BengaluruPolitics

ಖಾಲಿ ಖಜಾನೆಯಲ್ಲಿ ಚಿಲ್ಲರೆ ಎಣಿಸ್ತಿದ್ದಾರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ!

ಬೆಂಗಳೂರು; ರಾಜ್ಯ ಸರ್ಕಾರ ಪಾಪರ್‌ ಆಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಖಾಲಿ ಖಜಾನೆಯಲ್ಲಿ ಎಷ್ಟು ಉಳಿದಿದೆ ಎಂದು ಚಿಲ್ಲರೆ ಎಣಿಸುತ್ತಿದ್ದಾರೆ ಅಂತ ವಿಪಕ್ಷ ನಾಯಕ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ.. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ನಮ್ಮ ಬಿಜೆಪಿ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ದುಪ್ಪಟ್ಟು ಪರಿಹಾರ ನೀಡಿತ್ತು.. ಕೇಂದ್ರದ ಪರಿಹಾರದ ಜೊತೆಗೆ ರಾಜ್ಯದ ಪಾಲನ್ನೂ ನೀಡಲಾಗಿತ್ತು.. ಆದ್ರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಾಪರ್‌ ಆಗಿದೆ ಎಂದು ಲೇವಡಿ ಮಾಡಿದ್ದಾರೆ..
ಸಿದ್ದರಾಮಯ್ಯ ಅವರು ರೈತರ ಸಂಕಷ್ಟಕ್ಕೆ ಮಿಡಿಯಬೇಕಾಗಿತ್ತು.. ಆದ್ರೆ ರೈತ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ.. ರೈತರ ಪಾಲಿಗೆ ಕಣ್ಣು, ಕಿವಿ ಇಲ್ಲದ ಈ ಕಾಂಗ್ರೆಸ್‌ ಸರ್ಕಾರ ನರೇಗಾ ಹಣ ಹಾಗೂ ಪಿಂಚಣಿ ಹಣವನ್ನು ಕೂಡಾ ರೈತರ ಸಾಲಕ್ಕೆ ಜಮೆ ಹಾಕಿಕೊಳ್ಳುತ್ತಿದೆ.. ಈ ಹಣ ಜಮೆ ಹಾಕಿಕೊಳ್ಳದಂತೆ ಬ್ಯಾಂಕ್‌ಗಳಿಗೆ ಸೂಚನೆ ಕೊಡುವಂತೆ ಆದೇಶ ನೀಡಬೇಕು. ಬ್ಯಾಂಕ್‌ ಗಳು ಒಪ್ಪದಿದ್ದರೆ ರೈತರ ಸಾಲ ಮನ್ನಾ ಮಾಡಬೇಕೆಂದು ಆರ್‌.ಅಶೋಕ್‌ ಆಗ್ರಹ ಮಾಡಿದ್ದಾರೆ..
ಕರ್ನಾಟಕದ ರೈತರಿಗಾಗಿ ಕೇಂದ್ರ ಸರ್ಕಾರ 3,454 ಕೋಟಿ ರಪಾಯಿ ಬರ ಪರಿಹಾರ ನೀಡಿದೆ.. ಆದ್ರೆ ರಾಜ್ಯ ಕಾಂಗ್ರೆಸ್‌ ಸರ್ಕಾರ ತನ್ನ ಪಾಲಿನ ಪರಿಹಾರ ಹಣವನ್ನು ನೀಡಿಲ್ಲ. ಕೇಂದ್ರ ಸರ್ಕಾರ ನೀಡಿರುವ ಹಣವನ್ನು ಕೂಡಾ ರೈತರಿಗೆ ಸರಿಯಾಗಿ ತಲುಪಿಸಿಲ್ಲ ಎಂದು ಆರ್‌.ಅಶೋಕ್‌ ಇದೇ ವೇಳೆ ಆರೋಪ ಮಾಡಿದ್ದಾರೆ.. ಈ ಪರಿಹಾರದ ಹಣವನ್ನು ಹಳೆ ಬಾಕಿಗಳಿಗೆ ಬ್ಯಾಂಕುಗಳು ಜಮೆ ಮಾಡುತ್ತಿದ್ದರೂ ರಾಜ್ಯ ಸರ್ಕಾರ ಸುಮ್ಮನಿದೆ ಎಂದೂ ಆರೋಪ ಮಾಡಿದ್ದಾರೆ..

Share Post