NationalSports

ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯ; ಟೀಂ ಇಂಡಿಯಾ 46ರನ್‌ಗಳಿಗೆ ಆಲ್‌ಔಟ್‌

ಬೆಂಗಳೂರು; ಟೀಂ ಇಂಡಿಯಾ 37 ವರ್ಷಗಳ ಬಳಿಕ ತವರು ನೆಲದಲ್ಲೇ ಅತ್ಯಲ್ಪ ರನ್‌ಗಳಿಗೆ ಆಲ್‌ಔಟ್‌ ಆಗಿದೆ. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಆಲ್‌ಔಟ್‌ ಆಗಿದೆ.. ಇದು ತವರು ನೆಲದಲ್ಲಿ ಭಾರತ ಕಲೆಹಾಕಿದ ಅತ್ಯಂತ ಕಡಿಮೆ ಮೊತ್ತವಾಗಿದೆ.. 1987ರಲ್ಲಿ ಟೀಂ ಇಂಡಿಯಾ ವೆಸ್ಟ್‌ ಇಂಡೀಸ್‌ ವಿರುದ್ಧ 75 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.. ಅನಂತರ ಇದೇ ಕಡಿಮೆ ಮೊತ್ತವಾಗಿದೆ.. ಈ ಮೂಲಕ ಟೀಂ ಇಂಡಿಯಾ ತೀವ್ರ ಮುಖಭಂಗ ಅನುಭವಿಸಿದೆ..
ಟಾಸ್‌ ಗೆದ್ದು ಮೊದಲ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ರೋಹಿತ್‌ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಕೇವಲ 46 ರನ್‌ಗಳಿಗೆ ಮುಗ್ಗರಿಸಿದೆ.. ರೋಹಿತ್ ಶರ್ಮಾ (2) ಎರಡು ರನ್‌ ಗಳಿಸಿ ಕ್ಲೀನ್‌ ಬೌಲ್ಡ್‌ ಆದರು.. ನಂತರ ವಿರಾಟ್‌ ಕೊಹ್ಲಿ, ಸರ್ಫರಾಜ್‌ ಝಾನ್‌ ಡಕ್‌ ಔಟ್‌ ಆದರು.. ರಾಹುಲ್‌, ರವೀಂದ್ರ ಜಡೇಜಾ ಕೂಡಾ ಡಕ್‌ ಔಟ್‌ ಆಗಿದ್ದರಿಂದ ಟೀಂ ಇಂಡಿಯಾ ಅತ್ಯಂತ ಕಡಿಮೆ ಮೊತ್ತಕ್ಕೆ ಆಲ್‌ ಔಟ್‌ ಆಯಿತು..

Share Post