Politics

ಪಾದಯಾತ್ರೆ ವಿಚಾರ – ಮನೆದೇವರಿಗೆ ಪೂಜೆ ಸಲ್ಲಿಸಿದ ಡಿಕೆಶಿ

ರಾಮನಗರ : ಮೇಕೆದಾಟು ಪಾದಯಾತ್ರೆ ಮೂಲಕ ಹೋರಾಟ ನಡೆಸಲು ಕಾಂಗ್ರೆಸ್‌ ಸಿದ್ಧವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಕುಟುಂಬಸ್ಥರ ಜೊತೆ ತೆರಳಿ ತಮ್ಮ ಮನೆದೇವರಾದ ಕೆಂಕೇರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದೇವರಿಗೆ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ” ನಮ್ಮ ಪಾದಯಾತ್ರೆ ಯಶಸ್ವಿಯಾಗಲೆಂದು ದೇವರ ಬಳಿ ಪ್ರಾರ್ಥಿಸಿಕೊಂಡಿದ್ದೇನೆ. ನಾವು ಪ್ರೊಟೆಸ್ಟ್‌ ಮಾಡ್ತಿಲ್ಲ. ನಾವು ಜನಾಂದೋಲನ ನಡೆಸುತ್ತಿದ್ದೇವೆ. ಸರ್ಕಾರ ಏನೇ ನಿರ್ಬಂಧ ಹಾಕಿದರೂ ನಾವು ನೀರಿಗಾಗಿ ನಾವು ಪಾದಯಾತ್ರೆ ಮಾಡೇ ತೀರುತ್ತೇವೆ.” ಎಂದು ಹೇಳಿದ್ದಾರೆ.

ರಾಮನಗರ ಜಿಲ್ಲಾಡಳಿತ ಪ್ರವಾಸಿ ತಾಣಗಳಿಗೆ ಹೇರಿರುವ ನಿರ್ಬಂಧ ಕುರಿತು ಮಾತನಾಡಿದ ಡಿಕೆಶಿ, “ರಾಜ್ಯದಲ್ಲಿ ಕೊರೊನಾ ಎಲ್ಲಿದೆ ? ಒಬ್ಬರಾದರೂ ಐಸಿಯುನಲ್ಲಿ ಇದ್ದಾರಾ ? ಇದು ರಾಜಕೀಯದ ಹುನ್ನಾರ ಅಷ್ಟೇ. ರಾಮನಗರ ಜಿಲ್ಲೆಯಲ್ಲಿ ಎಷ್ಟು ಕೊರೊನಾ ಕೇಸ್‌ ಇದೆ ಎಂಬುದರ ಕುರಿತು ನನ್ನ ಬಳಿಯೂ ಮಾಹಿತಿ ಇದೆ. ನಾನು ಕೂಡ ರಿಯಾಲಿಟಿ ಚೆಕ್‌ ನಡೆಸಿದ್ದೇನೆ. ನಮ್ಮ ಈ ಪಾದಯಾತ್ರೆ ಜನಾಂದೋಲನ ನಿಲ್ಲದು. ನಾನು ಮತ್ತು ಸಿದ್ಧರಾಮಯ್ಯ ಪಾದಯಾತ್ರೆ ಮಾಡ್ತೀವಿ. ನಮ್ಮ ಹಿಂದೆ ಕೆಲವು ಶಾಸಕರು, ಕಾರ್ಯಕರ್ತರೂ ಬರ್ತಾರೆ. ಕೇಸ್‌ ಹಾಕೋದಿದ್ದರೆ ಎಲ್ಲರ ಮೇಲು ಹಾಕಲಿ” ಎಂದರು .

Share Post