Breaking; 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಕಾಂಗ್ರೆಸ್ ನೇತೃತ್ವದ INDI ಒಕ್ಕೂಟ!; ಸಮೀಕ್ಷೆ ಉಲ್ಟಾ ಆಗುತ್ತಾ..?
ನವದೆಹಲಿ; ಇಂಡಿಯಾ ಒಕ್ಕೂಟ 150ಕ್ಕೂ ಹೆಚ್ಚು ಸೀಟುಗಳು ಗಳಿಸೋದಿಲ್ಲ ಅಂತ ಬಹುತೇಕ ಸಮೀಕ್ಷೆಗಳು ಹೇಳಿದ್ದವು.. ಆದ್ರೆ, ಮುನ್ನಡೆಯಲ್ಲಿ INDI ಒಕ್ಕೂಟ 217 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.. ಈ ಹಿನ್ನೆಲೆಯಲ್ಲಿ ಸಮೀಕ್ಷೆಗಳ ವರದಿಗಳು ಉಲ್ಟಾ ಆಗುತ್ತವಾ ಎಂಬ ಅನುಮಾನ ಮೂಡುತ್ತಿದೆ..
ಕಾಂಗ್ರೆಸ್ ನಾಯಕರು ನಾವು ಸಮೀಕ್ಷೆಗಳನ್ನು ನಂಬೋದಿಲ್ಲ.. ನೋಡ್ತಾ ಇರಿ ಫಲಿತಾಂಶ ಬೇರೆ ರೀತಿಯೇ ಇರುತ್ತೆ ಎಂದು ಹೇಳಿದ್ದರು.. ಸದ್ಯ ಟ್ರೆಂಡ್ ನೋಡಿದರೆ ಹಾಗೆಯೇ ಕಾಣಿಸುತ್ತಿದೆ.. ಆದ್ರೆ ಇದೇ ಟ್ರೆಂಡ್ ಮುಂದುವರೆಯುತ್ತೆ ಎಂದು ಹೇಳಲು ಸಾಧ್ಯವಿಲ್ಲ..
ಸದ್ಯದ ಮಾಹಿತಿ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ 270 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್ ನೇತೃತ್ವದ INDI ಒಕ್ಕೂಟ 217ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ..