Politics

ಚಳಿಗಾಲದ ಅಧಿವೇಶನ ಆರಂಭ: ವಿಪಕ್ಷಗಳಿಂದ ಸರ್ಕಾರಕ್ಕೆ ಚಾಟಿ ಏಟು

ಬೆಳಗಾವಿ: ಇಂದಿನಿಂದ ಬೆಳಗಾವಿಯಲ್ಲಿ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ. ಸರ್ಕಾರಕ್ಕೆ ಈ ಅಧಿವೇಶನ ಒಂದು ಸವಾಲಾಗಿದೆ. ಯಾಕಂದ್ರೆ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಈಗಾಗಲೇ ವಿಪಕ್ಷಗಳು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಅಧಿವೇಶನದ ಮೊದಲ ದಿನವಾದ ಇಂದು ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ನಡೆಯಲಿದೆ. ನಾಳೆ ಬೆಳಗ್ಗೆ 10.30ರಿಂದ ಅಧಿವೇಶನದಲ್ಲಿ ಕಲಾಪಗಳು ನಡೆಯಲಿವೆ. ಕಲಾಪದಲ್ಲಿ ಶಾಸಕರು, ಪರಿಷತ್‌ ಸದಸ್ಯರು ಸೇರಿ 300ಮಂದಿ ಹಾಜರಿರುತ್ತಾರೆ. ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ 3,500 ಭಾಗಿಯಾಗಲಿದ್ದಾರೆ. ಅಧಿಕಾರಿಗಳ ವಸತಿ ಸೌಲಭ್ಯಕ್ಕಾಗಿ ಈಗಾಗಲೇ 72ಹೊಟೇಲ್‌ಗಳಲ್ಲಿ 2,100ರೂಂಗಳನ್ನು ಕಾಯ್ದಿರಿಸಲಾಗಿದೆ. ಅಧಿವೇಶನ ಮುಗಿಯುವವರೆಗೂ ಬೆಳಗಾವಿ ಸುವರ್ಣ ಸೌಧದಲ್ಲಿ ಭದ್ರತೆಗಾಗಿ ಸುಮಾರು 4ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 15ಎಸ್‌ಪಿ, 40ಡಿಎಸ್‌ಪಿ, 200ಇನ್ಸ್‌ಪೆಕ್ಟರ್,‌ ಒಳಗೊಂಡಂತೆ 4,000 ಪೊಲೀಸ್‌ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪೊಲೀಸರ ಊಟ, ವಸತಿ, ಆಸ್ಪತ್ರೆ, ಕಂಟ್ರೋಲ್‌ ರೂಂ ಸೇರಿದಂತೆ ಇತರೆ ಸೌಕರ್ಯಗಳಿಗೆ ತಾರೀಹಾಳ-ಶಿಂದೊಳ್ಳಿ ರಸ್ತೆಯಲ್ಲಿ ಟೌನ್‌ ಶಿಪ್‌ ನಿರ್ಮಿಸಲಾಗಿದೆ. ಅಧಿವೇಶನದಲ್ಲಿ ಸರ್ಕಾರವು ಕೆಲ ಮಹತ್ವದ ವಿಧೇಯಕಗಳನ್ನು ಮಂಡಿಸಲು ಮುಂದಾಗಿದೆ. ಯಾವೆಲ್ಲ ಮಸೂದೆಗಳು ಮಂಡನೆಯಾಗಲಿವೆ ಎನ್ನುವುದರ ಬಗ್ಗೆ ನಿಖರ ಮಾಹಿತಿ ಇಲ್ಲ. ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಪ್ರಕಾರ ಸುಮಾರು 8-10 ವಿಧೇಯಕಗಳು ಮಂಡನೆಯಾಗುವ ಸಾಧ್ಯತೆಯಿದೆ.

Share Post