Politics

Congress VS bjp; ಬಿಜೆಪಿ ಶ್ವೇತ ಪತ್ರ, ಕಾಂಗ್ರೆಸ್ ಕಪ್ಪು ಪತ್ರ; ಏನಿದು ಜಟಾಪಟಿ?

ನವದೆಹಲಿ; ದೇಶದ ಆರ್ಥಿಕತೆ ಕುರಿತು, ಕಾಂಗ್ರೆಸ್ ಸರ್ಕಾರ ಇದ್ದಾಗ ಇದ್ದ ಆರ್ಥಿಕತೆ ಹಾಗೂ ಈಗಿರುವ ಆರ್ಥಿಕತೆ ಕೇಂದ್ರ ಸರ್ಕಾರ ಶ್ವೇತಪತ್ರ ಹೊರಡಿಸಲು ಮುಂದಾಗಿದೆ. ನಾಳೆ ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಬೆನ್ನಲ್ಲೇ ಎರಡೂ ಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ಕಾಂಗ್ರೆಸ್ ಶ್ವೇತಪತ್ರಕ್ಕೆ ವಿರುದ್ಧವಾಗಿ ಕಪ್ಪು ಪಟ್ಟಿ ರಿಲೀಸ್ ಮಾಡಿದೆ. ಇದನ್ನು ಲೇವಡಿ ಮಾಡಿರುವ ಪ್ರಧಾನಿ ಮೋದಿ, ಇದೊಂದು ದೃಷ್ಟಿ ಬೊಟ್ಟು ಎಂದು ಹೇಳಿದ್ದಾರೆ.

ಬ್ಲ್ಯಾಕ್ ಪೇಪರ್ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್

   ಯುಪಿಎ ಸರ್ಕಾರದ ಹಣಕಾಸು ನಿರ್ವಹಣೆಯ ಲೋಪಗಳ ಬಗ್ಗೆ ಶ್ವೇತಪತ್ರ ಹೊಡಿಸ್ತೀವಿ ಎಂದು ಬಿಜೆಪಿ ಸರ್ಕಾರ ಹೇಳುತ್ತಿದೆ. ಇದಕ್ಕೆ ಟಾಂಗ್ ಕೊಡಲು ಕಾಂಗ್ರೆಸ್ ಬ್ಲ್ಯಾಕ್ ಪೇಪರ್ ಅಸ್ತ್ರ ಪ್ರಯೋಗ ಮಾಡಿದೆ. ಬ್ಲ್ಯಾಕ್ ಪೇಪರ್ ರಿಲೀಸ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

10 ವರ್ಷಗಳ ಅನ್ಯಾಯದ ಕಾಲ!

   ಬಿಜೆಪಿ ಸರ್ಕಾರ ಹತ್ತು ವರ್ಷದಿಂದ ಆಡಳಿತ ಮಾಡುತ್ತಿದೆ. ಈ ಹತ್ತು ವರ್ಷಗಳು ಅನ್ಯಾಯದ ಕಾಲ ಎಂದು ಖರ್ಗೆ ಹೇಳಿದ್ದಾರೆ. ಜೊತೆಗೆ ಹತ್ತು ವರ್ಷಗಳ ಮೋದಿ ಸರ್ಕಾರದ ಲೋಪಗಳನ್ನು ಎತ್ತಿ ತೋರಿಸಿದ್ದಾರೆ. ಬಿಜೆಪಿ ನಾಯಕರು ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದೂ ಖರ್ಗೆ ಆರೋಪ ಮಾಡಿದ್ದಾರೆ.

ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ

  ಮೋದಿ ಸರ್ಕಾರ ಬಂದ ಮೇಲೆ ಉದ್ಯೋಗ ಸೃಷ್ಟಿ ಆಗಿಲ್ಲ. ಯುವ ಸಮುದಾಯ ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ನೆಹರೂ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿ ಮಾಡಿದ್ದರು. ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವ ಯಾವ ಸಂಸ್ಥೆಯನ್ನೂ ಸ್ಥಾಪಿಸಲಿಲ್ಲ ಎಂದು ಖರ್ಗೆ ಹೇಳಿದರು. ಉದ್ದೇಶ ಪೂರ್ವಕವಾಗಿ ಮೋದಿಯವರು ಕರ್ನಾಟಕಕ್ಕೆ ಅನುದಾನ ಕೊಟ್ಟಿಲ್ಲ ಎಂದೂ ಖರ್ಗೆ ಹೇಳಿದರು.

ರೈತರ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸುವುದಾಗಿ, ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದರು. ಈವರೆಗೂ ಅದು ಆಗಿಲ್ಲ ಸಂಸತ್‌ನಲ್ಲಿ ಮಾತೂ ಆಡಲ್ಲ ಎಂದೂ ಖರ್ಗೆ ಛೇಡಿಸಿದರು.

ಕಾಂಗ್ರೆಸ್ ಕಪ್ಪು ಪತ್ರ ನಮಗೆ ದೃಷ್ಟಿ‌ಬೊಟ್ಟು!

  ಕಾಂಗ್ರೆಸ್ ಕಪ್ಪು ಪತ್ರ ಹೊರಡಿಸಿದ್ದಕ್ಕೆ ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್​ ಹೊರಡಿಸಿರುವ ಕಪ್ಪು ಪತ್ರ ದುಷ್ಟರನ್ನು ರಕ್ಷಿಸಲು ನಮಗೆ ದೃಷ್ಟಿಬೊಟ್ಟಿದ್ದಂತೆ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.

 

Share Post