ರಸ್ತೆ ಅಗಲೀಕರಣಕ್ಕಾಗಿ ಸ್ವಂತ ಮನೆಯನ್ನೇ ಕೆಡವಲು ಹೇಳಿದ ಬಿಜೆಪಿ ಶಾಸಕ!
ಹೈದರಾಬಾದ್; ಜನಪ್ರತಿನಿಧಿಗಳು ಯಾವಾಗಲೂ ಕಾನೂನನ್ನು ಗಾಳಿಗೆ ತೂರುತ್ತಾರೆ. ಅದರಲ್ಲೂ ಸರ್ಕಾರದ ಯಾವುದಾದರೂ ಒಂದು ಆದೇಶ ತಮಗೆ ನಷ್ಟ ಆಗುತ್ತ ಅಂದ್ರೆ ಆ ಆದೇಶಕ್ಕೆ ಬೆಲೆಯೇ ಕೊಡೋದಿಲ್ಲ. ಆದ್ರೆ ಆಂಧ್ರಪ್ರದೇಶದ ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಮಣ ರೆಡ್ಡಿ ಇದಕ್ಕೆ ತದ್ವಿರುದ್ಧ. ರಸ್ತೆ ಅಗಲೀಕರಣಕ್ಕಾಗಿ ತಮ್ಮ ಸ್ವಂತ ಮನೆಯನ್ನೇ ಕೆಡವಲು ಅವರು ಅನುಮತಿ ಕೊಟ್ಟು ಎಲ್ಲರಿಗೂ ಮಾದರಿಯಾಗಿ ನಿಂತಿದ್ದಾರೆ.
ಕಾಮರೆಡ್ಡಿಯಲ್ಲಿ ಶಾಸಕರ ಭವನದಿಂದ ಹಳೇ ಬಸ್ ನಿಲ್ದಾಣದವರೆಗಿನ ರಸ್ತೆ ಅತ್ಯಂತ ಕಿರಿದಾಗಿತ್ತು. ಹೀಗಾಗಿ ಅದರ ಅಗಲೀಕರಣ ಕಾಮಗಾರಿ ನಡೆಯುತ್ತಿದೆ, ಈ ರಸ್ತೆಯಲ್ಲೇ ಬಿಜೆಪಿ ಶಾಸಕ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವೆರ ಮನೆಯೂ ಬರುತ್ತದೆ. ಇದನ್ನು ತಿಳಿದ ಶಾಸಕರು, ತಮ್ಮ ಮನೆಯನ್ನು ಕೆಡವಲು ಅನುಮತಿ ನೀಡಿದ್ದಾರೆ. ಈ ಮೂಲಕ ರಸ್ತೆ ಅಗಲೀಕರಣ ಕಾಮಗಾರಿ ಸುಗಮವಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ.
ಈ ರಸ್ತೆಯಲ್ಲಿ ಎರಡು ಚಿತ್ರಮಂದಿರಗಳು, ಅಧಿಕಾರಿಯೊಬ್ಬ ನಿವಾಸ ಸೇರಿದಂತೆ ಹಲವು ಪ್ರಮುಖರ ಆಸ್ತಿಗಳಿವೆ. ಅವುಗಳನ್ನು ಕೂಡಾ ಕೆಡವಬೇಕಾಗಿತ್ತು. ಇದರ ಜೊತೆಗೆ ಶಾಸಕರ ನಿವಾಸವನ್ನೂ ಕೆಡವಬೇಕಾಗಿತ್ತು. ಇದು ಅಧಿಕಾರಿಗಳಿಗೆ ತಲೆನೋವಾಗಿತ್ತು. ಆದ್ರೆ ಶಾಸಕರೇ ಮುಂದೆ ನಿಂತು ತಮ್ಮ ಸ್ವಂತ ಮನೆಯನ್ನು ಕೆಡವಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಇತರರು ಕೂಡಾ ರಸ್ತೆ ಅಗಲೀಕರಣಕ್ಕಾಗಿ ಆಸ್ತಿಗಳ ತೆರವಿಗೆ ಅನುಮತಿ ನೀಡಿದ್ದಾರೆ.
ಶಾಸಕ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರ ವಿರುದ್ದ ಹಾಲಿ ಸಿಎಂ ರೇವಂತ್ ರೆಡ್ಡಿ ಹಾಗೂ ಮಾಜಿ ಸಿಎಂ ಕೆ.ಚಂದ್ರಶೇಖರ ರಾವ್ ಸ್ಪರ್ಧೆ ಮಾಡಿದ್ದರು. ಈ ಇಬ್ಬರು ದಿಗ್ಗಜ ನಾಯಕರನ್ನೂ ಶಾಸಕ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಭಾರಿ ಅಂತರದೊಂದಿಗೆ ಸೋಲಿಸಿದ್ದರು. ಇದಕ್ಕಾಗಿ ಅವರು ದೇಶಾದ್ಯಂತ ಹೆಸರಾಗಿದ್ದರು. ಇದೀಗ ಜನಪರವಾಗಿ ನಿರ್ಧಾರ ತೆಗೆದುಕೊಂಡು ಕಾನೂನಿನಡಿಯಲ್ಲಿ ತಮ್ಮ ಸ್ವಂತ ಮನೆಯನ್ನೇ ಕೆಡವಲು ಅವಕಾಶ ಮಾಡಿಕೊಟ್ಟು, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.