DistrictsPolitics

ಎಂಥಾ ನಾಯಕನೇ ಆದ್ರೂ ನನ್ನಂತೇ ಸಿದ್ದು ಅಭ್ಯರ್ಥಿ; ವಿ.ಸೋಮಣ್ಣ

ಮೈಸೂರು; ವರುಣಾ ಕ್ಷೇತ್ರಕ್ಕೆ ಟಿಕೆಟ್‌ ಘೋಷಣೆಯಾದ ಮೇಲೆ ಸಚಿವ ವಿ.ಸೋಮಣ್ಣ ಮೊದಲ ಬಾರಿಗೆ ಮೈಸೂರಿಗೆ ಭೇಟಿ ಕೊಟ್ಟಿದ್ದಾರೆ. ಆಗಲೇ ಸೋಮಣ್ಣ ರಾಜಕೀಯ ತಂತ್ರಗಾರಿಕೆ ಶುರು ಮಾಡಿದ್ದಾರೆ. ಮೊದಲಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದ ಸೋಮಣ್ಣ ಅವರು ಸುತ್ತೂರು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

ವರುಣಾ ಕ್ಷೇತ್ರದಲ್ಲಿ ಸಾಕಷ್ಟು ಲಿಂಗಾಯತ ಮತದಾರರಿದ್ದಾರೆ. ಅವರೆಲ್ಲರೂ ಸುತ್ತೂರು ಮಠಕ್ಕೆ ನಡೆದುಕೊಳ್ಳುತ್ತಾರೆ. ಹೀಗಾಗಿ ಸುತ್ತೂರು ಶ್ರೀಗಳ ಆಶಿರ್ವಾದ ಸಿಕ್ಕರೆ, ವರುಣಾ ಕ್ಷೇತ್ರದ ಲಿಂಗಾಯತ ಮತಗಳನ್ನು ಸೆಳೆಯೋದಕ್ಕೆ ಸೋಮಣ್ಣ ಅವರಿಗೆ ಸುಲಭವಾಗುತ್ತೆ. ಈ ಕಾರಣಕ್ಕಾಗಿ ಸೋಮಣ್ಣ ಅವರು ಮೊದಲಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು. ಶ್ರೀಗಳ ಜೊತೆ ಕೆಲಕಾಲ ಚರ್ಚೆ ನಡೆಸಿದರು. ಶ್ರೀಗಳಿಂದ ಆಶಿರ್ವಾದ ಪಡೆದರು. ಅನಂತರ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಗೆಲುವಿಗಾಗಿ ಪ್ರಾರ್ಥನೆ ಮಾಡಿದರು.

ಇನ್ನು ಸುತ್ತೂರು ಮಠದ ಬಳಿ ಮಾತನಾಡಿದ ಶ್ರೀಗಳು, ಸಿದ್ದರಾಮಯ್ಯನವರು ಸಿಎಂ ಆಗಿದ್ದವರಾಗಿರಬಹುದು. ಅವರು ಎಂಥಾ ನಾಯಕರೇ ಆಗಿರಬಹುದು. ಆದ್ರೆ ಕ್ಷೇತ್ರದಲ್ಲಿ ನನ್ನಂತೆ ಅವರೂ ಕೂಡಾ ಒಬ್ಬ ಅಭ್ಯರ್ಥಿ ಎಂದು ಹೇಳಿದರು. ಎಲ್ಲರೂ ಸೇರಿ ನನ್ನನ್ನು ವರುಣಾ ಕ್ಷೇತ್ರದಲ್ಲಿ ಗೆಲ್ಲಿಸುತ್ತಾರೆಂಬ ವಿಶ್ವಾಸ ಇದೆ ಎಂದು ಸೋಮಣ್ಣ ಇದೇ ವೇಳೆ ಹೇಳಿದರು. ನಾಳೆಯಿಂದಲೇ ನಾನು ವರುಣಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುತ್ತೇವೆ. ಎಲ್ಲಾ ಹಳ್ಳಿಗೂ ಭೇಟಿ ನೀಡಿ ಮತಯಾಚನೆ ಮಾಡುತ್ತೇನೆ ಎಂದು ಸೋಮಣ್ಣ, ವರುಣಾ ಕ್ಷೇತ್ರದಲ್ಲಿ ಏಪ್ರಿಲ್‌ 17ರಂದು ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಏಪ್ರಿಲ್‌ 19ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಹೇಳಿದ್ದಾರೆ.

Share Post