BengaluruPolitics

ಸಿ.ಪಿ.ಯೋಗೇಶ್ವರ್‌ ಪರ ನಿಂತ ಬಿಜೆಪಿ ನಾಯಕರು!; ಸಿಗುತ್ತಾ ಟಿಕೆಟ್‌..?

ಬೆಂಗಳೂರು; ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಯಾರು ಅನ್ನೋದು ಕುತೂಲದ ವಿಚಾರ.. ಒಂದು ಕಡೆ ಶತಾಯಗತಾಯ ನನಗೇ ಟಿಕೆಟ್‌ ಬೇಕು ಎಂದು ಸಿ.ಪಿ.ಯೋಗೇಶ್ವರ್‌ ಹೇಳುತ್ತಿದ್ದಾರೆ.. ಇನ್ನೊಂದು ಕಡೆ ಮಾಜಿ ಸಿಎಂ ಕುಮಾರ ಸ್ವಾಮಿ ಬಿಜೆಪಿ ಹೈಕಮಾಂಡ್‌ ತೀರ್ಮಾನ ನನಗೆ ಬಿಟ್ಟಿದೆ.. ಚನ್ನಪಟ್ಟಣ ನಿಮ್ಮ ಕ್ಷೇತ್ರ.. ಯಾರನ್ನು ಕಣಕ್ಕಿಳಿಸಬೇಕು.. ಯಾವ ಪಕ್ಷದಿಂದ ಕಣಕ್ಕಿಳಿಸಬೇಕು ಎಂಬುದನ್ನು ನೀವೇ ತೀರ್ಮಾನ ಮಾಡಿ ಎಂದು ಹೇಳಿದ್ದಾರೆ.. ಹೀಗಾಗಿ ನಾವೆಲ್ಲಾ ಕೂತು ತೀರ್ಮಾನ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ..

ಜೆಡಿಎಸ್‌ನಿಂದಲೇ ಅಭ್ಯರ್ಥಿಯನ್ನು ಕಣಕ್ಕಿಳಿಸೋದಕ್ಕೆ ಕುಮಾರಸ್ವಾಮಿ ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.. ನಿಖಿಲ್‌ ಕುಮಾರಸ್ವಾಮಿ ಅಥವಾ ಅನಿತಾ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ.. ಈ ಬಗ್ಗೆ ಕುಮಾರಸ್ವಾಮಿಯವರು ತಮ್ಮ ಪಕ್ಷದ ಮುಖಂಡರನ್ನು ಕರೆಸಿ ಚರ್ಚೆ ನಡೆಸಿದ್ದಾರೆ.. ಈ ಸಭೆಯಲ್ಲಿ ಹೆಚ್ಚಿನ ಜನರು ನಿಖಿಲ್‌ ಕುಮಾರಸ್ವಾಮಿಯವರ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.. ನಿಖಿಲ್‌ ಕುಮಾರಸ್ವಾಮಿ ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದಾರೆ.. ಹೀಗಾಗಿ ಜನರಿಗೆ ಅವರ ಬಗ್ಗೆ ಸಿಂಪತಿ ಇದೆ.. ಈ ಕಾರಣಕ್ಕೆ ಅವರನ್ನೇ ಕಣಕ್ಕಿಳಿಸಿದರೆ ಗೆಲ್ಲಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.. ಆದ್ರೆ ಸಿ.ಪಿ.ಯೋಗೇಶ್ವರ್‌ ಅವರ ಮನವೊಲಿಸಿ, ನಿಖಿಲ್‌ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದರೆ ಗೆಲ್ಲಲು ಸಾಧ್ಯ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ ಎನ್ನಲಾಗಿದೆ..

ಆದ್ರೆ ಇನ್ನೊಂದು ಕಡೆ ಸಿ.ಪಿ.ಯೋಗೇಶ್ವರ್‌ ಅವರು ಶತಾಯಗತಾಯ ನಾನೇ ಅಭ್ಯರ್ಥಿಯಾಗಬೇಕು ಎಂದು ಹೇಳುತ್ತಿದ್ದಾರೆ.. ದೊಡ್ಡ ಮಟ್ಟದಲ್ಲಿ ಅವರು ಲಾಬಿ ನಡೆಸುತ್ತಿದ್ದಾರೆ.. ಚನ್ನಪಟ್ಟಣ ಕೂಡಾ ಬಿಜೆಪಿಗೇ ದಕ್ಕಬೇಕು.. ನನಗೇ ಟಿಕೆಟ್‌ ನೀಡಬೇಕು ಎಂದು ಯೋಗೇಶ್ವರ್‌ ಪಟ್ಟು ಹಿಡಿದಿದ್ದಾರೆ.. ಹೀಗಿರುವಾಗಲೇ ಬಿಜೆಪಿ ಬಹುತೇಕ ನಾಯಕರು ಸಿ.ಪಿ.ಯೋಗೇಶ್ವರ್‌ ಅವರ ಪರವಾಗಿಯೇ ನಿಂತಿದ್ದಾರೆ.. ಯೋಗೇಶ್ವರ್‌ ಸ್ಪರ್ಧೆ ಮಾಡಿದರೆ ಮಾತ್ರ ಚನ್ನಪಟ್ಟಣದಲ್ಲಿ ಗೆಲುವು ಸಾಧ್ಯ ಎಂದು ಹೇಳುತ್ತಿದ್ದಾರೆ.. ಹಲವು ಬಿಜೆಪಿ ಮುಖಂಡರು ಬಹಿರಂಗವಾಗಿಯೇ ಚನ್ನಪಟ್ಟಣಕ್ಕೆ ಯೋಗೇಶ್ವರ್‌ ಅಭ್ಯರ್ಥಿಯಾದರೆ ಮಾತ್ರ ಒಳ್ಳೆಯದು ಎಂದು ಹೇಳುತ್ತಿದ್ದಾರೆ.. ಹೀಗಾಗಿ ಕುಮಾರಸ್ವಾಮಿ ನಡೆ ಏನು..? ಬಿಜೆಪಿ ಹೈಕಮಾಂಡ್‌ ನಡೆ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ..

ಹಾಗೆ ನೋಡಿದರೆ ನಿಖಿಲ್‌ ಕುಮಾರಸ್ವಾಮಿಯವರಿಗೂ ಈ ಬಾರಿ ಚುನಾವಣೆಗೆ ಸ್ಪರ್ಧಿಸೋದಕ್ಕೆ ಇಷ್ಟ ಇಲ್ಲ ಎಂದೇ ಹೇಳಲಾಗುತ್ತಿದೆ.. ಈಗಾಗಲೇ ಎರಡು ಬಾರಿ ಸೋತಿದ್ದೇನೆ.. ಈಗ ಟಿಕೆಟ್‌ ತಿಕ್ಕಾಟದ ನಡುವೆ ಯಡವಟ್ಟಾದರೆ ಚೆನ್ನಾಗಿರೋದಿಲ್ಲ.. ನಾನು ಇನ್ನೂ ಕೆಲ ವರ್ಷ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ.. ಅನಂತರ ಬೇಕಾದರೆ ನೋಡೋಣ ಎಂಬ ರೀತಿಯ ಮಾತುಗಳನ್ನು ನಿಖಿಲ್‌ ಕುಮಾರಸ್ವಾಮಿ ಆಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.. ಇತ್ತ ಬಿಜೆಪಿ ಹೈಕಮಾಂಡ್‌ ಮೇಲೆ ಯೋಗೇಶ್ವರ್‌ ಗೆ ಟಿಕೆಟ್‌ ನೀಡುವಂತೆ ಒತ್ತಡ ಹೆಚ್ಚಾಗುತ್ತಿದೆ.. ಇನ್ನು ಯೋಗೇಶ್ವರ್‌ ಕೂಡಾ ಯಾವುದೇ ಚಿಹ್ನೆಯಿಂದಾದರೂ ನಾನು ಸ್ಪರ್ಧೆಗೆ ಸಿದ್ಧ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.. ಅಂದರೆ ಚನ್ನಪಟ್ಟಣ ಜೆಡಿಎಸ್‌ ಪಾಲಿಗೆ ಬಂದರೂ ಜೆಡಿಎಸ್‌ನಿಂದ ಸ್ಪರ್ಧೆ ಮಾಡೋದಕ್ಕೂ ಯೋಗೇಶ್ವರ್‌ ರೆಡಿಯಾಗಿದ್ದಾರೆ ಎನ್ನಲಾಗಿದೆ.. ಆದ್ರೆ ಜೆಡಿಎಸ್‌ ಹಾಗೂ ಬಿಜೆಪಿ ಹೈಕಮಾಂಡ್‌ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಅನ್ನೋದು ಕುತೂಹಲಕ್ಕೆ ಕಾರಣ..

ಕಾಂಗ್ರೆಸ್‌ ನಡೆ ಇನ್ನೂ ನಿಗೂಢವಾಗಿದೆ.. ಡಿ.ಕೆ.ಸುರೇಶ್‌ ಅವರೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರಾದರೂ, ಡಿ.ಕೆ.ಸುರೇಶ್‌ ಮಾತ್ರ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂದು ಹೇಳುತ್ತಿದ್ದಾರೆ.. ಹೀಗಾಗಿ ಕಾಂಗ್ರೆಸ್‌ ಯಾರನ್ನು ಕಣಕ್ಕಿಳಿಸುತ್ತೆ ಎಂಬುದರ ಆಧಾರದ ಮೇಲೆ ಜೆಡಿಎಸ್‌ ನಿರ್ಧಾರ ತೆಗೆದುಕೊಳ್ಳಬಹುದು.. ಯಾಕಂದ್ರೆ, ಚನ್ನಪಟ್ಟಣ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್‌ಗೆ ಪ್ರತಿಷ್ಠೆಯ ಕಣ.. ರಾಮನಗರದಲ್ಲಿ ಮಗ ನಿಖಿಲ್‌ರನ್ನು ಸೋಲಿಸಿದರು ಅನ್ನೋದು ಕಾರಣಕ್ಕೆ ಕುಮಾರಸ್ವಾಮಿಗೆ ಸೇಡಿದೆ.. ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಹೋದರ ಡಿ.ಕೆ.ಸುರೇಶ್‌ರನ್ನು ಸೋಲಿಸಿದ್ದಕ್ಕೆ ಡಿ.ಕೆ.ಶಿವಕುಮಾರ್‌ಗೆ ಸೇಡಿದೆ.. ಹೀಗಾಗಿ ಈ ಕ್ಷೇತ್ರದಲ್ಲಿ ಅಷ್ಟು ಸುಲಭವಾಗಿ ಅಭ್ಯರ್ಥಿ ಫೈನಲ್‌ ಆಗೋದಿಲ್ಲ.. ಹಲವು ಬಾರಿ ಚರ್ಚಿಸಿಯೇ ತೀರ್ಮಾನಗಳಾಗುತ್ತವೆ.. ಒಂದು ವೇಳೆ ಯೋಗೇಶ್ವರ್‌ಗೆ ಟಿಕೆಟ್‌ ಸಿಗದೇ ಹೋದರೆ ಅವರು ಬಂಡಾಯವಾಗಿ ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚಿದೆ.. ಹಾಗೇನಾದರೂ ಆದರೆ ಕಾಂಗ್ರೆಸ್‌ಗೆ ಅನುಕೂಲವಾಗಬಹುದು..

Share Post