DistrictsPolitics

ಉಚಿತ ವಿದ್ಯುತ್‌ ಪಡೆಯಲು ಡೆಡ್‌ಲೈನ್‌; ಜುಲೈ 25ರೊಳಗೆ ಅರ್ಜಿ ಸಲ್ಲಿಸಿ!

ಚಿಕ್ಕಮಗಳೂರು; ಇಂದಿನಿಂದ ಉಚಿತ ವಿದ್ಯುತ್‌ ಪಡೆಯುವ ಗೃಹ ಜ್ಯೋತಿ ಯೋಜನೆ ಜಾರಿಗೆ ಬಂದಿದೆ. ಅರ್ಜಿ ಸಲ್ಲಿಸಿದವರಿಗೆ ಉಚಿತ ವಿದ್ಯುತ್‌ ಸಿಗಲಿದೆ. ಜುಲೈ 25ರೊಳಗೆ ಅರ್ಜಿ ಸಲ್ಲಿಸಿದವರಿಗೆ ಜುಲೈ ತಿಂಗಳ ವಿದ್ಯುತ್‌ ಉಚಿತವಾಗಿ ಸಿಗಲಿದೆ ಎಂದು ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಉಚಿತ ವಿದ್ಯುತ್‌ ಬೇಕೆಂದವರು ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

ಈಗಾಗಲೇ 80 ಲಕ್ಷಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ತಿಂಗಳ 25ರವರೆಗೂ ಯಾರು ಯಾರು ಅರ್ಜಿ ಸಲ್ಲಿಸುತ್ತಾರೋ ಅವರಿಗೆ ಜುಲೈ ತಿಂಗಳಿಂದಲೇ ಉಚಿತ ವಿದ್ಯುತ್‌ ಯೋಜನೆ ಅನ್ವಯವಾಗುತ್ತದೆ. ಅನಂತರ ಅರ್ಜಿ ಸಲ್ಲಿಸಿದರೆ, ಉಚಿತ ವಿದ್ಯುತ್‌ ಮುಂದಿನ ತಿಂಗಳಿಂದ ಸಿಗಲಿದೆ ಎಂದು ಸಚಿವರು ಹೇಳಿದರು.

Share Post