ಕಾಂಗ್ರೆಸ್ ಎಂಎಲ್‌ಸಿ ಟಿಕೆಟ್ ಸರ್ಕಸ್; ಸಂಭಾವ್ಯರ ಪಟ್ಟಿಯಲ್ಲಿ ಯಾರು ಯಾರು ಇದ್ದಾರೆ..?
ಬೆಂಗಳೂರು; ವಿಧಾನ ಪರಿಷತ್ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಬಿಗ್ ಫೈಟ್ ನಡೆದಿದೆ.. ಇರುವ ಏಳು ಸ್ಥಾನಗಳಿಗಾಗಿ ಸುಮಾರು 100 ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ.. ಎಲ್ಲರೂ ಪ್ರಬಲರೇ ಆಗಿದ್ದು, ಬೇರೆ ಬೇರೆ ಕಡೆಯಿಂದ ಲಾಬಿ ಮಾಡುತ್ತಿದ್ದಾರೆ.. ಇದರ ತಲೆನೋವು ಜಾಸ್ತಿಯಾಗಿದ್ದರಿಂದಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯ ಹೈಕಮಾಂಡ್ ಅಂಗಳ ತಲುಪಿದ್ದಾರೆ.. ಇನ್ನು 100 ಮಂದಿ ಟಿಕೆಟ್ ಆಕಾಂಕ್ಷಿಗಳಲ್ಲಿ 70 ಮಂದಿ ಶತಾಯಗತಾಯ ಟಿಕೆಟ್ ಬೇಕೇಬೇಕು ಎಂಬ ರೀತಿಯಲ್ಲಿ ಲಾಬಿ ನಡೆಸುತ್ತಿದ್ದಾರೆ.. ಆದ್ರೆ ಇದರಲ್ಲಿ ಏಳು ಮಂದಿಯನ್ನು ಮಾತ್ರ ಆಯ್ಕೆ ಮಾಡಬೇಕು.. ಇದು ದೊಡ್ಡ ತಲೆನೋವಿನ ಸಂಗತಿ.. ಹೀಗಾಗಿಯೇ ಸಿಎಂ ಹಾಗೂ ಡಿಸಿಎಂ ಒಂದು ಶಾರ್ಟ್ ಲಿಸ್ಟ್ ರೆಡಿ ಮಾಡಿದ್ದಾರೆ.. 100ರ ಪಟ್ಟಿಯಿಂದ 60 ಮಂದಿಯನ್ನು ಕೈಬಿಟ್ಟು 40 ಸಂಭಾವ್ಯರ ಪಟ್ಟಿ ಸಿದ್ಧಪಡಿಸಿದ್ದಾರೆ.. ಇದರಲ್ಲಿ ಏಳು ಮಂದಿಯನ್ನು ಆಯ್ಕೆ ಮಾಡಬೇಕು.. ಇದಕ್ಕಾಗಿ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಅಂತಿಮ ಹಂತದ ಚರ್ಚೆಗೆ ನಡೆಯುತ್ತಿದೆ..
ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಡಿ.ಕೆ.ಶಿವಕುಮಾರ್ ಬೆಂಬಲಿಗರಿಬ್ಬರೂ ಆಕಾಂಕ್ಷಿಗಳಾಗಿದ್ದಾರೆ.. ಹೀಗಾಗಿ, ಇಬ್ಬರೂ ನಾಯಕರು ಒಂದು ತೀರ್ಮಾನಕ್ಕೆ ಬಂದು 40 ನಾಯಕರ ಪಟ್ಟಿ ರೆಡಿ ಮಾಡಿದ್ದಾರೆ.. ಇದರಲ್ಲಿ ಹೈಕಮಾಂಡ್‌ನಿಂದ ಅಂತಿಮ ಆಯ್ಕೆ ನಡೆಯಬೇಕಿದೆ..
40 ಜನರ ಸಂಭಾವ್ಯರ ಪಟ್ಟಿಯಲ್ಲಿ ಯಾರಿದ್ದಾರೆ..?
===========================
ಎನ್.ಎಸ್.ಬೋಸರಾಜು, ಸಚಿವ
ಡಾ.ಕೆ.ಗೋವಿಂದರಾಜು, ಸಿಎಂ ರಾಜಕೀಯ ಕಾರ್ಯದರ್ಶಿ
ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ
ಬಿ.ವಿ.ಶ್ರೀನಿವಾಸ್, ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ
ವಿನಯ್ ಕಾರ್ತಿಕ್, ಕೆಪಿಸಿಸಿ ಖಜಾಂಚಿ
ವಸಂತ್ ಕುಮಾರ್, ಕಾರ್ಯಾಧ್ಯಕ್ಷ
ಆಘಾ ಸುಲ್ತಾನ್, ಪ್ರಧಾನ ಕಾರ್ಯದರ್ಶಿ
ವಿ.ಆರ್.ಸುದರ್ಶನ್, ಕೆಪಿಸಿಸಿ ಉಪಾಧ್ಯಕ್ಷ
ವಿನಯ ಕುಮಾರ್ ಸೊರಕೆ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ
ವಿಜಯ ಮುಳಗುಂದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ರಮೇಶ್ ಬಾಬು, ಮಾಜಿ ಎಂಎಲ್ಸಿ
ಸಂದೀಪ್ ಕುಮಾರ್ ಎಐಸಿಸಿ ಕಾರ್ಯದರ್ಶಿ
ಭವ್ಯ ನರಸಿಂಹ ಮೂರ್ತಿ, ಕೆಪಿಸಿಸಿ ಜನರಲ್ ಸೆಕ್ರೆಟರಿ
ಎಲ್.ನಾರಾಯಣ್, ಕಚೇರಿ ಕಾರ್ಯದರ್ಶಿ (೩೦ ವರ್ಷದ ಸೇವೆ)
ಬಿ.ಆರ್.ನಾಯ್ಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಡಾ.ಆನಂದ ಕುಮಾರ್ ಕಿಸಾನ್ ಕಾಂಗ್ರೆಸ್
ಕೃಷ್ಣಂ ರಾಜು, ಕೆಪಿಸಿಸಿ ಉಪಾಧ್ಯಕ್ಷರು
ಸಿ ಎಸ್ ದ್ವಾರಕಾನಾಥ್, ಅಧ್ಯಕ್ಷರು, ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗ
ವೀಣಾ ಕಾಶಪ್ಪನವರ್, ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ
ಪುಷ್ಪಾ ಅಮರನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ
ಕಮಲಾಕ್ಷಿ ರಾಜಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಅರವಿಂದ ಕುಮಾರ್ ಅರಳಿ, ಹಾಲಿ ಎಂಎಲ್ಸಿ
ಮುದ್ದು ಗಂಗಾಧರ್, ಕೆಪಿಸಿಸಿ ಜನರಲ್ ಸೆಕ್ರೆಟರಿ
ಸುಷ್ಮಾ ರಾಜಗೋಪಾಲ ರೆಡ್ಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಮುರುಳಿಧರ ಹಾಲಪ್ಪ, ಉಪಾಧ್ಯಕ್ಷ, ಕೆಪಿಸಿಸಿ
ಒಬೆದುಲ್ಲಾ ಶರೀಫ್, ಉಪಾಧ್ಯಕ್ಷರು ಕೆಪಿಸಿಸಿ
ಎಸ್.ಎ.ಹುಸೇನ್, ಉಪಾಧ್ಯಕ್ಷರು ಕೆಪಿಸಿಸಿ
ವಿ.ಶಂಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಆರತಿ ಕೃಷ್ಣ, ಎಐಸಿಸಿ ಕಾರ್ಯದರ್ಶಿ
ಕಾಂತ ನಾಯಕ್, ಕೌಶಲ್ಯಾಭಿವೃದ್ದಿ ಮಂಡಳಿ ಅಧ್ಯಕ್ಷರು
ಹರೀಶ್ ಕುಮಾರ್, ಮಂಗಳೂರು, ಹಾಲಿ ಎಂಎಲ್ಸಿ