿವರಿಸುತ್ತೇನೆ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಹಲವು ಸಚಿವರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದ್ದೆ. ಈ ಬಗ್ಗೆ ಅರುಣ್‌ ಸಿಂಗ್‌ ಅವರು ದೆಹಲಿಗೆ ಬಂದು ಮಾತನಾಡುವಂತೆ ಆಹ್ವಾನಿಸಿದ್ದಾರೆ. ಹೀಗಾಗಿ ಸೋಮವಾರ ದೆಹಲಿಗೆ ಹೋಗುತ್ತಿದ್ದೇನೆ. ಮೂರು ದಿನ ಅಲ್ಲಿಯೇ ಇರುತ್ತೇನೆ. ಹಲವು ವರಿಷ್ಠ ನಾಯಕರನ್ನು ಭೇಟಿಯಾಗುತ್ತೇನೆ. ಈ ವೇಳೆ ರಾಜ್ಯ ಸಂಪುಟದಲ್ಲಿರುವ ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ವಿವರಿಸಿ ಹೇಳುತ್ತೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಮೂರು ದಿನದ ಹಿಂದೆ ಬಿಜೆಪಿ ನಾಯಕ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರು, ರೇಣುಕಾಚಾರ್ಯ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ಇದರ ಜೊತೆಗೆ ಸಿಎಂ ಬಸವರಾಜ ಬೊಮ್ಮಾಯಿಯವರಿಗೂ ದೆಹಲಿಗೆ ಬರುವಂತೆ ಬುಲಾವ್‌ ನೀಡಲಾಗಿದೆ. ಈ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿದೆರಿದೆ. ನಿನ್ನೆ ರೇಣುಕಾಚಾರ್ಯ ಅವರ ನಿವಾಸಕ್ಕೆ ಹಲವು ಶಾಸಕರು ಭೇಟಿ ನೀಡಿ ಮಾತುಕತೆ ನಡೆಸಿದ್ದನ್ನು ನೆನಪಿಸಿಕೊಳ್ಳಬಹುದು.

Share Post