ಹೆಚ್ಡಿಕೆಗೆ ಇದೇ ಕೊನೇ ಚುನಾವಣೆಯಂತೆ; ದೊಡ್ಡಗೌಡರ ಮಗ ಹೇಳ್ತಿರೋದು ನಿಜಾನಾ..?
ಬೆಂಗಳೂರು; ಜನರನ್ನು ಭಾವಾನಾತ್ಮಕವಾಗಿ ಮರಳು ಮಾಡೋದು… ಆ ಮೂಲಕ ಮತದಾರರನ್ನು ಒಲಿಸಿಕೊಳ್ಳೋ ಕಲೆ ದೊಡ್ಡ ಗೌಡರ ಕುಟುಂಬಕ್ಕೆ ಚೆನ್ನಾಗಿ ಗೊತ್ತಿದೆ… ಇಷ್ಟು ದಿನ ರೈತರ ವಿಚಾರ ಮಾತನಾಡುತ್ತಿದ್ದರು.. ಜೊತೆಗೆ ವೇದಿಕೆಗಳಲ್ಲಿ ಅವರ ಕಣ್ಣೀರು ಜನರನ್ನು ಕರಗಿಸುತ್ತಿತ್ತು… ಆದ್ರೆ ಇದೀಗ ಕುಮಾರಸ್ವಾಮಿಯವರು ನಾನಾಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ… ದಲಿತರನ್ನು ಸಿಎಂ ಮಾಡುತ್ತೇನೆ, ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳುತ್ತಾ ಬಂದಿರುವ ಹೆಚ್ಡಿಕೆ ಇದೀಗ ಮತ್ತೊಂದು ಭಾವಾನಾತ್ಮ ಅಸ್ತ್ರ ಬಿಟ್ಟಿದ್ದಾರೆ… ನನಗೆ ಇದೇ ಕೊನೇ ಚುನಾವಣೆ ಎಂದು ಹೇಳುವ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ.. ಹೆಚ್ಡಿಕೆಯವರು ಹೀಗೆ ಯಾಕೆ ಹೇಳಿದರೋ ಗೊತ್ತಿಲ್ಲ… ಆದ್ರೆ ರಾಜ್ಯ ರಾಜಕೀಯವಲಯದಲ್ಲಿ ಇದು ಚರ್ಚೆಗೆ ಕಾರಣವಾಗಿದೆ…
ಹೆಚ್ಡಿಕೆಯವರು ಈ ಬಾರಿಯೂ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ… ಆದ್ರೆ ಸೂಕ್ತ ಅಭ್ಯರ್ಥಿ ಸಿಕ್ಕಿದ್ದಿದ್ದರೆ ನಾನು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುತ್ತಿರಲಿಲ್ಲ. ನನಗೆ ಇದೇ ಕೊನೆಯ ಚುನಾವಣೆ ಅಂತ ಹೇಳಿದ್ದಾರೆ. ಇಂದು ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದ ಅವರು ಕೆಲವೊಂದು ಭಾವನಾತ್ಮಕ ವಿಚಾರಗಳನ್ನು ಜನರ ಮುಂದಿಟ್ಟಿದ್ದಾರೆ… ನಾನು ರೈತರ ಪರವಾಗಿ, ಬಡವರ ಪರವಾಗಿ ಕೆಲಸ ಮಾಡಬೇಕು ಅಂತ ಬಂದಿದ್ದೇನೆ… ಈ ಭಾರಿ ಜೆಡಿಎಸ್ ಅಧಿಕಾರಕ್ಕೆ ಬಂದರೆ, ಜನಪರ ಕಾರ್ಯಕ್ರಮಗಳನ್ನು ಮಾಡುತ್ತೇನೆ ಎಂದು ಆಶ್ವಾಸನೆ ನೀಡುವುದನ್ನು ಮುಂದುವರೆಸಿದ್ದಾರೆ… ಇದೇ ವೇಳ ಮಾತನಾಡುತ್ತಾ ನನಗೆ ಇದೇ ಕೊನೆಯ ಚುನಾವಣೆ. ನಂತರ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಿಲ್ಲ ಎಂದಿದ್ದಾರೆ. ಚನ್ನಪಟ್ಟಣದಲ್ಲಿ ಈ ಬಾರಿಯೇ ಸೂಕ್ತ ಅಭ್ಯರ್ಥಿ ಹುಡುಕುತ್ತಿದ್ದೆವು. ಆದ್ರೆ ಯಾರೂ ಸಿಗಲಿಲ್ಲವಾದ್ದರಿಂದ ನಾನು ಇಲ್ಲೇ ಸ್ಪರ್ಧೆ ಮಾಡುತ್ತಿದ್ದೇನೆ. ನಾನು ಈ ಕ್ಷೇತ್ರ ಬಿಟ್ಟು ಬೇರೆಲ್ಲೂ ಸ್ಪರ್ಧೆ ಮಾಡೋದಿಲ್ಲ. 2028ರ ಚುನಾವಣೆ ವೇಳೆಗೆ ಇಲ್ಲಿ ಸೂಕ್ತ ಅಭ್ಯರ್ಥಿಯನ್ನು ಸಿದ್ಧಪಡಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಹೆಚ್ಡಿಕೆ ಇದೇ ವೇಳೆ ಹೇಳಿದ್ದಾರೆ.
ಪಂಚರತ್ನ ಯಾತ್ರೆ ಕೈಗೊಂಡಿರುವ ಹೆಚ್ಡಿಕೆ ಅವರು, ಈ ಬಾರಿ 132 ಸೀಟು ಪಡೆದು ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿದ್ದಾರೆ.. ಪೂರ್ಣ ಬಹುಮತ ನೀಡುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ… ಹೆಚ್ಡಿಕೆ ಹೋದಲ್ಲೆಲ್ಲಾ ದೊಡ್ಡ ಮಟ್ಟದಲ್ಲಿ ಜನ ಸೇರ್ತಿದ್ದಾರೆ ಕೂಡಾ… ಈ ಬಾರಿ ಅವ್ರು ಹಲವು ಜನಪರ ಯೋಜನೆಗಳನ್ನು ಜನರ ಮುಂದಿಟ್ಟಿದ್ದಾರೆ… ರೈತಪರ, ಮಹಿಳೆಯರ ಪರ, ಬಡವರ ಹಾಗೂ ದೀನ ದಲಿತರ ಪರ ಕೆಲಸ ಮಾಡೋದಾಗಿ ಹೇಳುತ್ತಿದ್ದಾರೆ… ನಾನು ಕೊಡುತ್ತಿರುವ ಭರವಸೆಗಳನ್ನು ಈಡೇರಿಸಲು ಆಗದಿದ್ದರೆ ನಮ್ಮ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಅಂತ ಘೋಷಣೆ ಕೂಡಾ ಮಾಡಿದ್ದಾರೆ… ಹಲವು ದಿನಗಳಿಂದ ಪಕ್ಷ ವಿಸರ್ಜನೆಯ ಮಾತನ್ನಾಡುತ್ತಾ ಬಂದಿದ್ದಾರೆ… ಹಾಗೆ ನೋಡಿದರೆ, ಹೆಚ್ಡಿಕೆ ಅಪಾರ ಜನಬೆಂಬಲವಿದೆ.. ಅವರೆಂದರೆ ಜನರು ಪ್ರೀತಿ ತೋರಿಸುತ್ತಾರೆ.. ಆದ್ರೆ ಅದು ಮತವಾಗಿ ಪರಿವರ್ತನೆಯಾಗೋದಿಲ್ಲ ಅಷ್ಟೇ… ಈ ಕಾರಣಕ್ಕೋ ಏನೋ ಹೆಚ್ಡಿಕೆಯವರು ಜನರ ಮನಸ್ಸನ್ನು ಗೆಲ್ಲೋದಕ್ಕೆ ಪದೇ ಪದೇ ಭಾವನಾತ್ಮಕ ವಿಚಾರಗಳನ್ನು ಹೊರತರುತ್ತಿದ್ದಾರೆ… ಅವರು ಮುಂದಿನ ಚುನಾವಣೆ ಸ್ಪರ್ಧೆ ಮಾಡದೇ ಇರೋದು ನಿಜವೋ ಸುಳ್ಳೋ ಗೊತ್ತಿಲ್ಲ.. ಯಾಕಂದ್ರೆ ಹೆಚ್ಡಿಕೆಯವರಾಗಲೀ, ಬಹುತೇಕ ಯಾವುದೇ ರಾಜಕಾರಣಯಾಗಲೀ ಹೇಳಿದ ಮಾತನ್ನ ಪಾಲನೆ ಮಾಡಿಲ್ಲ.. ಹೀಗಾಗಿ, ನಾವೇನೂ ಹೆಚ್ಡಿಕೆಯವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅವಶ್ಯಕತೆ ಕೂಡಾ ಇಲ್ಲ… ಆದ್ರೂ ಕೂಡಾ, ಗೌಡರ ಕುಟುಂಬದ ಇಂತಹ ಒಂದಷ್ಟು ಭಾವನಾತ್ಮಕ ಮಾತುಗಳು ಹಳೇ ಮೈಸೂರು ಭಾಗದ ಕೆಲ ಜನರ ಮನಸ್ಸನ್ನು ಕರಗಿಸುತ್ತವೆ ಅನ್ನೋದಂತೂ ಸತ್ಯ..
ಇನ್ನು ಹೆಚ್ಡಿಕೆಯವರಿಗೆ ಅನಾರೋಗ್ಯವಿದೆ.. ಇದರ ನಡುವೆಯೂ ಅವರ ಜನರ ನಡುವೆ ಇರುತ್ತಾರೆ… ಅಲರ್ಜಿಯಾಗುತ್ತೆ ಎಂಬ ಭಯವಿದ್ದರೂ ಅವರು ಸದಾ ಜನರೊಂದಿಗೆ ಬೆರೆಯುತ್ತಿರುತ್ತಾರೆ.. ಅದರಲ್ಲೂ ಈ ಬಾರಿ ಊರೂರು ಸುತ್ತುತ್ತಿದ್ದಾರೆ.. ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ… ಜೊತೆಗೆ ತಮ್ಮ ಆರೋಗ್ಯದ ವಿಚಾರವನ್ನು ಜನರ ಜೊತೆ ಹಂಚಿಕೊಳ್ಳುತ್ತಿದ್ದಾರೆ… ಇದೂ ಕೂಡಾ ಭಾವನಾತ್ಮಕ ವಿಚಾರವೇ… ಆದ್ರೆ ಇಂತಹ ವಿಚಾರಗಳಿಗೆ ಜನ ಹೇಗೆ ಸ್ಪಂದಿಸುತ್ತಾರೋ ಗೊತ್ತಿಲ್ಲ… ಆದ್ರೆ, ಹೆಚ್ಡಿಕೆ ಈ ಬಾರಿ ಒಂದಷ್ಟು ಜನಪರ ವಿಚಾರಗಳನ್ನು ಹೇಳುತ್ತಿದ್ದಾರೆ… ಇದರ ನಡುವೆ ಭಾವಾನಾತ್ಮಕ ವಿಚಾರಗಳನ್ನೂ ಹರಿಬಿಡುತ್ತಿದ್ದಾರೆ… ಈ ಭಾವನಾತ್ಮಕ ವಿಚಾರಗಳ ನಡುವೆ ಜನಪರ ವಿಚಾರಗಳು ಎಲ್ಲಿ ಮೂಲೆಗೆ ತಳ್ಳಿಬಿಡುತ್ತವೋ ಏನೋ.. ಹಾಗೇನಾದರೂ ಆದರೆ, ಜೆಡಿಎಸ್‌ಗೆ ಕೊಂಚ ಹಿನ್ನಡೆಯೇ ಆಗಲಿದೆ…
ಹಾಗೆ ನೋಡಿದರೆ ಹೆಚ್ಡಿಕೆಯವರು ಜನಪರ ಕಾಳಜಿ ಉಳ್ಳವರು… ಸಾಮಾನ್ಯ ಜನರ ಕಷ್ಟಗಳಿಗೆ ಸ್ಪಂದಿಸುವವರು.. ಈ ಕಾರಣಕ್ಕಾಗಿಯೇ ಅವರ ಮೇಲೆ ಜನಕ್ಕೆ ಪ್ರೀತಿ ಇದೆ… ಅವರು ಬರುತ್ತಾರೆ ಎಂದರೆ ಅರ್ಧ ರಾತ್ರಿಯಲ್ಲೂ ಜನ ಕಾಯುತ್ತಾರೆ… ಸಿಎಂ ಯಾರಾಗಾಬೇಕು ಎಂದು ಕೇಳಿದಾಗ ಹೆಚ್ಡಿಕೆ ಆಗಬೇಕು ಎಂದು ಹೇಳುವವರು ದೊಡ್ಡ ಮಟ್ಟದಲ್ಲಿದ್ದಾರೆ… ಆದ್ರೆ ಪಕ್ಷದಲ್ಲಿ ಸದ್ಯ ದೊಡ್ಡ ಮಟ್ಟದ ನಾಯಕರಿಲ್ಲ… ಮತ್ತೆ ಪಕ್ಷದ ಪ್ರಾಬಲ್ಯ ಕೂಡಾ ಕುಸಿದಿದೆ.. ಈ ಕಾರಣಕ್ಕಾಗಿ ಜನರು ಹಿಂದುಮುಂದು ನೋಡುತ್ತಿದ್ದಾರೆ.. ಈ ನಡುವೆಯೂ ಹೆಚ್ಡಿಕೆ ಜನರ ಮನಸ್ಸು ಗೆಲ್ಲೋ ಪ್ರಯತ್ನ ಮಾಡುತ್ತಿದ್ದಾರೆ.. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೋ ನೋಡಬೇಕು…