Politics

ಮೂರನೇ ಅವಧಿಯಲ್ಲಿ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲಿದ್ದೇವೆ; ಪ್ರಧಾನಿ ಮೋದಿ

ನವದೆಹಲಿ; ನಮ್ಮ 3ನೇ ಅವಧಿಯ ಆಡಳಿತದಲ್ಲಿ ದೇಶವು ದೊಡ್ಡ ನಿರ್ಧಾರಗಳಗಳನ್ನು ಕೈಗೊಳ್ಳಲಿದೆ. ಹೊಸ ಅಧ್ಯಾಯವನ್ನು ಬರೆಯುತ್ತದೆ ಎಂದು ಪ್ರಧಾನಿ ಮೋದಿ ಗ್ಯಾರಂಟಿ ನೀಡಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಮೋದಿ, ನಮ್ಮ ರಕ್ಷಣಾ ಇಲಾಖೆ ಎಲ್ಲಿಯವರೆಗೂ ಸ್ವಾವಲಂಬಿಯಾಗುವುದಿಲ್ಲವೋ ಅಲ್ಲಿವರೆಗೂ ನಿಲ್ಲುವುದಿಲ್ಲ. ಪ್ರತಿ ಕ್ಷೇತ್ರವನ್ನು ಆತ್ಮ ನಿರ್ಭರ ಮಾಡಲಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ..

ನನ್ನ ತಾಯಿ ನಿಧನದ ಬಳಿಕ ನನಗೆ ಇದು ಮೊದಲ ಚುನಾವಣೆ. ನನ್ನ ತಾಯಿ ನಿಧನದ ಬಳಿಕ ದೇಶದ ತಾಯಂದಿರು, ಸಹೋದರಿಯರ ಪ್ರೀತಿಯಿಂದ ನಾನು ಎಂದೂ ಒಂಟಿತನ ಅನುಭವಿಸಲಿಲ್ಲ. ನಿಮ್ಮ ಬೆಂಬಲ ನನ್ನನ್ನು ಕೆಲಸ ಮಾಡಲು ಪ್ರೇರೇಪಿಸುತ್ತೆ. ನೀವು 10 ಗಂಟೆಗಳ ಕಾಲ ಕೆಲಸ ಮಾಡಿದರೆ, ನಾನು 18 ಗಂಟೆಗಳ ಕಾಲ ಕೆಲಸವನ್ನು ಮಾಡುತ್ತೇನೆ. ನೀವು 2 ಹೆಜ್ಜೆ ನಡೆದರೆ, ನಾನು 4 ಹೆಜ್ಜೆ ನಡೆಯುತ್ತೇನೆ ಎಂದು ಮೋದಿ ಹೇಳಿದ್ದಾರೆ..
ದೇಶದಲ್ಲಿ ಬದಲಾವಣೆಗಾಗಿ ಜನ ಆಶೀರ್ವಾದ ಮಾಡಿದ್ದಾರೆ. ಎನ್‌ಡಿಎ ಬೆಂಬಲಿಸಿದ್ದಕ್ಕೆ ಮಹಿಳೆಯರು, ಯುವಕರಿಗೆ ಧನ್ಯವಾದ. ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಂದ ದಾಖಲೆ ಮತದಾನವಾಗಿದೆ. ಅಭಿವೃದ್ಧಿ ಗ್ಯಾರಂಟಿಗೆ ಜನ ಆಶೀರ್ವಾದ ಮಾಡಿದ್ದಾರೆ.
ದೇಶದ ಅಭಿವೃದ್ಧಿಗೆ ಎನ್‌ಡಿಎ ಮೈತ್ರಿಕೂಟ ಬದ್ಧವಾಗಿದೆ. ಆಂಧ್ರದಲ್ಲೂ ಎನ್‌ಡಿಎ ಮೈತ್ರಿ ಪಕ್ಷ ಟಿಡಿಪಿಗೆ ಆಶೀರ್ವಾದ ಸಿಕ್ಕಿದೆ. ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ತೆಲಂಗಾಣದಲ್ಲೂ ನಮ್ಮ ಸಂಖ್ಯೆ ದ್ವಿಗುಣವಾಗಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ, ದೆಹಲಿ, ಹಿಮಾಚಲಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಬಿಜೆಪಿಗೆ ಭಾರಿ ಗೆಲುವು ಸಿಕ್ಕಿದೆ ಎಂದು ಮೋದಿ ಹೇಳಿದ್ದಾರೆ..

 

Share Post