BengaluruPolitics

ಮತ್ತೊಂದು MUDA ಬಾಂಬ್‌ ಹಾಕಿದ ಹೆಚ್ಡಿಕೆ; ಸಿಎಂಗೆ ಮತ್ತೊಂದು ಸಂಕಷ್ಟ?

ಮಂಡ್ಯ;  ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹೆಸರಲ್ಲಿ 14 ಬದಲಿ ನಿವೇಶನ ಪಡೆದ ವಿಚಾರ ಸಿದ್ದರಾಮಯ್ಯ ಅವರಿಗೆ ಕಾನೂನು ಸಂಕಷ್ಟ ತಂದೊಡ್ಡಿದೆ.. ಇದೀಗ ಈ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಕೂಡಾ ಹಸ್ತಕ್ಷೇಪ ಮಾಡಿದ್ದಾರೆ.. ಇಂದು ಇಡಿ ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಿದ್ದಾರೆ.. ಹೀಗಿರುವಾಗಲೇ ಮಾಜಿ ಸಿಎಂ ಕುಮಾರಸ್ವಾಮಿಯವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮತ್ತೊಂದು ಮುಡಾ ಪ್ರಕರಣದ ಬಾಂಬ್‌ ಎಸೆದಿದ್ದಾರೆ..

ಮೈಸೂರಿನ ಹಿನಕಲ್‌ ನಲ್ಲಿ 1986ರಲ್ಲಿ 434 ಎಕರೆ ಜಾಗದಲ್ಲಿ ಮುಡಾದಿಂದ ಹೊಸ ಬಡಾವಣೆ ನಿರ್ಮಾಣಕ್ಕೆ ನೋಟಿಫಿಕೇಷನ್‌ ಹೊರಡಿಸಲಾಗಿತ್ತು.. ಅದರ ವಿಚಾರವಾಗಿ 17/4 ರಲ್ಲಿ ಏನೇನಾಗಿದೆ ಎಂದು ತೆಗೆದರೆ ಎಲ್ಲಾ ಗೊತ್ತಾಗುತ್ತೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.. ಅವರು ಸತ್ಯಮೇವ ಜಯತೆ ಎಂದು ಹೇಳುತ್ತಾರೆ.. ಆದ್ರೆ 1986ರಲ್ಲಿ ಹಿನಕಲ್‌ನಲ್ಲಿ ಹೊಸ ಬಡಾವಣೆಗೆ ನೋಟಿಫಿಕೇಷನ್‌ ಹೊರಡಿಸಲಾಗಿತ್ತು.. ಆಗ ಸಾಕಮ್ಮ ಎಂಬುವವರ ಕೈಯಲ್ಲಿ ಅರ್ಜಿ ಹಾಕಿಸಲಾಗಿತ್ತು.. 20 ದಿನದಲ್ಲಿ ಅದು ಡಿನೋಟಿಫಿಕೇಷನ್‌ ಆಗುತ್ತದೆ.. ಅದನ್ನು ಈಗಿನ ಸಿಎಂ ಸಿದ್ದರಾಮಯ್ಯ ಕೊಂಡುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ..

ಸಿದ್ದರಾಮಯ್ಯ ಅವರು ಸುಮಾರು 40 ವರ್ಷಕ್ಕೂ ಹೆಚ್ಚಿನ ಕಾಲದಿಂದ ರಾಜಕೀಯ ಮಾಡಿಕೊಂಡು ಬಂದಿದ್ದಾರೆ.. ಇಂದಿನವರೆಗೆ ಅವರ ಮೇಲೆ ವೈಯಕ್ತಿಕ ವಿಚಾರಕ್ಕೆ ಯಾವುದೇ ಎಫ್‌ಐಆರ್‌ ಆಗಿರಲಿಲ್ಲ.. ಆದ್ರೆ, ಅವರ ಪತ್ನಿ ಪಾರ್ವತಿಯವರು ಪಡೆದ ಬದಲಿ ನಿವೇಶನ ವಿಚಾರವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್‌ಐಆರ್‌ ಆಗಿದೆ.. ಲೋಕಾಯುಕ್ತ ವಿಚಾರಣೆ ಎದುರಿಸುತ್ತಿದ್ದಾರೆ.. ಈ ನಡುವೆ ಈ ಪ್ರಕಣದಲ್ಲಿ ಇಡಿ ಅಧಿಕಾರಿಗಳು ಕೂಡಾ ಎಂಟ್ರಿಯಾಗಿದ್ದಾರೆ.. ಮೈಸೂರಿನಲ್ಲಿ ಇವತ್ತು ದಾಳಿ ಮಾಡಿದ್ದಾರೆ.. ಮುಡಾ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ..

ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಜೆಡಿಎಸ್‌ ನವರು ಸಿದ್ದರಾಮಯ್ಯ ಅವರು ರಾಜೀನಾಮೆ ಕೇಳುತ್ತಿದ್ದಾರೆ.. ಇನ್ನೊಂದೆಡೆ ಸಿಎಂ ಪತ್ನಿ ಪಾರ್ವತಿ ತಮ್ಮ ಸೈಟುಗಳನ್ನು ವಾಪಸ್‌ ಕೊಟ್ಟಿದ್ದಾರೆ.. ಇದರ ಜೊತೆ ಮೈಸೂರಿನ ಸ್ಥಳೀಯ ಕಾಂಗ್ರೆಸ್‌ ನಾಯಕರು ಸಿದ್ದರಾಮಯ್ಯ ಅವರ ಪತ್ನಿಯಂತೆ 50-50 ಅನುಪಾತದಲ್ಲಿ ಸೈಟು ಪಡೆದವರೆಲ್ಲಾ ವಾಪಸ್‌ ಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ.. ಎಲ್ಲರಿಂದ ಸೈಟು ವಾಪಸ್‌ ಪಡೆಯುವಂತೆ ಮೈಸೂರಿನ ಕಾಂಗ್ರೆಸ್‌ ನಾಯಕರು ಸರ್ಕಾರಕ್ಕೆ ಆಗ್ರಹ ಮಾಡುತ್ತಿದ್ದಾರೆ.. ಸರ್ಕಾರ ಕೂಡಾ ಈ ಬಗ್ಗೆ ಕಠಿಣ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.. ಹೀಗಿರುವಾಗಲೇ ಕುಮಾರಸ್ವಾಮಿವರು ಹಳೆದ ಮುಡಾ ಡಿನೋಟಿಫಿಕಷನ್‌ ವಿಚಾರ ಎತ್ತಿದ್ದಾರೆ..

ಹಿನಕಲ್‌ನಲ್ಲಿ 1986ರಲ್ಲಿ ಹಿಸ ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಲು ನೋಟಿಫಿಕೇಷನ್‌ ಹೊರಡಿಸಲಾಗಿತ್ತು.. ಸುಮಾರು 434 ಎಕರೆ ಭೂಮಿ ಸ್ವಾಧೀನಕ್ಕೆ ನೋಟಿಫಿಕೇಷನ್‌ ಆಗಿತ್ತು.. ಇದಾದ ಮೇಲೆ ಸಾಕಮ್ಮ ಎಂಬುವವರಿಂದ ಅರ್ಜಿ ಹಾಕಿಸಲಾಗಿದೆ.. ಅನಂತರ 20 ದಿನಗಳಲ್ಲಿಯೇ ಸಾಕಮ್ಮ ಅವರ ಜಮೀನನ್ನು ಸ್ವಾಧೀನದಿಂದ ಕೈಬಿಡಲಾಗಿದೆ.. ಸಾಕಮ್ಮ ಜಾಗವನ್ನು ಡಿನೋಟಿಫೈ ಮಾಡಿಸಲಾಗಿದ್ದು, ನಂತರ ಆ ಜಾಗವನ್ನು ಸಾಕಮ್ಮ ಅವರಿಂದ ಸಿಎಂ ಸಿದ್ದರಾಮಯ್ಯ ಅವರು ಖರೀದಿ ಮಾಡಿದ್ದಾರೆ ಎಂಬುದು ಕುಮಾರಸ್ವಾಮಿಯವರ ಆರೋಪ..

ಈಗ ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯುತ್ತಿದೆ.. ಟಿಕೆಟ್‌ ಫೈಟ್‌ ಜೋರಾಗಿದೆ.. ಕಾಂಗ್ರೆಸ್‌ ಆಡಳಿತದಲ್ಲಿರುವರಿಂದ ಹೆಚ್ಚು ಸ್ಥಾನ ಗೆಲ್ಲಬೇಕಾದ ಅನಿವಾರ್ಯತೆ ಕಾಂಗ್ರೆಸ್‌ ಪಕ್ಷಕ್ಕಿದೆ.. ಆದ್ರೆ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷಗಳು ಮುಡಾ ವಿಚಾರವನ್ನೇ ಮುಂದಿಟ್ಟುಕೊಂಡು ಪ್ರಚಾರ ಮಾಡೋದಕ್ಕೆ ಹೋಗುತ್ತಿವೆ.. ಈ ಬಾರಿಯ ಉಪಚುನಾವಣೆಯಲ್ಲಿ ಮುಡಾ ವಿಚಾರ ಹೆಚ್ಚು ಸದ್ದು ಮಾಡಲಿದ ಎಂದು ಹೇಳಲಾಗುತ್ತಿದೆ..

ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯಗೆ ಮುಡಾ ಗುಮ್ಮ ತೊಲಗುವಂತೆ ಕಾಣುತ್ತಿಲ್ಲ.. ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಎಂಟ್ರಿಯಾಗಿರುವುದರಿಂದ ಮುಂದೆ ಏನೆಲ್ಲಾ ಬೆಳವಣಿಗೆಗಳಾಗುತ್ತವೋ ಗೊತ್ತಿಲ್ಲ.. ಎಫ್‌ಐಆರ್‌ ದಾಖಲಾದರೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ.. ಸಿಎಂ ಬದಲಾಗುತ್ತಾರೆ.. ಹರಿಯಾಣ, ಜಮ್ಮು-ಕಾಶ್ಮೀರ ಚುನಾವಣೆಯ ನಂತರ ಸಿಎಂ ಬದಲಾವಣೆ ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ಚಿಂತನೆ ನಡೆಸಿದೆ ಎಂದೆಲ್ಲಾ ಹೇಳಲಾಗುತ್ತಿತ್ತು.. ಆದ್ರೆ ಸದ್ಯಕ್ಕೆ ಆ ಲಕ್ಷಣ ಕಾಣುತ್ತಿಲ್ಲ.. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುವ ಲಕ್ಷಣ ಕಾಣುತ್ತಿದೆ.. ಆದ್ರೆ ಉಪಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನ ಏನಾಗಿರುತ್ತೆ ಅನ್ನೋದೇ ಕುತೂಹಲದ ವಿಚಾರ.. ಒಟ್ಟಿನಲ್ಲಿ ಮುಡಾ ವಿಚಾದಲ್ಲಿ ಇಡಿ ಅಧಿಕಾರಿಗಳು ಎಂಟ್ರಿಯಾಗಿರುವುದರಿಂದ ಈ ಕೇಸ್‌ ಬಗ್ಗೆ ಕುತೂಹಲ ಹೆಚ್ಚಾಗುವಂತಾಗಿದೆ.

Share Post