BengaluruCrime

ಒಂದೇ ಸೆಲ್‌ನಲ್ಲಿದ್ದಾರೆ ಪ್ರಜ್ವಲ್‌, ಸೂರಜ್‌..!; ಕೊಠಡಿಯಲ್ಲಿ ಟಿವಿ ಇಲ್ಲ, ಮಂಚವೂ ಇಲ್ಲ!

ಹಾಸನ; ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿದ್ದಾರೆ.. ಅವರ ಹಿರಿಯ ಸಹೋದರ ಕೂಡಾ ಅಸಹಜ ಲೈಂಗಿಕ ದೌರ್ಜನ್ಯ ಆರೋಪದಡಿ ಪರಪ್ಪನ ಅಗ್ರಹಾರ ಸೇರಿದ್ದಾರೆ.. ಇಬ್ಬರೂ ಕೂಡಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದೇ ಸೆಲ್‌ನಲ್ಲಿದ್ದಾರೆ.. ಸುಖದ ಸುಪ್ಪತ್ತಿಗೆಯಲ್ಲಿ ಜೀವನ ಮಾಡಿದ್ದ ಇಬ್ಬರೂ ಈಗ ಯಾವುದೇ ಸೌಲಭ್ಯಗಳಿಲ್ಲದ ಸೆಲ್‌ನಲ್ಲಿ ನೊಣ ಹೊಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ..

ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.. ಎರಡು ದಿನಗಳ ಹಿಂದಷ್ಟೇ ಪ್ರಜ್ವಲ್‌ ರೇವಣ್ಣರನ್ನು ಸೂರಜ್‌ ರೂಮಿಗೆ ಶಿಫ್ಟ್‌ ಮಾಡಲಾಗಿದೆ.. ಆ ಕೊಠಡಿಯಲ್ಲಿ ಯಾವುದೇ ಸೌಲಭ್ಯಗಳಿಲ್ಲ.. ಇಬ್ಬರೂ ಕೂಡಾ ಸಾಮಾನ್ಯ ಕೈದಿಗಳಂತೆ ಇದ್ದಾರೆ.. ಇವರಿರುವ ರೂಮಿನಲ್ಲಿ ಟಿವಿ, ಮಂಚ ಏನೂ ಇಲ್ಲ. ಕೇವಲ ಚಾಪೆ ಹಾಗೂ ದಿಂಬು ಮಾತ್ರ ಇದೆ ಎಂದು ತಿಳಿದುಬಂದಿದೆ..

ಅಣ್ಣ, ತಮ್ಮ ಇಬ್ಬರೂ ಆಕಡೆ ಮೂಲೆಗೊಂದು ಚಾಪೆ, ಈ ಕಡೆ ಮೂಲೆಗೊಂದು ಚಾಪೆ ಹಾಕಿಕೊಂಡು ಅದರ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ ಎಂದು ಗೊತ್ತಾಗಿದೆ.. ಹೊರಗೆ ಏನು ನಡೆಯುತ್ತಿದೆ.. ರಾಜಕೀಯ ಹೇಗಿದೆ..? ಹೊರಗೆ ಜನ ಏನು ಮಾತನಾಡುತ್ತಿದ್ದಾರೆ ಇತ್ಯಾದಿಯ ಬಗ್ಗೆ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ..

 

Share Post