ಜೈಲಿನಲ್ಲಿದ್ದು ಲೋಕಸಭೆಗೆ ಸ್ಪರ್ಧೆ; ಮಾಜಿ ಸಿಎಂ ವಿರುದ್ಧ 4 ಲಕ್ಷ ಲೀಡ್‌ನಲ್ಲಿ ಗೆದ್ದ ಪಕ್ಷೇತರ ಅಭ್ಯರ್ಥಿ!
ಶ್ರೀನಗರ; ಭಯೋತ್ಪಾದನೆಗೆ ಫಂಡಿಂಗ್ ವ್ಯವಸ್ಥೆ ಮಾಡುತ್ತಿದ್ದ ಆರೋಪದ ಮೇಲೆ ಐದು ವರ್ಷದಿಂದ ದೆಹಲಿಯ ತಿಹಾರ್ ಜೈಲಿನಲ್ಲಿರುವ ಆರೋಪಿ ಮಾಜಿ ಸಿಎಂ ಒಬ್ಬರನ್ನು ನಾಲ್ಕು ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ.. ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ವಿರುದ್ಧ ಪಕ್ಷೇತರ ಅಬ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಎಂಜಿನಿಯರ್ ರಷೀದ್ ಎಂದು ಹೆಸರಾಗಿರುವ ಶೇಖ್ ಅಬ್ದುಲ್ ರಷೀದ್ ಭಾರೀ ಅಂತರದಲ್ಲಿ ಜಯ ಸಾಧಿಸಿದ್ದಾರೆ.. ಈ ಮೂಲಕ ಅವರು ಲೋಕಸಭೆ ಪ್ರವೇಶ ಮಾಡಿದ್ದಾರೆ..
ಶೇಖ್ ಅಬ್ದುಲ್ ರಷೀದ್ ಅವರು ನಾಮಪತ್ರ ಸಲ್ಲಿಸಿದ್ದರು ಅಷ್ಟೇ.. ಉಳಿದಂತೆ ಅವರ 22 ವರ್ಷದ ಮಗ ಅಬ್ರಾರ್ ರಷೀದ್ ಎಂಬಾತ ಪ್ರಚಾರ ನಡೆಸಿದ್ದ.. ಈ ವೇಳೆ ಕಾರ್ಯಕರ್ತರ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕಿಸಲು ಬರೀ 27 ಸಾವಿರ ರೂಪಾಯಿ ಖರ್ಚು ಮಾಡಿದ್ದರಂತೆ.. ಇಷ್ಟು ಬಿಟ್ಟರೆ ನಮಗೆ ಯಾವುದೇ ಖರ್ಚಾಗಿಲ್ಲ.. ಜನರೇ ಸ್ವಯಂ ಪೇರಿತರಾಗಿ ನಮ್ಮ ತಂದೆಗೆ ಮತ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾನೆ..
ನನ್ನ ತಂದೆ ಈ ಚುನಾವಣೆಯಲ್ಲಿ ಅಭೂತಪೂರ್ವ ರೀತಿಯಲ್ಲಿ ಗೆಲುವು ಸಾಧಿಸಿರುವುದು ಅವರು ನಿರ್ದೋಷಿ ಎಂಬುದನ್ನು ತೋರಿಸುತ್ತದೆ. ಸರ್ಕಾರ ಕೂಡಲೇ ತಮ್ಮ ತಂದೆಯನ್ನು ಬಿಡುಗಡೆ ಮಾಡಬೇಕು ಎಂದು ಅಬ್ರಾರ್ ರಷೀದ್ ಒತ್ತಾಯಿಸಿದ್ದಾರೆ.