BengaluruPolitics

ಕಟ್ಟಾ ಬದಲಾಗಿ ಅವರ ಪುತ್ರ ಜಗದೀಶ್‌ಗೆ ಟಿಕೆಟ್‌ ಕೊಟ್ಟಿದ್ದೇಕೆ ಗೊತ್ತಾ..?

ಬೆಂಗಳೂರು; ಹೆಬ್ಬಾಳ ಕ್ಷೇತ್ರದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ ಕಟ್ಟಾ ಜಗದೀಶ್‌ ಅವರಿಗೆ ಬಿಜೆಪಿ ಟಿಕೆಟ್‌ ಘೊಷಣೆ ಮಾಡಿದೆ. 2010ರಲ್ಲಿ ಕೆಐಎಡಿಬಿ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅವರ ಪುತ್ರ ಕಟ್ಟಾ ಜಗದೀಶ್‌ ಬಂಧಿತರಾಗಿದ್ದರು. ಅದರ ನಂತರ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅವರ ಮಗ ರಾಜಕೀಯದಿಂದ ಮೂಲೆಗುಂಪಾಗಿದ್ದರು. ಆದ್ರೆ ಈ ಬಾರು ಕಟ್ಟಾ ನಾಯ್ಡು ಟಿಕೆಟ್‌ ಕೇಳಿದ್ದರು. ಆದ್ರೆ ಬಿಜೆಪಿ ಹೈಕಮಾಂಡ್‌ ಕಟ್ಟಾ ಪುತ್ರನಿಗೆ ಟಿಕೆಟ್‌ ನೀಡಿದ್ದಾರೆ.

ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಟಿಕೆಟ್‌ ನೀಡದೇ ಅವರ ಪುತ್ರನಿಗೆ ಟಿಕೆಟ್‌ ನೀಡೋದಕ್ಕೆ ಕಾರಣ ಇದೆ. ಕಟ್ಟಾ ಮಗ ಕಟ್ಟಾ ಜಗದೀಶ್‌ ಕೂಡಾ ಬಂಧಿತರಾಗಿದ್ದರು ನಿಜ. ಆದ್ರೆ ಅವರು ಮೇಲಿನ ಪ್ರಕರಣದಲ್ಲಿ ಅವರು ದೋಷಮುಕ್ತರಾಗಿದ್ದಾರೆ. ಇದೇ ಕಾರಣದಿಂದಾಗಿ ಟಿಕೆಟ್‌ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಕಟ್ಟಾ ಜಗದೀಶ್‌ ಮೇಲಿದ್ದ ಪ್ರಕರಣವೇನು..?

ಅಂದು ಬಿಬಿಎಂಪಿ ಸದಸ್ಯರಾಗಿದ್ದ ಕಟ್ಟಾ ಜಗದೀಶ್‌ ರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಕೆಐಎಡಿಬಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ತಮಗೆ ನೆರವಾಗುವಂತೆ ಸಾಕ್ಷಿ ಹೇಳಲು ಹಾಗೂ ತನಿಖೆಯ ದಿಕ್ಕು ತಪ್ಪಿಸುವ ಸಲುವಾಗಿ ಪ್ರಕರಣದ ದೂರುದಾರು ಹಾಗೂ ಸಾಕ್ಷಿಯಾಗಿರುವ ತಮಗೆ ಪಾಲಿಕೆ ಸದಸ್ಯ ಕಟ್ಟಾ ಜಗದೀಶ್‌ ಲಂಚದ ಆಮಿಷವೊಡ್ಡಿದ್ದರು ಎಂದು ರಾಮಾಂಜಿನಪ್ಪ ಎಂಬುವವರು ಲೋಕಾಯುಕ್ತ ಪೊಲೀಶರಿಗೆ ದೂರು ನೀಡಿದ್ದರು.

ಜಗದೀಶ್‌ ಸೂಚನೆಯಂತೆ ರುದ್ರೇಶ್‌ ಕುಮಾರ್‌ ಸದಾಶಿವನಗರದ ನಿವಾಸದಲ್ಲಿ ರಾಮಾಂಜಿನಪ್ಪ ಅವರಿಗೆ ೧ ಲಕ್ಷ ರೂಪಾಯಿ ನೀಡುತ್ತಿದ್ದ ವೇಳೆ ದಾಳಿ ನಡೆಸಿದ್ದ ಪೊಲೀಸರು ಹಣ ಜಪ್ತಿ ಮಾಡಿಕೊಂಡಿದ್ದರು. ಆದ್ರೆ ರುದ್ರೇಶ್‌ ಸ್ಥಳದಿಂದ ಪರಾರಿಯಾಗದ್ದರು. ಇದೇ ವೇಳೆ ಗಾಂಧಿನಗರದ ತಮ್ಮ ಕಚೇರಿಯಲ್ಲಿದ್ದ ಕಟ್ಟಾ ಜಗದೀಶ್ರನ್ನು ಮತ್ತೊಂದು ತಂಡ ಬಂಧಿಸಿತ್ತು.

2018ರಲ್ಲಿ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಕೋರ್ಟ್‌, ಕಟ್ಟಾ ಜಗದೀಶ್‌ರನ್ನು ದೋಷ ಮುಕ್ತಗೊಳಿಸಿ ಆದೇಶ ಹೊರಡಿಸಿತ್ತು. ಕಟ್ಟಾ ಜಗದೀಶ್‌ ಈ ಹಿಂದೆ ಬಂಧನಕ್ಕೊಳಗಾಗಿದ್ದರೂ ಆ ಕೇಸ್‌ ನಲ್ಲಿ ದೋಷಮುಕ್ತರಾಗಿದ್ದಾರೆ ಎಂಬ ಕಾರಣಕ್ಕೆ ಟಿಕೆಟ್‌ ನೀಡಲಾಗಿದೆ. ಆದರೂ ಕೂಡಾ ವಿಪಕ್ಷಗಳು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಹರಿಹಾಯುವ ಸಾಧ್ಯತೆ ಇದೆ.

Share Post