Politics

ಮೇಕೆದಾಟು ವಿಚಾರ : ನಾನು ಮಾಜಿ ಪ್ರಧಾನಿ, ಪ್ರತಿಕ್ರಿಯೆ ನೀಡಲ್ಲ – HDD

ಬೆಂಗಳೂರು : ಮೇಕೆದಾಟು ಸಂಬಂಧ ಪಟ್ಟಂತೆ ಮಾಜಿ ಪ್ರಧಾನಿ HD ದೇವೆಗೌಡರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮೇಕೆದಾಟು ಕುರಿತು ಯಾರು ಏನು ಬೇಕಾದರೂ ಹೇಳಲಿ ನಾನು ಏನನ್ನೂ ಪ್ರತಿಕ್ರಿಯಿಸುವುದಿಲ್ಲ ಎಂದು ಜೆಡಿಎಸ್‌ ವರಿಷ್ಠರು ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತಿಗೆ ಸಿಕ್ಕ ದೇವೆಗೌಡರಿಗೆ ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್ ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಕೇಳಿದಕ್ಕೆ ದೇವೆಗೌಡರು ನಾನು ಮಾಜಿ ಪ್ರಧಾನಿ, ಮೇಕೆದಾಟು ವಿಚಾರ ಕೋರ್ಟ್‌ನಲ್ಲಿ ಇದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ನಾನು ಮಾತನಾಡುವುದು ಸರಿ ಅಲ್ಲ, ಯಾರು ಏನೇ ಮಾತನಾಡಿದರು ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಜನವರಿ 25ಕ್ಕೆ ವಿಚಾರಣೆ ಇದೆ, ಅಲ್ಲಿ ಏನ್‌ ತೀರ್ಮಾನ ಬರುತ್ತೋ ನೋಡೋಣ ಎಂದು ದೇವೆಗೌಡರು ಹೇಳಿದ್ದಾರೆ.

Share Post