Politics

COUNTING LIVE UPDATES; ಬಿಜೆಪಿ ನೇತೃತ್ವದ NDA 240ರಲ್ಲಿ ಮುನ್ನಡೆ, ಕಾಂಗ್ರೆಸ್‌ ನೇತೃತ್ವದ INDIA 100ರಲ್ಲಿ ಮುನ್ನಡೆ!

ನವದೆಹಲಿ; 543 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ನೇತೃತ್ವದ NDA 240ರಲ್ಲಿ ಮುನ್ನಡೆ ಸಾಧಿಸಿದೆ.. ಇನ್ನು ಕಾಂಗ್ರೆಸ್‌ ನೇತೃತ್ವದ INDIA 100ರಲ್ಲಿ ಮುನ್ನಡೆ ಸಾಧಿಸುತ್ತಿದೆ.. ಆರಂಭಿಕ ವೋಟ್‌ ಶೇರ್‌ ನೋಡಿದರೆ ಸಮೀಕ್ಷೆಗಳ ರೀತಿಯಲ್ಲೇ ಫಲಿತಾಂಶ ಬರುವ  ನಿರೀಕ್ಷೆ ಇದೆ..

ಲೋಕಸಭಾ ಚುನಾವಣೆಯ 543 ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯುತ್ತಿದೆ.. ಯಾರಿಗೆ ಎಷ್ಟು ಸ್ಥಾನಗಳು ಬರಲಿವೆ ಎಂಬ ಕುತೂಹಲ ಶುರುವಾಗಿದೆ.. ಚುನಾವಣೋತ್ತರ ಸಮೀಕ್ಷೆಯಂತೆಯೇ ಫಲಿತಾಂಶ ಬರಲಿದೆಯಾ..? ಇಲ್ಲವೇ ಕಾಂಗ್ರೆಸ್‌ ನಾಯಕರು ಹೇಳಿದಂತೆ ಸಮೀಕ್ಷೆಗಳು ಉಲ್ಟಾ ಆಗಲಿವೆ ಎಂಬುದರ ಬಗ್ಗೆ ಎಲ್ಲರಲ್ಲೂ ಕುತೂಹಲ ಇದೆ.. ದೇಶಾದ್ಯಂತ ಇಂದು ಮತ ಎಣಿಕೆ ಕಾರ್ಯ ಶುರುವಾಗುತ್ತಿದೆ.. ಮಧ್ಯಾಹ್ನದ ವೇಳೆಗೆ ಒಂದು ಸ್ಪಷ್ಟ ಚಿತ್ರಣ ಸಿಗಲಿದೆ.. ಸಂಜೆಯೊಳಗೆ ಎಲ್ಲಾ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ..

ಏಳು ಹಂತಗಳಲ್ಲಿ ಮತದಾನ ನಡೆದಿತ್ತು.. ಎನ್‌ಡಿಎ ಈ ಬಾರಿ ನಾವು 400 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿತ್ತು.. ಈ ಮೂಲಕ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವ ವಿಶ್ವಾಸದಲ್ಲಿದ್ದಾರೆ.. ಇನ್ನು ಇಂಡಿಯಾ ಒಕ್ಕೂಟ ಗೆದ್ದರೆ ಮಹಿಳೆಯರ ಖಾತೆಗೆ 8500 ರೂಪಾಇ ಹಾಕುವುದಾಗಿ ರಾಹುಲ್‌ ಗಾಂಧಿ ಹೇಳಿದ್ದರು.. ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಮೋದಿಯೇ ಗ್ಯಾರೆಂಟಿ ಎಂಬ ಘೋಷಣೆ ಮಾಡಿದ್ದರು..

 

Share Post