Politics

Chikkaballapur Loksabha Counting; ಡಾ.ಕೆ.,ಸುಧಾಕರ್‌ ಗೆದ್ದರೆ ಮಾತ್ರ ರಾಜಕೀಯದಲ್ಲಿ ಉಳಿಗಾಲ!

ಚಿಕ್ಕಬಳ್ಳಾಪುರ;  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಫೈಟ್‌ ಇದೆ.. ಇಲ್ಲಿ ಬೆಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಸ್ಪರ್ಧೆಯಲ್ಲಿದ್ದಾರೆ.. ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಕ್ಷಾ ರಾಮಯ್ಯ ಕಣದಲ್ಲಿದ್ದಾರೆ.. ಈ ಬಾರಿ ಇಲ್ಲಿ ಹೆಚ್ಚು ಜಾತಿ ರಾಜಕೀಯ ನಡೆದಿದೆ.. ಒಕ್ಕಲಿಗ ಮತಗಳನ್ನು ಒಂದುಗೂಡಿಸುವ ಪ್ರಯತ್ನ ಡಾ.ಕೆ.ಸುಧಾಕರ್‌ ಮಾಡಿದ್ದಾರೆ ಎನ್ನಲಾಗಿದೆ.. ಹೀಗಾಗಿ ಅವರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ.. ಆದ್ರೆ ಈ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿರುವುದರಿಂದ ರಕ್ಷಾ ರಾಮಯ್ಯ ಕೂಡಾ ಸಾಕಷ್ಟು ಫೈಟ್‌ ಕೊಟ್ಟಿದ್ದಾರೆ..

ರಕ್ಷಾ ರಾಮಯ್ಯ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ.. ಆದ್ರೆ ಸುಧಾಕರ್‌ ಅವರು ಮೂರು ಬಾರಿ ಶಾಸಕರಾಗಿದ್ದರು.. ಆರೋಗ್ಯ ಸಚಿವರಾಗಿದ್ದರು… ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ.. ಹೀಗಾಗಿ ಈ ಬಾರಿಯೂ ಸೋತರೆ ಅವರ ರಾಜಕೀಯ ಭವಿಷ್ಯ ಮತ್ತಷ್ಟು ಮಂಕಾಗುವ ಸಾಧ್ಯತೆ ಇದೆ.. ಹೀಗಾಗಿ ಗೆಲ್ಲಲೇಬೇಕೆಂಬ ಹಠದಲ್ಲಿ ಸುಧಾಕರ್‌ ಅವರು ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದರು.. ಸಾಕಷ್ಟು ತಂತ್ರಗಾರಿಕೆ ನಡೆಸಿದ್ದರು.. ಇದರ ಡನುವೆಯೂ ಸೋತರೆ ಡಾ.ಕೆ.ಸುಧಾಕರ್‌ ಅವರು ರಾಜಕೀಯವಾಗಿ ಸುಧಾರಿಸಿಕೊಳ್ಳೋದು ತುಂಬಾನೇ ಕಷ್ಟವಾಗುತ್ತದೆ..

ವಿಧಾನಸಭಾ ಚುನಾವಣೆಯ ಸೋಲನ್ನು ಸುಧಾಕರ್‌ ಇನ್ನೂ ಅರಗಿಸಿಕೊಂಡಿಲ್ಲ.. ಹಲವು ತಿಂಗಳ ಕಾಲ ಮೌನಕ್ಕೆ ಜಾರಿದ್ದ ಸುಧಾಕರ್‌ ತೀವ್ರ ಪೈಪೋಟಿಯ ನಡುವೆಯೂ ಬಿಜೆಪಿ ಟಿಕೆಟ್‌ ಪಡೆದಿದ್ದರು.. ಇದೀಗ ಈ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ..

 

Share Post