Politics

Breaking; ಲೋಕಸಭಾ ಚುನಾವಣೆಗೆ ವೇಳಾಪಟ್ಟಿ ಘೋಷಣೆ; ಫುಲ್‌ ಡಿಟೇಲ್ಸ್‌

ಬೆಂಗಳೂರು; 543 ಕ್ಷೇತ್ರಗಳ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಘೋಷಣೆ ಮಾಡಿದೆ.. ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ.. ಒಟ್ಟು ಏಳು  ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ವೇಳಾಪಟ್ಟಿ ಘೋಷಣೆ ಮಾಡಿದ್ದಾರೆ. ದೆಹಲಿ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಯುತ್ತಿದೆ.

ದೇಶದಲ್ಲಿ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ರಂದು ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಎರಡನೇ ಹಂತದ ಮತದಾದನ ಮೇ 7 ರಂದು ನಡೆಯಲಿದೆ.

ಏಪ್ರಿಲ್ 19ರಂದು ಮೊದಲ ಹಂತದ ಮತದಾನ  – 102 ಕ್ಷೇತ್ರಗಳು

ಏಪ್ರಿಲ್ 26ರಂದು ಎರಡನೇ ಹಂತದ ಮತದಾನ – 89 ಕ್ಷೇತ್ರಗಳು

ಮೇ 7ರಂದು ಮೂರನೇ ಹಂತದ ಮತದಾನ – 94 ಕ್ಷೇತ್ರಗಳು

ಮೇ 13ರಂದು ನಾಲ್ಕನೇ ಹಂತದ ಮತದಾನ – 96 ಕ್ಷೇತ್ರಗಳು

ಮೇ 20 ರಂದು ಐದನೇ ಹಂತದ ಮತದಾನ  – 49 ಕ್ಷೇತ್ರಗಳು

ಮೇ 25 ರಂದು ಆರನೇನೇ ಹಂತದ ಮತದಾನ – 57 ಕ್ಷೇತ್ರಗಳು

ಜೂನ್ 1 ರಂದು ಏಳನೇ ಹಂತದ ಮತದಾನ  – 57 ಕ್ಷೇತ್ರಗಳು

ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟ

 

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ
==============================

ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ

ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ

ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ

ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ

ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ

 

ಯಾವ ರಾಜ್ಯದಲ್ಲಿ ಎಷ್ಟು ಹಂತಗಳಲ್ಲಿ ಮತದಾನ..?

===================================

– ಒಂದೇ ಹಂತದಲ್ಲಿ 22 ರಾಜ್ಯಗಳಲ್ಲಿ ಮತದಾನ

– ಎಪಿ, ತೆಲಂಗಾಣ, ಅರುಣಾಚಲ, ದೆಹಲಿ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ,

– ಕೇರಳ, ತಮಿಳುನಾಡು, ಪಂಜಾಬ್, ಉತ್ತರಾಖಂಡ, ಸಿಕ್ಕಿಂ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ಪುದುಚೇರಿ,

– ಚಂಡೀಗಢ, ಲಕ್ಷದ್ವೀಪ, ದಾದ್ರಾನಗರ ಹವೇಲಿ, ಅಂಡಮಾನ್ ನಿಕೋಬಾರ್‌ನಲ್ಲಿ ಏಕ ಹಂತದ ಮತದಾನ

– ಕರ್ನಾಟಕ, ರಾಜಸ್ಥಾನ, ತ್ರಿಪುರ ಮತ್ತು ಮಣಿಪುರದಲ್ಲಿ ಎರಡು ಹಂತಗಳಲ್ಲಿ ಚುನಾವಣೆ

– ಅಸ್ಸಾಂ ಮತ್ತು ಛತ್ತೀಸ್‌ಗಢದಲ್ಲಿ 3 ಹಂತಗಳಲ್ಲಿ ಮತದಾನ

– ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್‌ನಲ್ಲಿ 4 ಹಂತಗಳಲ್ಲಿ ಮತದಾನ

– ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಹಂತಗಳಲ್ಲಿ ಮತದಾನ

– ಉತ್ತರ ಪ್ರದೇಶ, ಬಿಹಾರ, ಬಂಗಾಳದಲ್ಲಿ 7 ಹಂತಗಳಲ್ಲಿ ಮತದಾನ

 

 

ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಸರ್ವ ಸನ್ನದ್ಧವಾಗಿದೆ

543 ಲೋಕಸಭಾ ಕ್ಷೇತ್ರಗಳಿಗೆ ನಡೆಯಲಿರುವ ಮತದಾನ

ಆನ್‌ಲೈನ್‌ ಹಣದ ವ್ಯವಹಾರದ ಬಗ್ಗೆ ಹೆಚ್ಚು ಗಗಮನ ಹರಿಸುತ್ತೇವೆ

ಅಭ್ಯರ್ಥಿಗಳು ಮತದಾರರನ್ನು ಪ್ರಚೋದಿಸಬಾರದು, ದ್ವೇಷ ಭಾಷಣ ಮಾಡಬಾರದು

ಎಲ್ಲಾ ಪಕ್ಷಗಳೂ ಚುನಾವಣಾ ನೀತಿ ಸಂಹಿತೆ ಪಾಲನೆ ಮಾಡಬೇಕು

ಅಕ್ರಮವಾಗಿ ಹಣ ಹಂಚಿದರೆ, ಗಲಭೆ ನಡೆಸಿದರೆ ಕೂಡಲೇ ಕ್ರಮ

ಗಲಭೆ ನಡೆಸಿದರೆ ಜಾಮೀನು ರಹಿತ ವಾರಂಟ್‌ ಹೊರಡಿಸಲಾಗುತ್ತದೆ

96.8 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹ

1.82 ಕೋಟಿ ಹೊಸ ಮತದಾರರು ಈ ಬಾರಿ ಮತದಾನಕ್ಕೆ ಅವಕಾಶ ಪಡೆದುಕೊಂಡಿದ್ದಾರೆ

10.5 ಲಕ್ಷ ಮತಗಟ್ಟೆಯಲ್ಲಿ ಈ ಬಾರಿ ಪ್ರಜಾಪ್ರಭುತ್ವ ಹಬ್ಬ

1.5 ಕೋಟಿ ಅಧಿಕಾರಿಗಳು ಚುನಾವಣಾ ಪ್ರಕ್ರಿಯಲ್ಲಿ ಪಾಲ್ಗೊಳ್ಳುತ್ತಾರೆ

88.4 ಲಕ್ಷ ವಿಕಲಚೇತನ ಮತದಾರರಿದ್ದಾರೆ

48 ಸಾವಿರ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ

ಒಟ್ಟು 55 ಲಕ್ಷ ಇವಿಎಂಗಳನ್ನು ಮತದಾನಕ್ಕೆ ಬಳಸಲಾಗುತ್ತಿದೆ

49.7 ಕೋಟಿ ಪುರುಷ ಮತದಾರರಿದ್ದಾರೆ

47.1 ಕೋಟಿ ಮಹಿಳಾ ಮತದಾರರಿದ್ದಾರೆ

85 ವರ್ಷ ಮೇಲ್ಪಟ್ಟ ಮತದಾರರು 82 ಲಕ್ಷ ಮಂದಿ ಇದ್ದಾರೆ

19.74 ಕೋಟಿ ಯುವ ಮತದಾರರಿದ್ದಾರೆ

12 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ

ಅಭ್ಯರ್ಥಿಗಳ ಕ್ರಿಮಿನಲ್‌ ಕೇಸ್‌ಗಳ ಬಗ್ಗೆ ಮಾಹಿತಿ ಕಡ್ಡಾಯ

2.18 ಲಕ್ಷ ಶತಾಯುಷಿಗಳು ಈ ಬಾರಿ ಮತ ಚಲಾಯಿಸಲಿದ್ದಾರೆ

ಮತಗಟ್ಟೆಗಳಲ್ಲಿ ಹೆಲ್ಪ್‌ ಡೆಸ್ಕ್‌ ಹಾಗೂ ವ್ಹೀಲ್‌ ಚೇರ್‌ಗಳ ವ್ಯವಸ್ಥೆ ಮಾಡಲಾಗುತ್ತದೆ

80 ವರ್ಷ ಮೇಲ್ಪಟ್ಟ ಮತದಾರರನ್ನು ಕರೆತರಲು ಸೂಕ್ತ ವ್ಯಸ್ಥೆ

ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಯಾವುದೇ ಕಾರಣಕ್ಕೂ ಬಳಸುವಂತಿಲ್ಲ

2100 ವೀಕ್ಷಕರು ಸೂಕ್ಷ್ಮ ಮತಗಟ್ಟೆಗಳಲ್ಲಿ ಹದ್ದಿನ ಕಣ್ಣಿಡಲಿದ್ದಾರೆ

40 ಪರ್ಸೆಂಟ್‌ಗಿಂತ ಹೆಚ್ಚು ಊನವಾಗಿರುವ ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ

ತೋಲ್ಬಲ, ಹಣಬಲ, ಸುಳ್ಳು ಸುದ್ದಿ ಹಾಗೂ ಕಾನೂನು ಉಲ್ಲಂಘನೆ ತಡೆಯೋದು ನಮ್ಮ ಮುಂದಿರುವ ಸವಾಲು

ಅಕ್ರಮಗಳನ್ನು ತಡೆಯಲು ನಾವು ಈ ಬಾರಿ ಡ್ರೋನ್‌ಗಳನ್ನೂ ಬಳಸುತ್ತೇವೆ

ಬಾರ್ಡರ್‌ಗಳಲ್ಲಿ ಡ್ರೋನ್‌ ಮೂಲಕ ಪರಿಶೀಲನೆ ನಡೆಸಲಾಗುತ್ತದೆ

ಪ್ರತಿ ಜಿಲ್ಲೆಯಲ್ಲಿ ಕಂಟ್ರೋಲ್‌ ರೂಮ್‌ಗಳನ್ನು ಹಾಗೂ ಚೆಕ್‌ ಪೋಸ್ಟ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ

ಕಂಟ್ರೋಲ್‌ ರೂಮ್‌ಗಳು 24 ಗಂಟೆಯೂ ಓಪನ್‌ ಇರುತ್ತವೆ

ಚುನಾವಣೆ ಮುಗಿಯುವವರೆಗೂ ಸೂರ್ಯಾಸ್ತದ ನಂತರ ATM ವಾಹನಗಳ ಓಡಾಡುವಂತಿಲ್ಲ

ಸಾಮಾಜಿಕ ಜಾಲತಾಣಗಳು ಮೇಲೆ ನಾವು ಹಚ್ಚು ಗಮನ ಇಟ್ಟಿರುತ್ತೇವೆ

ಮನೆಯಿಂದಲೇ ಮತದಾನ ಮಾಡಲು ಮೊದಲೇ ನೋಂದಾಯಿಸಿಕೊಳ್ಳಬೇಕು

ಪ್ರತಿಯೊಂದು ಚುನಾವಣೆಯೂ ನಮಗೆ ಪರೀಕ್ಷೆ ಇದ್ದಂತೆ

ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ನಾವು ಸನ್ನದ್ಧರಾಗಿದ್ದೇವೆ

 

Share Post