Politics

2024ರಲ್ಲಿ ಬಿಜೆಪಿಯನ್ನು ಸೋಲಿಸುವುದಕ್ಕೆ ಸಾಧ್ಯ; ಪ್ರಶಾಂತ್‌ ಕಿಶೋರ್‌

ನವದೆಹಲಿ: ಎರಡು ಅವಧಿಯಿಂದ ಕೇಂದ್ರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷವನ್ನು 2024ರ ಚುನಾವಣೆಯಲ್ಲಿ ಸೋಲಿಸುವುದಕ್ಕೆ ಆಗುತ್ತದೆ. ಆದರೆ ಷರತ್ತುಗಳು ಅನ್ವಯಿಸುತ್ತವೆ ಎಂದು ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ. ಹಿಂದುತ್ವ ಮತ್ತು ಕಟು ರಾಷ್ಟ್ರೀಯವಾದದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದ್ರೆ, ಇತರೆ ಪಕ್ಷಗಳು ದೂರದೃಷ್ಟಿಯನ್ನಿಟ್ಟುಕೊಂಡು ತಂತ್ರಗಾರಿಕೆ ಮಾಡಿದರೆ ಬಿಜೆಪಿಯನ್ನು ಸೋಲಿಸಬಹುದು. ಆದ್ರೆ ಪ್ರಸ್ತುತ ಇರುವ ಪಕ್ಷ ಅಥವಾ ಮೈತ್ರಿಕೂಟಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಆ ಶಕ್ತಿ ಇದ್ದಂತೆ ಕಾಣುತ್ತಿಲ್ಲ. ಅವರು ತಂತ್ರಗಾರಿಕೆ ರೂಪಿಸಿದರೆ ಬಿಜೆಪಿ ವಿರುದ್ಧ ಗೆಲ್ಲಲು ಸಾಧ್ಯ ಎಂಬುದು ಪ್ರಶಾಂತ್‌ ಕಿಶೋರ್‌ ಅಭಿಪ್ರಾಯ.

ಬಿಜೆಪಿ ಬಿಟ್ಟು ಇತರೆ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ 200ರಷ್ಟು ಲೋಕಸಭಾ ಸ್ಥಾನಗಳಿವೆ. ಇಲ್ಲಿ ಬಿಜೆಪಿ ಎಷ್ಟೇ ತಿಪ್ಪರಲಾಗ ಹಾಕಿದರೂ 50ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಕ್ಕೆ ಆಗುವುದಿಲ್ಲ. ಹೀಗಾಗಿ ಕಾಂಗ್ರೆಸ್‌, ಟಿಎಂಸಿ ಸೇರಿದಂತೆ ಪ್ರಮುಖ ಪಕ್ಷಗಳು ಮರುಸಂಘಟನೆ ಮಾಡಿ, ತಂತ್ರಗಾರಿಕೆ ಬಲಪಡಿಸಿಕೊಂಡರೆ 250 ರಿಂದ 260 ಸ್ಥಾನಗಳನ್ನು ಗೆಲ್ಲಲು ಸಾಧ್ಯ ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

Share Post