ವೇದಿಕೆ ಮೇಲೆ ಅಸ್ವಸ್ಥರಾದ ಕೇಂದ್ರ ಸಚಿವ ನಿತಿನ್ ಗಡ್ಕರಿ
ಕೋಲ್ಕತ್ತಾ; ಸಿಲಿಗುರಿಯಲ್ಲಿ ನಡೆಯುತ್ತಿದ್ದ ಶಿವಮಂದಿರದಿಂದ ಸೇವಕ್ ಕಂಟೋನ್ಮೆಂಟ್ ವರೆಗಿನ ರಸ್ತೆಯ ಶಂಕು ಸ್ಥಾಪನೆ ಕಾರ್ಯಕ್ರಮದ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೆಲಕಾಲ ಅಸ್ವಸ್ಥರಾದ ಘಟನೆ ನಡೆದಿದೆ.
ಡಾರ್ಜಿಲಿಂಗ್ ಜಂಕ್ಷನ್ ಬಳಿ ದಗಾಪುರ್ ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವೇದಿಕೆ ಮೇಲೆ ಕುಳಿತಿದ್ದ ಸಚಿವರು, ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾದರು. ಕೂಡಲೇ ಅವರನ್ನು ವೇದಿಕೆ ಹಿಂದಿದ್ದ ಗ್ರೀನ್ ರೂಮ್ಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಯ್ತು. ಸ್ವಲ್ಪ ಚೇತರಿಸಿಕೊಂಡ ನಂತರ ಅವರು ಡಾರ್ಜಿಲಿಂಗ್ ಸಂಸದ ರಾಜು ಬಿಸ್ತಾ ಅವರ ಮನೆಗೆ ಹೋಗಿ ವಿಶ್ರಾಂತಿ ಪಡೆದರು.
ಗಡ್ಕರಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಇಳಿದಿತ್ತು. ಹೀಗಾಗಿ ವೈದ್ಯರು ಸಂಸದರ ಮನೆಯಲ್ಲಿ ಗಡ್ಕರಿಯವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.