ಕಾಂಗ್ರೆಸ್ಸಿಗರೇ ಮುಡಾ, ವಾಲ್ಮೀಕ ನಿಗಮ ದಾಖಲೆ ಕೊಟ್ಟಿದ್ದು!; ಪ್ರಹ್ಲಾದ್ ಜೋಶಿ ಹೊಸ ಬಾಂಬ್!
ಹುಬ್ಬಳ್ಳಿ; ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ನಾವು ಕೆಳಗಿಳಿಸಲು ಪ್ರಯತ್ನಿಸುತ್ತಿಲ್ಲ, ಕಾಂಗ್ರೆಸ್ ಪಕ್ಷದಲ್ಲೇ ಕೆಲವರು ಆ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಹಲವು ದಿನಗಳಿಂದ ಹೇಳುತ್ತಾ ಬಂದಿದ್ದಾರೆ.. ಇದೀಗ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.. ಮುಡಾ ಹಗರಣ ಹಾಗೂ ವಾಲ್ಮೀಕ ನಿಗಮದಲ್ಲಿನ ಭ್ರಷ್ಟಾಚಾರದ ದಾಖಲೆಗಳನ್ನು ನಮಗೆ ಕೊಟ್ಟಿದ್ದೇ ಕಾಂಗ್ರೆಸ್ಸಿಗರು ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸದೊಂದು ಚರ್ಚೆ ಹುಟ್ಟುಹಾಕಿದ್ದಾರೆ..
ಇದನ್ನೂ ಓದಿ; ಚನ್ನಪಟ್ಟಣಕ್ಕೆ ಯಾರು..?; ಟಿಕೆಟ್ ಯೋಗೇಶ್ವರ್‌ಗಾ..? ನಿಖಿಲ್ ಕುಮಾರಸ್ವಾಮಿಗಾ..?
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಪ್ರಹ್ಲಾದ್ ಜೋಶಿಯವರು, ಈ ಬಗ್ಗೆ ನಮಗೇನೂ ಗೊತ್ತೇ ಇರಲಿಲ್ಲ.. ಕಾಂಗ್ರೆಸ್ಸಿನವರೇ ನಮಗೇ ದಾಖಲೆಗಳನ್ನು ನೀಡಿದರು.. ನಮಗೆ ಕೈಗೆ ದಾಖಲೆಗಳನ್ನು ತಂದುಕೊಟ್ಟಿದ್ದು ಯಾರು ಅನ್ನೋದು ಸಿಎಂ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.. ಸಿಎಂ ಸಿದ್ದರಾಮಯ್ಯ ಪರ ಹೈಕಮಾಂಡ್ ಇದ್ದಿದ್ದರೆ ಯಾಕೆ ಸಿದ್ದರಾಮಯ್ಯ ಅವರು ಅಷ್ಟೊಂದು ಬಾರಿ ದೆಹಲಿಗೆ ಹೋಗುತ್ತಾರೆ..? ಎಂದೂ ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದ್ದಾರೆ.. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ.. ಬೇರೆಯವರು ಸಿಎಂ ಆಗುತ್ತಾರೆ ಎಂದೂ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ; ದೇಶಕ್ಕೆ ಹೊಸ ಪ್ರಧಾನಿ ಬರ್ತಾರಾ..?; ಹೊಸ ಚರ್ಚೆ ಹುಟ್ಟುಹಾಕ್ತಿರೋದು ಯಾಕೆ..?
ಇನ್ನು ಶಾಸಕ ರವಿ ಗಣಿಗ ಅವರು ಬಿಜೆಯವರು ಶಾಸಕರ ಖರೀದಿಗೆ ಮುಂದಾಗಿದ್ದಾರೆ, ಒಬ್ಬೊಬ್ಬರಿಗೆ 100 ಕೋಟಿ ಆಫರ್ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು.. ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಪ್ರಹ್ಲಾದ್ ಜೋಶಿ, ಅವರು ಇನ್ನೊಮ್ಮೆ ಅಂತಹ ಹೇಳಿಕೆ ನೀಡಿದರೆ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ.. ಕಾಂಗ್ರೆಸ್‌ನಲ್ಲಿ ಒಳಜಗಳ ಇದ್ದು, ಹೀಗಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ..